ಸೋಮವಾರ, ಆಗಸ್ಟ್ 2, 2021
21 °C

ರಿಲಯನ್ಸ್‌ ಷೇರು ಮಾರಾಟದ ಒತ್ತಡ: ಯೂ ಟರ್ನ್‌ ಹೊಡೆದ ಸೂಚ್ಯಂಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಾರುಕಟ್ಟೆ ಮೌಲ್ಯದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಷೇರುಗಳು ಬುಧವಾರ ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ದೇಶದ ಷೇರುಪೇಟೆಗಳು ಗಳಿಕೆ ಕಾಯ್ದುಕೊಳ್ಳಲು ವಿಫಲವಾಗಿವೆ.

ಕೋವಿಡ್‌–19 ನಿಯಂತ್ರಣಕ್ಕೆ ಲಸಿಕೆ ಶೀಘ್ರವೇ ಲಭ್ಯವಾಗುವ ವಿಶ್ವಾಸದಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಇದರಿಂದ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 777 ಅಂಶಗಳಷ್ಟು ಏರಿಕೆ ಕಂಡಿತ್ತು. ಆದರೆ ದಿನದ ವಹಿವಾಟು ಮುಕ್ತಾಯವಾಗಲು ಒಂದು ಗಂಡೆ ಇರುವಂತೆ ಸೂಚ್ಯಂಕ ‘ಯೂ ಟರ್ನ್‌’ ಹೊಡೆಯಿತು. ಕೇವಲ 18.75 ಅಂಶ ಹೆಚ್ಚಾಗಿ 36,051.81 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 10.85 ಅಂಶ ಹೆಚ್ಚಾಗಿ 10,618 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಷೇರು ಮಧ್ಯಂತರ ವಹಿವಾಟಿನಲ್ಲಿ ₹1,978.50ರಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಕಂಪನಿಯ ವಾರ್ಷಿಕ ಸಭೆಯ ಬಳಿಕ ಹೂಡಿಕೆದಾರರು ಲಾಭಗಳಿಕೆಗೆ ಮುಂದಾಗಿದ್ದರಿಂದ ಶೇ 4ರಷ್ಟು ಕುಸಿತ ಕಂಡಿತು.

ಭಾರ್ತಿ ಏರ್‌ಟೆಲ್‌, ಒಎನ್‌ಜಿಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌ ಮತ್ತು ಎಸ್‌ಬಿಐ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು