ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ ವಾಸ್ತು

Last Updated 31 ಜನವರಿ 2012, 19:30 IST
ಅಕ್ಷರ ಗಾತ್ರ

 ಮಂಜುಳ ಆರ್, ಬೆಂಗಳೂರು: ಜನನ 29-2-1984, ಸಮಯ 50 ಸಂಜೆ.
ಪ್ರಶ್ನೆ: ಮದುವೆ ಯಾವಾಗ ತಿಳಿಸಿ.
ಉತ್ತರ:
ಇವರದು ಕರ್ಕ ಲಗ್ನ, ಶ್ರವಣ ನಕ್ಷತ್ರ ಮಕರ ರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ಲಗ್ನಾಧಿಪತಿ ಅವಯೋಗಿ ಚಂದ್ರ, ಕೇತು, ವಕ್ರೀ, ಯೋಗಿ, ಉಚ್ಛನಾದ ಶನಿ ಮತ್ತು ಬಾಧಕಾಧಿಪತಿ ಶುಕ್ರ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಚಂದ್ರರು ಅವಯೋಗಿಯಾಗಿ ಶತ್ರುಕ್ಷೇತ್ರದಲ್ಲಿ ಸ್ವನಕ್ಷತ್ರದಲ್ಲಿ ಶುಕ್ರ ರೊಡನೆ ಸಪ್ತಮಸ್ಥಿತರಿದ್ದು ಕುಜ ಮತ್ತು ರಾಹು ವೀಕ್ಷಿತರಾಗಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಕಳತ್ರಸ್ಥಾನ ಸಪ್ತಮವು ಮಕರ ವಾಗಿದ್ದು ಇಲ್ಲಿ ಲಗ್ನಾಧಿಪತಿ ಚಂದ್ರ ಮತ್ತು ಕಳತ್ರಕಾರಕ ಶುಕ್ರ ಸ್ಥಿತರಿದ್ದು ಮೇಲೆ ತಿಳಿಸಿದಂತೆ ಪೀಡಿತರಾಗಿದ್ದಾರೆ. ಸಪ್ತಮಾಧಿಪತಿ ಶನಿ ಯೋಗಿಯಾದರೂ ವಕ್ರೀ ಆಗಿ ಯೋಗಕಾರಕ ಕುಜರೊಡನೆ ಭಾಗ್ಯಾಧಿಪತಿ ಗುರು ನಕ್ಷತ್ರದಲ್ಲಿಸುಖಸ್ಥಾನ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಕುಂಭವಾಗಿದ್ದು ನಿಧನಾಂಶದಲ್ಲಿದೆ. ಇಲ್ಲಿ ದಗ್ಧರಾಶ್ಯಾಧಿಪತಿ ರವಿ ಸ್ಥಿತರಿದ್ದು ವರ್ಗೋತ್ತಮ ರಾಗಿದ್ದಾರೆ. ಲಗ್ನಾಧಿಪತಿ ಶನಿ ತೃತೀಯದಲ್ಲಿ ನೀಚರಾಗಿ, ವಕ್ರೀ ಆಗಿ ಸ್ಥಿತರಿದ್ದಾರೆ. ಕಾರಕ ಶುಕ್ರರು ಪಂಚಮದಲ್ಲಿದ್ದರೂ ರಾಹು ಮತ್ತು ಕುಜರೊಡನೆ ಸ್ಥಿತರಿದ್ದಾರೆ. ಇವು ದಾಂಪತ್ಯದಲ್ಲಿ ಏರು ಪೇರುಗಳ ಸೂಚಕವಾಗಿದೆ. 

ಇವೆಲ್ಲವೂ ಮದುವೆ ನಿಧಾನವಾಗಲು, ಪ್ರೇಮ ಪ್ರಕರಣ ಕಾರಣ ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಇವರು ಹಿರಿಯರು ಒಪ್ಪಿಗೆಯ ಮೇಲೆ ಹೊಂದಾಣಿಕೆಯ ಜೀವನಕ್ಕೆ ಸಿದ್ಧರಾದರೆ, ಮೇ 2012ರ ನಂತರ ಗುರುಬಲ ಬರುವಾಗ ಇವರ ಮದುವೆ  ನೆರವೇರುವುದು.  

ಇವರಿಗೆ ಈಗ ಗುರು ದಶಾ ಗುರು ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿಚತುರ್ಥ ಗುರು, ದಶಮ ಶನಿ ಇದ್ದಾರೆ. ಇವು ಶುಭಾಶುಭಕರ.

ಪರಿಹಾರ: ಹವಳ ಧರಿಸಿ. ಗ್ರಾಮದೇವತೆಯನ್ನು ಪೂಜಿಸಿ. ಲಕ್ಷ್ಮೀ ಅಷ್ಟೋತ್ತರ ಪಠಿಸಿ. ಗಣಪತಿ ಮಂತ್ರ ಪಠಿಸಿ. ವೆಂಕಟೇಶ್ವರನ ದರ್ಶನ ಮಾಡಿ.

ಗೋಪಿ ಅರಸ್, ಮೈಸೂರು: ಜನನ 20-6-1992, ಸಮಯ 12-01 ರಾತ್ರಿ.
ಪ್ರಶ್ನೆ: ಬಿಕಾಂ ಓದುತ್ತಿದ್ದೆೀನೆ. ಮುಂದಿನ ವಿದ್ಯೆ, ಉದ್ಯೋಗದ ಬಗ್ಗೆ ತಿಳಿಸಿ.
ಉತ್ತರ:
ಇವರದು ಕುಂಭಲಗ್ನ, ಧನಿಷ್ಠ ನಕ್ಷತ್ರ ಮಕರರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ಗುರು ಮತ್ತು ಕೇತು ವೀಕ್ಷಿಸುತ್ತಾರೆ. ಲಗ್ನಾಧಿಪತಿ ಶನಿ ವಕ್ರೀ ಆಗಿ, ಯೋಗಿಯಾಗಿ ಅವಯೋಗಿ ಚಂದ್ರರೊಡನೆ, ಕುಜ ನಕ್ಷತ್ರದಲ್ಲಿ, ವ್ಯಯಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಉನ್ನತ ವಿದ್ಯಾಸ್ಥಾನ ಪಂಚಮವು ದಗ್ಧರಾಶಿಯಾದ ಮಿಥುನವಾಗಿದ್ದು ಇಲ್ಲಿಪಂಚಮಾಧಿಪತಿ ವಿದ್ಯಾಕರಕ ಬುಧರು ಗುರು ನಕ್ಷತ್ರದಲ್ಲಿ ಪುಷ್ಕರ ನವಾಂಶ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇವರ ಭಾಗ್ಯಸ್ಥಾನ ತುಲಾ ಆಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಭಾಗ್ಯಾಧಿಪತಿ ಶುಕ್ರರು ಚತುರ್ಥದಲ್ಲಿ ಕೇತು ಮತ್ತು ವೈರಿ ರವಿಯೊಡನೆ ಕುಜ ನಕ್ಷತ್ರದಲ್ಲಿ ದಗ್ಧರಾಶಿಯಲ್ಲಿ, ಅಸ್ತರಾಗಿದ್ದಾರೆ. ಇವರನ್ನು ರಾಹು ವೀಕ್ಷಿಸುತ್ತಾರೆ. ಇವರ ವೃತ್ತಿ ಶಿಕ್ಷಣ ಸ್ಥಾನ ಷಷ್ಟವು ಕರ್ಕಾಟಕವಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.ಷಷ್ಟಾಧಿಪತಿ ಚಂದ್ರರು ಅವಯೋಗಿಯಾಗಿ ವೈರಿ ಶನಿಯೊಡನೆ ವ್ಯಯಸ್ಥಿತರಿದ್ದಾರೆ. ಇವು ಉನ್ನತ ವಿದ್ಯೆಗೆ ಪೂರಕವಲ್ಲ.

ಇವರ ಉನ್ನತ ವಿದ್ಯಾ ಸೂಚಕ ಅಂಶ ಕುಂಡಲಿಯ ಲಗ್ನವು ವೃಷಭವಾಗಿದ್ದು ಸುಖಾಂಶದಲ್ಲಿದೆ. ಇಲ್ಲಿ ಯಾವ ಗ್ರಹರೂ ಇಲ್ಲ. ಲಗ್ನಾಧಿಪತಿ ಶುಕ್ರರು ರಾಹು ಮತ್ತು ಕೇತು ಪೀಡಿತರಾಗಿದ್ದಾರೆ. ಕಾರಕ ಬುಧರು ನೀಚಾಂಶದಲ್ಲಿ ಲಾಭದಲ್ಲಿ ಚಂದ್ರ ಮತ್ತು ಕುಜರೊಡನೆ ಸ್ಥಿತರಿದ್ದಾರೆ. ಇವು ಇವರಿಗೆ ವಿದ್ಯೆಗಾಗಿ ಹಣ ಸಿಗುವಲ್ಲಿ ಮತ್ತು ವಿದ್ಯಾರ್ಜನೆಯಲ್ಲಿ ತೊಡಕುಗಳನ್ನು ಸೂಚಿಸುತ್ತದೆ.

ಇವರ ಉದ್ಯೋಗ ಸೂಚಕ ದಶಮವು ವೃಶ್ಚಿಕರಾಶಿಯಾಗಿದ್ದು ಇಲ್ಲಿ ರಾಹು ನೀಚರಾಗಿ ಸ್ಥಿತರಿದ್ದಾರೆ. ದಶಮಾಧಿಪತಿ ಕುಜರು ಧನ ಸ್ಥಾನದಲ್ಲಿ ಕೇತು ನಕ್ಷತ್ರ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ವೃಶ್ಚಿಕವಾಗಿದ್ದು ಕರ್ಮಾಂಶದಲ್ಲಿದೆ. ಲಗ್ನಾಧಿಪತಿ ಕುಜರು ಭಾಗ್ಯ ಸ್ಥಿತರಿದ್ದರೂ ನೀಚಾಂಶದಲ್ಲಿ ಕಾರಕ ರವಿಯೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ.

ಇದರಿಂದ ಇವರಿಗೆ ಹೆಚ್ಚಿನ ಪ್ರಯತ್ನದಿಂದ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.
ಇವರಿಗೆ ರಾಹು ದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಚತುರ್ಥ ಗುರು ದಶಮ ಶನಿ ಇದ್ದಾರೆ. ಅದ್ದರಿಂದ ಹೆಚ್ಚಿನ ಶ್ರದ್ಧೆ ಮತ್ತು ಪ್ರಯತ್ನದಿಂದ ಉತ್ತಮ ವಿದ್ಯೆ ಗಳಿಸಿಕೊಂಡರೆ, 2016 ರ ಹೊತ್ತಿಗೆ ಗುರು ದಶಾದಲ್ಲಿ ಇವರಿಗೆ ಉತ್ತಮ ಉದ್ಯೋಗ ಸಿಗುವುದು.

ಪರಿಹಾರ: ಪಚ್ಛೆ ಹರಳು ಧರಿಸಿ. ಚಾಮುಂಡಿ ಅಷ್ಟೋತ್ತರ ಪಠಿಸಿ. ವೆಂಕಟೇಶ್ವರರನ್ನು ಪೂಜಿಸಿ.

ಮಂಜುನಾಥ ನಾಯ್ಕ, ದಾವಣಗೆರೆ: ಜನನ 25-6-1963, ಸಮಯ 7-30 ರಾತ್ರಿ.
ಪ್ರಶ್ನೆ: ನಾನು ಕೇಂದ್ರ ಸರಕಾರಿ ಉದ್ಯೋಗಿ. ಮನೆ ಕಟ್ಟುವ ಯೋಗ, ವಾಹನ ಯೋಗ ಇದೆಯೇ? ಆರೋಗ್ಯದ ಬಗ್ಗೆ ತಿಳಿಸಿ.
ಉತ್ತರ:
ಇವರದು ಧನು ಲಗ್ನ, ಮಖಾ ನಕ್ಷತ್ರ ಸಿಂಹರಾಶಿ. ಇವರ ಲಗ್ನದಲ್ಲಿ ಕೇತು ಸ್ಥಿತರಿದ್ದು ಇವರನ್ನು ರವಿ ಮತ್ತು ರಾಹು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಗುರು ಸುಖಸ್ಥಾನದಲ್ಲಿ ಸ್ವಕ್ಷೇತ್ರದಲ್ಲಿ ಬುಧ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ವಕ್ರೀ ಶನಿ ಮತ್ತು ಕುಜ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಗೃಹ ಮತ್ತು ವಾಹನ ಯೋಗ ಸ್ಥಾನ ಚತುರ್ಥವು ಮೀನರಾಶಿಯಾಗಿದ್ದು ಇಲ್ಲಿ ಲಗ್ನ, ಚಥುರ್ತಾಧಿಪತಿ ಗುರು ಸ್ವಕ್ಷೇತ್ರದಲ್ಲಿ, ಅವಯೋಗಿ ಬುಧ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ವಕ್ರೀ ಧನಾಧಿಪತಿ ಶನಿ, ಮತ್ತು ಕಾರಕ ಕುಜರು ವೀಕ್ಷಿಸುತ್ತಾರೆ. ವಾಹನ ಕಾರಕ ಶುಕ್ರರು ಸ್ವಕ್ಷೇತ್ರದಲ್ಲಿ, ಷಷ್ಟದಲ್ಲಿ,  ಅಷ್ಟಮಾಧಿಪತಿ ಚಂದ್ರ ನಕ್ಷತ್ರದಲ್ಲಿ ಅವಯೋಗಿ ಬುಧರೊಡನೆ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಇವರ ಗೃಹಸೌಖ್ಯ ಸೂಚಕ ಅಂಶ ಕುಂಡಲಿಯ ಲಗ್ನವು ಮಿಥುನವಾಗಿದ್ದು ಸಪ್ತಮಾಂಶದಲ್ಲಿದೆ. ಲಗ್ನಾಧಿಪತಿ ಬುಧರು, ಶುಕ್ರರೊಡನೆ ಷಷ್ಟಸ್ಥಿತರಿದ್ದಾರೆ. ಕಾರಕ ಕುಜರು ಭಾಗ್ಯಸ್ಥಾನ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. 

ವಾಹನ ಸೂಚಕ ಅಂಶ ಕುಂಡಲಿಯ ಲಗ್ನವು ಕನ್ಯಾ ಆಗಿದ್ದು ಇಲ್ಲಿಲಾಭಾಧಿಪತಿ ಚಂದ್ರ ಸ್ಥಿತರಿದ್ದಾರೆ. ಲಗ್ನಾಧಿಪತಿ ಬುಧರು ಕಾರಕ ಶುಕ್ರ ಮತ್ತು ಶನಿ ಯೊಡನೆ ಲಾಭ ಸ್ಥಿತರಿದ್ದಾರೆ.  ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇದರಿಂದ ಸಾಲಸೋಲಗಳ ನೆರವಿನಿಂದ ಇವರಿಗೆ ಮನೆ ಮತ್ತು ವಾಹನ ಎರಡೂ ಲಭ್ಯವಾಗುವುದು.

ಇವರ ಆರೊಗ್ಯ ಸೂಚಕ ಷಷ್ಟವು ವೃಷಭರಾಶಿಯಾಗಿದ್ದು ಇಲ್ಲಿ ಷಷ್ಟಾಧಿಪತಿ ಶುಕ್ರರು ಅವಯೋಗಿ ಬುಧರೊಡನೆ ಯೋಗಿ ಅಷ್ಟಮಾಧಿಪತಿ ಚಂದ್ರ ನಕ್ಷತ್ರ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ.ಆರೋಗ್ಯ ಕಾರಕ ರವಿ ಬಾಧಕಸ್ಥಾನದಲ್ಲಿ ದಗ್ಧರಾಶಿಯಲ್ಲಿ ಪಾಪಿ ರಾಹು ಒಡನೆ ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರ ಆರೋಗ್ಯ ಸೂಚಕ ಅಂಶ ಕುಂಡಲಿಯ ಲಗ್ನವು ಕರ್ಕಾಟಕವಾಗಿದ್ದು ಅಷ್ಟಮಾಂಶದಲ್ಲಿದೆ ಈ ಲಗ್ನದಲ್ಲಿ ನೀಚ ಕುಜರು ಸ್ಥಿತರಿದ್ದಾರೆ. ಲಗ್ನಾಧಿಪತಿ ಚಂದ್ರರು ದಶಮದಲ್ಲಿ ಪಾಪ ಕರ್ತರಿಗೆ ಒಳಗಾಗಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ಇವರಿಗೆ ಕಣ್ಣಿನ ದೋಷ, ಮಾನಸಿಕ ಒತ್ತಡದಿಂದ ಬರುವ ಕಾಯಿಲೆಗಳ ಬಾಧೆಯನ್ನು ಸೂಚಿಸುತ್ತದೆ.

