ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಮೂರು ಕಂಪನಿಗಳ ನಷ್ಟ ₹ 73,630 ಕೋಟಿ

Last Updated 2 ಜುಲೈ 2022, 19:10 IST
ಅಕ್ಷರ ಗಾತ್ರ

ಬೆಂಗಳೂರು:‌ ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳಲ್ಲಿ, ಮೂರು ಕಂಪನಿಗಳಿಗೆ ಆಗಿರುವ ನಷ್ಟವು ಏಳು ಕಂಪನಿಗಳ ಗಳಿಕೆಗಿಂತಲೂ ಹೆಚ್ಚು.

ಜುಲೈ 1ಕ್ಕೆ ಕೊನೆಗೊಂಡ ವಾರದಲ್ಲಿ ರಿಲಯನ್ಸ್‌,ಐಸಿಐಸಿಐ ಬ್ಯಾಂಕ್‌ ಮತ್ತು ಹಿಂದುಸ್ತಾನ್‌ ಯುನಿಲಿವರ್‌ ಕಂಪನಿಗಳ ಒಟ್ಟಾರೆ ನಷ್ಟವು ₹ 73,630 ಕೋಟಿ. ಇದೇ ಅವಧಿಯಲ್ಲಿ, ಟಿಸಿಎಸ್‌, ಎಸ್‌ಬಿಐ, ಎಲ್‌ಐಸಿ ಸೇರಿದಂತೆ ಏಳು ಕಂಪನಿಗಳ ಒಟ್ಟಾರೆ ಗಳಿಕೆ ₹49,441 ಕೋಟಿ.ಇವುಗಳಲ್ಲಿ ಎಸ್‌ಬಿಐ ಮಾರುಕಟ್ಟೆ ಮೌಲ್ಯವು ₹ 11,200 ಕೋಟಿಯಷ್ಟು ಗರಿಷ್ಠ ಏರಿಕೆ ಕಂಡಿದೆ.

ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಸತತ ಎರಡನೇ ವಾರವೂ ನಷ್ಟ ಅನುಭವಿಸಿದೆ. ಜೂನ್‌ 24ಕ್ಕೆ ಕೊನೆಗೊಂಡ ವಾರದಲ್ಲಿ ₹84,352 ಕೋಟಿ ನಷ್ಟ ಅನುಭವಿಸಿತ್ತು. ಜುಲೈ 1ಕ್ಕೆ ಕೊನೆಗೊಂಡ ವಾರದಲ್ಲಿ ₹62,101 ಕೋಟಿ ನಷ್ಟ ಆಗಿದೆ. ಇದರಿಂದ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹16.29 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಶುಕ್ರವಾರ ತೆರಿಗೆ ವಿಧಿಸಿದೆ. ಇದರಿಂದಾಗಿ ಶುಕ್ರವಾರ ಒಂದೇ ದಿನ ಕಂಪನಿಯ ಷೇರು ಮೌಲ್ಯ ಶೇ 7.14ರಷ್ಟು ಕುಸಿಯಿತು.

ಹಿಂದುಸ್ತಾನ್‌ ಯುನಿಲಿವರ್‌ (ಎಚ್‌ಯುಎಲ್‌) ಮಾರುಕಟ್ಟೆ ಮೌಲ್ಯದಲ್ಲಿ ₹ 4,875 ಕೋಟಿ, ಐಸಿಐಸಿಐ ಬ್ಯಾಂಕ್‌ ಮಾರುಕಟ್ಟೆ ಮೌಲ್ಯದಲ್ಲಿ ₹6,654 ಕೋಟಿ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT