ನವದೆಹಲಿ: ಆಹಾರ ವಸ್ತುಗಳಾದ ಉಪ್ಪಿನಕಾಯಿ, ಸಾಸಿವೆ ಸಾಸ್, ಮಧುಮೇಹದ ಚಿಕಿತ್ಸೆಗೆ ಬಳಸುವ ಇನ್ಸುಲಿನ್, ಎಲೆಕ್ಟ್ರಾನಿಕ್ ವಸ್ತುವಾದ ಪ್ರಿಂಟರ್, ₹ 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್ ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ.

ಭಾನುವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ 16ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇನ್ಸುಲಿನ್ ಮತ್ತು ಅಗರಬತ್ತಿ ಮೇಲಿನ ತೆರಿಗೆ ದರವನ್ನು ಶೇಕಡ 18ರಿಂದ 5ಕ್ಕೆ ಇಳಿಕೆ ಮಾಡಲಾಗಿದೆ. ₹ 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್‌ಗೆ ಇನ್ನು ಶೇಕಡ 18ರ ತೆರಿಗೆ ಅನ್ವಯವಾಗಲಿದೆ. ಈ ಹಿಂದೆ ಶೇಕಡ 28ರಷ್ಟು ತೆರಿಗೆ ವಿಧಿಸಲು ಪ್ರಸ್ತಾವಿಸಲಾಗಿತ್ತು.

ಉಪ್ಪಿನಕಾಯಿ, ಸಾಸಿವೆ ಸಾಸ್ ಮತ್ತು ಮೊರಬ್ಬಾಕ್ಕೆ ಈ ಹಿಂದೆ ಪ್ರಸ್ತಾವಿಸಲಾಗಿದ್ದ ಶೇಕಡ 18ರ ತೆರಿಗೆಗೆ ಬದಲಾಗಿ ಶೇಕಡ 12ರ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.

₹ 75 ಲಕ್ಷ ಮತ್ತು ಅದಕ್ಕಿಂತ ಕಡಿಮೆ ವಹಿವಾಟು ನಡೆಸುವ ವ್ಯಾಪಾರಿಗಳಿಗೆ, ರೆಸ್ಟೋರೆಂಟ್ ಮಾಲೀಕರಿಗೆ ಮತ್ತು ಉತ್ಪದನಾ ಕಪೆನಿಗಳ ಮಾಲೀಕರಿಗೆ ಶೇಕಡ 1, 2 ಮತ್ತು 5ರ ದರದಲ್ಲಿ ತೆರಿಗೆ ಪಾವತಿಸುವ ಯೋಜನೆಯ ಆಯ್ಕೆಯ ಅವಕಾಶ ನೀಡಲಾಗಿದೆ.

ರೇಖಾಚಿತ್ರ ಪುಸ್ತಕಕ್ಕಿಲ್ಲ ತೆರಿಗೆ: ಶಾಲಾ ಮಕ್ಕಳ ರೇಖಾಚಿತ್ರ ಪುಸ್ತಕಕ್ಕೆ ಶೇಕಡ 12ರ ತೆರಿಗೆ ವಿಧಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಇದನ್ನು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.