ಇವರಿಗೆ ಈಗ ಕುಜ ದೆಶೆ ಚಂದ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ತೃತೀಯ ಶನಿ ಭಾಗ್ಯ ಗುರು ಇದ್ದಾರೆ. ಇವು ಶುಭಾಶುಭಕರವಾಗಿದೆ. 2012 ರಲ್ಲಿ ರಾಹು ದೆಶೆ ಪ್ರಾರಂಭ ವಾಗುತ್ತಿದ್ದು ಇವರು ಯೋಗ ಧ್ಯಾನಗಳ ಮೊರೆಹೋಗುವುದು ಅನಿವಾರ್ಯ.
ಪರಿಹಾರ: ಮಾಣಿಕ್ಯ ಧರಿಸಿ. ಆದಿತ್ಯ ಹೃದಯ ಕವಚ ಪಠಿಸಿ.  ಕುಲದೇವತಾ ಶಾಂತಿ ಮಾಡಿಸಿ. ಕನ್ನಿಕಾ ಪರಮೇಶ್ವರಿ ಅಷ್ಟೋತ್ತರ ಪಠಿಸಿ.
 

ಪ್ರಕಾಶ ಆರ್.ಆರ್. ದಾವಣಗೆರೆ: ಮನೆಯ ನಕ್ಷೆ ಕಳಿಸಿದ್ದೇನೆ. ದೋಷವಿದ್ದರೆ ತಿಳಿಸಿ.
ಉತ್ತರ:
ಇವರು ಕಳಿಸಿದ ನಕ್ಷೆಯಂತೆ ಮನೆಯ ದಕ್ಷಿಣಕ್ಕೆ ಉತ್ತರಕ್ಕಿಂತ ಹೆಚ್ಚು ಖಾಲಿ ಸ್ಥಳವಿದೆ. ಇದು ಯಮನ ಸ್ಥಾನವಾಗಿದ್ದು ಅಶುಭಕರ. ಆದ್ದರಿಂದ ಉತ್ತರಕ್ಕಿಂತ ಕಡಿಮೆ ಸ್ಥಳವಾಗುವಂತೆ ಎತ್ತರಿಸಿ ಹೂವಿನ ಗಿಡ ಬೆಳಸಿ. ಮನೆಯ ಮುಖ್ಯದ್ವಾರಕ್ಕೆ ಹೋಗಲು ಮೆಟ್ಟಿಲು ಇದೆ. ಇದಕ್ಕೂ ಪಾಯವಿಲ್ಲದಿದ್ದರೆ ಪೂರ್ವ ಕಡಿತ ಗೊಂಡಂತಾಗುತ್ತದೆ. ಅಲ್ಲದೇ ಇದು ನೀಚ ಶುಕ್ರನ ಸ್ಥಾನದಲ್ಲಿದೆ. ಇದನ್ನು ಪೂರ್ವಕ್ಕೆ ಇರುವ ಬೆಡ್ ರೂಮಿನಲ್ಲಿ ನಿರ್ಮಿಸಿ, ವರಾಂಡವನ್ನು ರೂಮ್ ಆಗಿ ಪರಿವರ್ತಿಸಿಕೊಳ್ಳಿ.

ಈಶಾನ್ಯದ ದೇವಮೂಲೆಯಲ್ಲಿಮೇಲ್ಮಹಡಿಗೆ ಹೋಗಲು ಮೆಟ್ಟಿಲು ಇದೆ. ಇದು ಅಶುಭಕರ. ಇದನ್ನು ದಕ್ಷಿಣದಲ್ಲಿ ನಿರ್ಮಿಸಿಕೊಳ್ಳಿ. ಸ್ನಾನಗೃಹ ಮತ್ತು ಶೌಚಾಲಯ ಕೂಡ ಈಶಾನ್ಯದ ದೇವಮೂಲೆಯಲ್ಲಿದೆ. ಇದೂ ಅಶುಭಕರವಾಗಿದ್ದು ಇದನ್ನು ಪಶ್ಚಿಮ ಅಥವಾ ದಕ್ಷಿಣದಲ್ಲಿ ನಿರ್ಮಿಸಿಕೊಳ್ಳಿ. ಅಡುಗೆಮನೆ ವಾಯುವ್ಯದಲ್ಲಿದೆ. ಇದು ಖರ್ಚುವೆಚ್ಚಗಳನ್ನು ಹೆಚ್ಚಿಸುತ್ತದೆ. ಮನೆಗೆ 10 ಬಿಟ್ಟು ಸಮಸಂಖ್ಯೆಯ ಬಾಗಿಲು ಇರುವುದು ಶುಭಕರ.  ಇವರ ಮನೆಗೆ 10 ಬಾಗಿಲು ಇರುವುದರಿಂದ ಎರಡು ಬಾಗಿಲುಗಳನ್ನು ಕಮಾನು ಆಗಿ ಪರಿವರ್ತಿಸಿ. ಉಳಿದಂತೆ ಇವರ ನಕ್ಷೆ ಸರಿಯಾಗಿದ್ದು ಮೇಲ್ಮಹಡಿಯಲ್ಲೂ ಇದೇ ರೀತಿ ಬದಲಾವಣೆಗಳೊಂದಿಗೆ ನಿರ್ಮಿಸುವುದು ಸೂಕ್ತ. ಇಲ್ಲಿ ಸಾಧ್ಯವಿದ್ದರೆ ಆಗ್ನೇಯದಲ್ಲಿ ಅಡುಗೆ ಮನೆ ನಿರ್ಮಿಸಿ ಕೊಳ್ಳಿ.

