ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎಫ್: ಲಗಾರ್ಡ್ ಆಯ್ಕೆ

Last Updated 29 ಜೂನ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ತೀವ್ರ ಕುತೂಹಲ ಕೆರಳಿಸಿದ್ದ  ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಮೊಟ್ಟ ಮೊದಲ ಮಹಿಳಾ ಮುಖ್ಯಸ್ಥೆಯಾಗಿ  ಫ್ರಾನ್ಸ್‌ನ ಹಣಕಾಸು ಸಚಿವೆ ಕ್ರಿಸ್ಟೀನ್ ಲಗಾರ್ಡ್ (57)  ಆಯ್ಕೆಯಾಗಿದ್ದಾರೆ.

1944ರಲ್ಲಿ `ಐಎಂಎಫ್~ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಸ್ಥರಾಗಿ ಆಯ್ಕೆಯಾಗುತ್ತಿರುವ ಮೊದಲ ಮಹಿಳೆ ಲಗಾರ್ಡ್. ಮೆಕ್ಸಿಕನ್ ಸೆಂಟ್ರಲ್ ಬ್ಯಾಂಕಿನ ಗವರ್ನರ್ ಅಗಸ್ಟಿನ್ ಕ್ರಿಸ್ಟೀನ್ಸ್ ಕೂಡ ಅಂತಿಮ ಸ್ಪರ್ಧಾ ಕಣದಲ್ಲಿದ್ದರು. ಆದರೆ, 24 ಸದಸ್ಯರನ್ನೊಳಗೊಂಡ `ಐಎಂಎಫ್~ ಕಾರ್ಯಕಾರಿ ಮಂಡಳಿ ಅಂತಿಮವಾಗಿ ಲಗಾರ್ಡ್ ಅವರನ್ನು ಆಯ್ಕೆ ಮಾಡಿತು. ಲಗಾರ್ಡ್ ಅವರ ಐದು ವರ್ಷಗಳ ಅವಧಿ ಜುಲೈ 5ರಿಂದ ಪ್ರಾರಂಭವಾಗಲಿದೆ.

ಲೈಂಗಿಕ ಆರೋಪದ ಹಿನ್ನೆಲೆಯಲ್ಲಿ ಡೊಮಿನಿಕ್ ಸ್ಟ್ರಾಸ್ ಕಾನ್  `ಐಎಂಎಫ್~ಮುಖ್ಯಸ್ಥ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಈ ಬಾರಿ ಯೂರೋಪ್ ಹೊರಗಿನವರಲ್ಲಿ ಒಬ್ಬರು `ಐಎಂಎಫ್~ ಮುಖ್ಯಸ್ಥರಾಗಬೇಕು ಎನ್ನುವ ಬೇಡಿಕೆ (ಬ್ರೆಜಿಲ್, ರಷ್ಯಾ, ಚೀನಾ ಮತ್ತು ಭಾರತ)  `ಬ್ರಿಕ್~ ದೇಶಗಳಿಂದ ವ್ಯಕ್ತವಾಗಿತ್ತು. ಆದರೆ, ಅನೇಕ  ಕಾರಣಗಳಿಗೆ ಅಂತಿಮವಾಗಿ  ಲಗಾರ್ಡ್ ಅವರನ್ನು ಆಯ್ಕೆ ಮಾಡಲಾಗಿದೆ. ಯೂರೋಪ್ ಬಿಕ್ಕಟ್ಟಿಗೆ ಸ್ಪಂದಿಸುವುದು ಲಗಾರ್ಡ್ ಮುಂದಿರುವ ತಕ್ಷಣದ ಸವಾಲು ಆಗಿದೆ. ಸದ್ಯಕ್ಕೆ  `ಐಎಂಎಫ್~ 187 ಸದಸ್ಯ ದೇಶಗಳಿಗೆ ಸೇವೆ ಒದಗಿಸುತ್ತಿದೆ.

ಪ್ರಣವ್ ಅಭಿನಂದನೆ: ಫ್ರಾನ್ಸ್‌ನ ಹಣಕಾಸು ಸಚಿವೆ ಕ್ರಿಸ್ಟೀನ್  ಲಗಾರ್ಡ್ ಅವರು `ಐಎಂಎಫ್~ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದಕ್ಕೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ. 

ಲಗಾರ್ಡ್ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ, `ಐಎಂಎಫ್~ ಮುಖ್ಯಸ್ಥ ಹುದ್ದೆ ಸ್ಪರ್ಧೆಗೆ ಬೆಂಬಲ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT