ಹೊಸ ತಂತ್ರಜ್ಞಾನವು ಇಸ್ರೇಲ್ ನವೋದ್ಯಮಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಜೊತೆಗೆ ಭಾರತದ ಮಾರುಕಟ್ಟೆಯ ಅಗತ್ಯ, ಅವಕಾಶ ಮತ್ತು ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರ ಸೂಚಿಸಲಿದೆ. ಪ್ರಬಲ ವ್ಯಾಪಾರ ಉದ್ದೇಶ, ಕೌಶಲ ಹೊಂದಿರುವ ಇಸ್ರೇಲ್ ತಂತ್ರಜ್ಞಾನದ ಹೊಸ ಮಾದರಿಗಳ ಬಳಕೆ, ಭವಿಷ್ಯದ ತಾಂತ್ರಿಕ ಜ್ಞಾನ ಹಾಗೂ ಸಾಮರ್ಥ್ಯವನ್ನು ತರಬೇತಿ, ಕಾರ್ಯಾಗಾರಗಳ ಮೂಲಕ ಒದಗಿಸಿಕೊಡುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.