ವಾಸುದೇವ, ಗುಂಡ್ಲುಪೇಟೆ: 30್ಡ40  ನಿವೇಶನವಿದೆ. ದಕ್ಷಿಣಕ್ಕೆ ರಸ್ತೆ ಇದೆ. ಜನ್ಮ ನಕ್ಷತ್ರ ಶ್ರವಣ. ಮನೆ ಕಟ್ಟಿಸಬಹುದೇ ತಿಳಿಸಿ.

ಉತ್ತರ: ವೃಷಭ, ಕನ್ಯಾ, ಮಕರ ರಾಶಿಯವರಿಗೆ ದಕ್ಷಿಣ ನಿವೇಶನ ಶುಭಕರ. ಆದ್ದರಿಂದ ನೀವು ಇಲ್ಲಿ ಮನೆ ಕಟ್ಟಿಸಬಹುದು. ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಖಾಲಿ ಸ್ಥಳವಿರುವಂತೆ ಕಂಪೌಂಡ ಕಟ್ಟಿಸಿ. ಮನೆಯ ಮುಖ್ಯ ದ್ವಾರ ದಕ್ಷಿಣ ಪೂರ್ವಕ್ಕಿರಲಿ. ಅಡುಮನೆ ಆಗ್ನೇಯದಲ್ಲೂ ಯಜಮಾನರ ಕೋಣೆ ನೈರುತ್ಯದಲ್ಲೂ ಇರಲಿ. ಸಂಪು, ಪೂರ್ವ , ಉತ್ತರ ಆಥವಾ ಈಶಾನ್ಯಕ್ಕಿರಲಿ.

ಮೆಟ್ಟಿಲು ದಕ್ಷಿಣ ಅಥವಾ ಪಶ್ಚಿಮಕ್ಕಿರಲಿ. ಸ್ನಾನಗೃಹ, ಶೌಚಾಲಯ ಕೂಡ ದಕ್ಷಿಣ ಅಥವಾ ಪಶ್ಚಿಮಕ್ಕಿರಲಿ. ಮನೆಗೆ ಬಾಗಿಲು-ಕಿಡಕಿ 10 ಬಿಟ್ಟು, ಸಮಸಂಖ್ಯೆಯಲ್ಲಿ ಇರಲಿ. ದೇವರ ಕೋಣೆ ಈಶಾನ್ಯಕ್ಕಿರಲಿ. ಮೇಲ್ತೊಟ್ಟಿ ನೈರುತ್ಯಕ್ಕಿರಲಿ. ಈ ರೀತಿ ನಕ್ಷೆ ತಯಾರಿಸಿಕೊಂಡು ವಾಸ್ತು ತಜ್ಞರ ಸಲಹೆ ಪಡೆದು ಮನೆ ನಿರ್ಮಿಸುವುದು ಕ್ಷೇಮಕರ.

 ದೂರವಾಣಿ ಸಂಖ್ಯೆ 080-2664 3244 /  2665 3244 ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30

ಪ್ರಶ್ನೆ ಈ  ವಿಳಾಸಕ್ಕೆ ಕಳುಹಿಸಿ: ಸಂಪಾದಕರು, ಪ್ರಜಾವಾಣಿ, ಜ್ಯೋತಿಷ ವಿಭಾಗ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT