ಸೋಮವಾರ, ಸೆಪ್ಟೆಂಬರ್ 20, 2021
21 °C

ಟಿಸಿಎಸ್‌: ₹ 16 ಸಾವಿರ ಕೋಟಿ ಮೌಲ್ಯದ ಷೇರು ಮರುಖರೀದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರತಿ ಷೇರಿಗೆ ₹ 3,000 ನಿಗದಿ ಮಾಡಿ, ಒಟ್ಟು ₹ 16 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮರಳಿ ಖರೀದಿ ಮಾಡುತ್ತಿರುವುದಾಗಿ ಭಾರತದ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಬುಧವಾರ ಪ್ರಕಟಿಸಿದೆ. 

2017 ಮತ್ತು 2018ರಲ್ಲಿಯೂ ಟಿಸಿಎಸ್‌ ತನ್ನ ಷೇರುಗಳನ್ನು ಮರುಖರೀದಿ ಮಾಡಿತ್ತು. ‘ಕಂಪನಿಯ ಒಟ್ಟು ₹ 5.33 ಕೋಟಿ ಷೇರುಗಳನ್ನು ಮರಳಿ ಖರೀದಿಸಲು ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ಒಪ್ಪಿದ್ದಾರೆ’ ಎಂದು ಟಿಸಿಎಸ್‌ ತಿಳಿಸಿದೆ.

ಈ ನಡುವೆ, ತಾನು ಕೂಡ ಷೇರುಗಳನ್ನು ಮರು ಖರೀದಿ ಮಾಡುವ ಪ್ರಸ್ತಾವನೆಯನ್ನು ಪರಿಗಣಿಸುವುದಾಗಿ ವಿಪ್ರೊ ಕಂಪನಿ ತಿಳಿಸಿದೆ. ಟಿಸಿಎಸ್‌ನ ಆಡಳಿತ ಮಂಡಳಿಯು ಪ್ರತಿ ಷೇರಿಗೆ ₹ 12ರಂತೆ ಮಧ್ಯಂತರ ಡಿವಿಡೆಂಡ್ ನೀಡಲು ಕೂಡ ಒಪ್ಪಿಗೆ ಸೂಚಿಸಿದೆ. 

ಟಿಸಿಎಸ್‌ನ ಸೆಪ್ಟೆಂಬರ್‌ ತ್ರೈಮಾಸಿಕದ ಲಾಭದ ಪ್ರಮಾಣದಲ್ಲಿ ಶೇಕಡ 4.9ರಷ್ಟು ಹೆಚ್ಚಳ ಆಗಿದೆ. ಈ ಅವಧಿಯಲ್ಲಿ ಕಂಪನಿಯು ಒಟ್ಟು ₹ 8,433 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 8,042 ಕೋಟಿ ಲಾಭವನ್ನು ಕಂಪನಿ ಗಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು