ನಾಲ್ಕನೇ ವಾರವೂ ಸಕಾರಾತ್ಮಕ ವಹಿವಾಟು

7

ನಾಲ್ಕನೇ ವಾರವೂ ಸಕಾರಾತ್ಮಕ ವಹಿವಾಟು

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಾರವೂ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 38,022 ಅಂಶಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತ್ತು. 78 ಅಂಶಗಳಷ್ಟು ಅಲ್ಪ ಗಳಿಕೆ ಕಂಡು, 37,947 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ. ಹಿಂದಿ ಮೂರು ವಾರಗಳಲ್ಲಿ ಸೂಚ್ಯಂಕ 1,372 ಅಂಶಗಳಷ್ಟು ಏರಿಕೆ ಕಂಡುಕೊಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 41 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 11,470 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಟರ್ಕಿ ಮತ್ತು ಭಾರತದ ಕರೆನ್ಸಿ ಮೌಲ್ಯ ಕುಸಿತದಿಂದ ದೇಶದ ಷೇರುಪೇಟೆಗಳಲ್ಲಿ ಚಂಚಲ ವಹಿವಾಟು ನಡೆಯಿತು. ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 70.40ಕ್ಕೆ ಕುಸಿತ ಕಂಡಿತ್ತು. ಹಣಕಾಸು, ಲೋಹ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಷೇರುಗಳು ಹೆಚ್ಚಿನ ಮಾರಾಟದದ ಒತ್ತಡಕ್ಕೆ ಒಳಗಾದವು.

ಜುಲೈ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಮುಖವಾಗಿರುವುದು ಷೇರುಪೇಟೆಯಲ್ಲಿ ಸಕಾರಾತ್ಮಕ ಭಾವನೆಯನ್ನು ಕಾಯ್ದುಕೊಳ್ಳುವಂತೆ ಮಾಡಿತು. 

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಗಳಿಕೆಯು ಮಾರುಕಟ್ಟೆಯ ನಿರೀಕ್ಷೆಯಂತೆಯೇ ಇರುವುದು ಸಹ ಗೂಳಿ ಓಟಕ್ಕೆ ಬೆಂಬಲ ನೀಡಿತು.

ಅಮೆರಿಕ ಮತ್ತು ಚೀನಾ ದೇಶಗಳು ಮಾತುಕತೆ ಮೂಲಕ ವಾಣಿಜ್ಯ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಮುಂದಾಗಿವೆ. ಇದು ಹೂಡಿಕೆದಾರರಲ್ಲಿ ಮೂಡಿಸಿದ್ದ ಜಾಗತಿಕ ವಾಣಿಜ್ಯ ಸಮರದ ಆತಂಕವನ್ನೂ ಕಡಿಮೆ ಮಾಡಿದೆ.

ವಹಿವಾಟಿನ ವಿವರ
* ₹147 ಕೋಟಿ – ವಿದೇಶಿ ಹೂಡಿಕೆದಾರರು ಖರೀದಿಸಿದ ಷೇರುಗಳ ಮೌಲ್ಯ
* ₹17,811 ಕೋಟಿ – ಬಿಎಸ್‌ಇ ವಹಿವಾಟು ಮೊತ್ತ
* ₹1.24 ಲಕ್ಷ ಕೋಟಿ – ನಿಫ್ಟಿ ವಹಿವಾಟು ಮೊತ್ತ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !