ವಹಿವಾಟು ಚೇತರಿಕೆ

7

ವಹಿವಾಟು ಚೇತರಿಕೆ

Published:
Updated:

ಮುಂಬೈ: ಹಣಕಾಸು, ಆರೋಗ್ಯ ಸೇವೆ ಮತ್ತು ಐ.ಟಿ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಹೀಗಾಗಿ ಎರಡು ದಿನಗಳಿಂದ ಇಳಿಮುಖವಾಗಿದ್ದ ಷೇರುಪೇಟೆ ವಹಿವಾಟು ಮಂಗಳವಾರ ಮತ್ತೆ ಚೇತರಿಸಿಕೊಂಡಿತು.

ಡಾಲರ್‌ ಎದುರು ರೂಪಾಯಿ ಮೌಲ್ಯ ₹ 70ರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೀಗಿದ್ದರೂ ಜುಲೈ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಕೆಯಾಗಿರುವುದು ಹೂಡಿಕೆ
ದಾರರಲ್ಲಿ ಉತ್ಸಾಹ ಮೂಡಿಸಿತು. ಟರ್ಕಿ ಕರೆನ್ಸಿ ಸ್ವಲ್ಪ ಚೇತರಿಸಿಕೊಂಡಿರುವುದು ಸಹ ಸಕಾರಾತ್ಮಕ ವಹಿವಾಟಿಗೆ ನೆರವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 207 ಅಂಶ ಏರಿಕೆ ಕಂಡು 37,852 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಹಿಂದಿನ ಎರಡು ವಹಿವಾಟು ಅವಧಿಗಳಲ್ಲಿ ಸಂವೇದಿ ಸೂಚ್ಯಂಕವು 379 ಅಂಶಗಳಷ್ಟು ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 79 ಅಂಶ ಹೆಚ್ಚಾಗಿ 11,435 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಏಷ್ಯಾದ ಷೇರುಪೇಟೆಗಳಲ್ಲಿ ಮಿಶ್ರ ವಹಿವಾಟು ನಡೆಯಿತು. ಯುರೋಪ್‌ ಷೇರುಪೇಟೆಗಳಲ್ಲಿ ಆರಂಭದಲ್ಲಿ ಎಚ್ಚರಿಕೆಯ ವಹಿವಾಟು ನಡೆದರೂ, ನಂತರ ಉತ್ತಮ ಗಳಿಕೆ ಕಂಡವು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !