ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ಹೆಚ್ಚಿಸದ ವಹಿವಾಟು

ಮುಂಬೈ ಷೇರುಪೇಟೆ ಸೂಚ್ಯಂಕದ ಏರಿಳಿತ: ವಾರದ ಗಳಿಕೆ ಅತ್ಯಲ್ಪ
Last Updated 23 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳಲ್ಲಿ ವಾರದ ವಹಿವಾಟು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ನಡೆದರೂ, ಹೂಡಿಕೆದಾರರ ಸಂಪತ್ತಿನಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವಾರದಲ್ಲಿ ಕೇವಲ 2 ಅಂಶ ಹೆಚ್ಚಾಗಿ 40,359 ಅಂಶಗಳಿಗೆ ತಲುಪಿದೆ. ಷೇರುಪೇಟೆಯು 40 ಸಾವಿರದ ಗಡಿಗಿಂತಲೂ ಮೇಲ್ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಈ ಬೆಳವಣಿಗೆಯು ಹೂಡಿಕೆದಾರರ ಸಂಪತ್ತಿನಲ್ಲಾಗಲಿ ಅಥವಾ ಒಟ್ಟಾರೆ ಮಾರುಕಟ್ಟೆಯ ಮೌಲ್ಯದಲ್ಲಾಗಲಿ ಕಂಡುಬರುತ್ತಿಲ್ಲ.

ನವೆಂಬರ್‌ 18ರ ಅಂತ್ಯಕ್ಕೆ ಷೇರುಪೇಟೆಯ ಬಂಡವಾಳ ಮೌಲ್ಯ ₹152.44 ಲಕ್ಷ ಕೋಟಿಗಳಷ್ಟಿತ್ತು. ಇದು ನವೆಂಬರ್‌ 22ರ ಅಂತ್ಯಕ್ಕೆ ₹ 152.77 ಲಕ್ಷ ಕೋಟಿಗೆ ಅತ್ಯಲ್ಪ ಏರಿಕೆ ಕಂಡಿದೆ. ನವೆಂಬರ್ 1 ರಿಂದ 22ರವರೆಗಿನ ವಹಿವಾಟನ್ನು ಗಮನಿಸಿದರೆ, ಹೂಡಿಕೆದಾರರ ಸಂಪತ್ತಿನಲ್ಲಿ ₹ 1.37 ಲಕ್ಷ ಕೋಟಿಗಳಷ್ಟು ಕರಗಿದ್ದು, ಮಾರುಕಟ್ಟೆ ಮೌಲ್ಯ ₹ 154.10 ಲಕ್ಷ ಕೋಟಿಗಳಿಂದ ₹ 152.77 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಕೆಲವು ಕಂಪನಿಗಳ ಷೇರುಗಳಲ್ಲಿ ಕಂಡುಬರುತ್ತಿರುವ ಲಾಭ ಗಳಿಕೆ ಉದ್ದೇಶದ ವಹಿವಾಟಿನಿಂದಾಗಿ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಸೂಚ್ಯಂಕಗಳು ಏರಿಕೆ ಕಂಡರೂ ವಹಿವಾಟಿನ ಒಟ್ಟಾರೆ ಮೊತ್ತದಲ್ಲಿ ಹೆಚ್ಚಿನ ವ್ಯತ್ಯಾಸವಾಗುತ್ತಿಲ್ಲ.

ಎಫ್‌ಪಿಐ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ವಾರದ ವಹಿವಾಟಿನಲ್ಲಿ
₹ 5,897 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ ₹ 1,186 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT