ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ - ವಾಸ್ತು

Last Updated 26 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಎನ್. ಲಕ್ಷ್ಮಿ, ಕೆ.ಆರ್. ಪುರಮ್: ನಿವೇಶನದ ನಕ್ಷೆ ಕಳಿಸಿದ್ದೇನೆ. ಗೃಹಯೋಗ, ವಾಸ್ತು ದೋಷ ತಿಳಿಸಿ.
ಉತ್ತರ: ಇವರದು ಪೂರ್ವ ನಿವೇಶನವಾಗಿದೆ.  ದಕ್ಷಿಣದಲ್ಲಿ ನೀರಿನಕಾಲುವೆ ಇರುವುದು ತಪ್ಪು.  ಇವರದು ಮೀನರಾಶಿಯಾಗಿರುವುದರಿಂದ ಉತ್ತರ/ಪೂರ್ವ ನಿವೇಶನ ಇವರಿಗೆ ಶುಭಕರ.  ಇವರು ಕೊಟ್ಟಿರುವ ಮಾಹಿತಿಯಂತೆ ಇವರದು ಮಿಥುನಲಗ್ನ, ಚಥುರ್ತದಲ್ಲಿ ರಾಹು, ಚಥುರ್ತಾಧಿಪತಿ ಪಂಚಮದಲ್ಲಿ ಇದ್ದಾರೆ.

ಗೃಹಕಾರಕ ಕುಜರು ವಕ್ರೀ ಆಗಿ ವ್ಯಯಸ್ಥಿತರಿದ್ದಾರೆ. ಇದು ಮನೆ ಹೊಂದಲು ಅಷ್ಟು ಶುಭಕರವಲ್ಲ. ಮನೆಕಟ್ಟುವುದಾದರೆ ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಖಾಲಿ ಸ್ಥಳ ಬಿಟ್ಟು ಆಯತಾಕಾರದಲ್ಲಿ ಪಾಯನಿರ್ಮಿಸಿ ಮನೆ ಕಟ್ಟಿಕೊಳ್ಳಿ. ಅಲ್ಲದೇ ನಿಮ್ಮ ನಿವೇಶದ ಮಟ್ಟಿಗಾದರೂ ಕಾಲುವೆಯನ್ನು ಮೇಲೆ ಕಾಣದಂತೆ ಮುಚ್ಚಿಸಿ. ನಿವೇಶನ ಪೂರ್ವ ಮತ್ತು ಉತ್ತರಕ್ಕೆ ಇಳಿಜಾರು ಇರಬೇಕು. ಹಾಗಿಲ್ಲದಿದ್ದರೆ  ನಿವೇಶನವನ್ನು ಈಶಾನ್ಯ ಮೂಲೆಯ ಮಟ್ಟಕ್ಕೆ ಸಮತಟ್ಟು ಗೊಳಿಸಿಕೊಳ್ಳಿ.  ಸೂಕ್ತ ವಾಸ್ತು ತಜ್ಞರನ್ನು ಸಂಪರ್ಕಿಸಿ, ನಿಮ್ಮ ಕುಟುಂಬದಲ್ಲಿ ಉತ್ತಮ ಗೃಹಯೋಗವಿರುವವರ ಹೆಸರಲ್ಲಿ ಮನೆ ಕಟ್ಟುವುದು ಶ್ರೇಯಸ್ಕರ.

ಎ.ಎನ್ ಭಾಗ್ಯ, ತುಮಕೂರು: ಮನೆಯ ನಕ್ಷೆ ಕಳಿಸಿದ್ದೇನೆ. ವಾಸ್ತು ಪ್ರಕಾರ ಸರಿಯಾಗಿದೆಯೋ ತಿಳಿಸಿ.
ಉತ್ತರ: ಇವರು ಕಳಿಸಿದ ನಕ್ಷೆಯಂತೆ ಇದು ದಕ್ಷಿಣ ನಿವೇಶನವಾಗಿದೆ. ಇದರಿಂದ ವೃಷಭ, ಕನ್ಯಾ, ತುಲಾ, ಕುಂಭರಾಶಿಯವರಿಗೆ ಮಾತ್ರ ಇದು ಸರಿಹೊಂದುತ್ತದೆ.
 
ಇವರ ನಕ್ಷೆಯಲ್ಲಿ ಪಾಯ ಆಯತಾಕಾರವಾಗಿಲ್ಲ. ಪಾಯ ಆಯತಾಕಾರವಾಗಿರುವುದು ಅವಶ್ಯಕ. ಅಲ್ಲದೇ ಪೂರ್ವ ಮತ್ತು ಉತ್ತರದಲ್ಲಿ ಉಳಿದ ದಿಕ್ಕಿಗಿಂತ ಹೆಚ್ಚು ಖಾಲಿ ಸ್ಥಳವಿರುವುದು ಅವಶ್ಯಕ. ದಕ್ಷಿಣ ಆಗ್ನೇಯ ಮತ್ತು ಉತ್ತರ ವಾಯುವ್ಯ ಕಡಿತಗೊಂಡಿದೆ. ಇದು ಅಶುಭಕರ. ಮನೆಯ ಮುಖ್ಯದ್ವಾರ ಪೂರ್ವಕಿದ್ದರೂ ನೀಚ ಕೇತು ಸ್ಥಾನದಲ್ಲಿದೆ. ಇದನ್ನು ಪಾಯ ಆಯತಾಕಾರ ಗೊಳಿಸಿದ ಮೇಲೆ ದಕ್ಷಿಣ  ಆಗ್ನೇಯಕ್ಕೆ  ನಿಮ್ಮ ರಾಶಿಗೆ ಸರಿ ಹೊಂದುವುದಾದರೆ ಇಡಬಹುದು. ನಿಮ್ಮ ಶೌಚಾಲಯವನ್ನು ಈಗಿರುವ ಉತ್ತರ ದಿಕ್ಕಿನಿಂದ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುವಂತೆ ನಿರ್ಮಿಸಿಕೊಳ್ಳಿ. ಮನೆಗೆ 10 ಬಿಟ್ಟು ಸಮಸಂಖ್ಯೆಯ ಬಾಗಿಲು ಕಿಟಕಿ ಬರುವಂತೆ ನೋಡಿಕೊಳ್ಳಿ. ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಸರಿಯಾಗಿದೆ.

ಪ್ರದೀಪ ಕುಮಾರ, ಚಾಮರಾಜನಗರ: ಜನನ 12-10-1990. ಸಮಯ 8-0 ರಾತ್ರಿ.
ಪ್ರಶ್ನೆ: ಐಟಿಐ. ಎರಡನೇ ವರ್ಷ ಓದುತ್ತಿದ್ದೇನೆ. ಮೊಬೈಲ್ ಅಂಗಡಿ ಇದೆ. ಮುಂದಿನ ವಿದ್ಯಾಭ್ಯಾಸ, ಉದ್ಯೋಗ, ಮದುವೆ ಬಗ್ಗೆ ತಿಳಿಸಿ.
ಉತ್ತರ: ಇವರದು ಮೇಷಲಗ್ನ, ಪುಷ್ಯನಕ್ಷತ್ರ ಕರ್ಕರಾಶಿ. ಇವರ ಲಗ್ನವು ಪುಷ್ಕರ ಇಲ್ಲಿ ಯಾವ ಗ್ರಹರೂ ಇಲ್ಲ.ಯಾವ ಶುಭ ಸಂಬಂಧವು ಇಲ್ಲ.ಇದರಿಂದ ಇವರು ದುಡುಕು ಮಾತಿನ, ನೇರ ನಡೆನುಡಿ ಯವರಾಗಿದ್ದಾರೆ. ಇವರ ವಿದ್ಯಾಸ್ಥಾನ ಚಥುರ್ತವು ಕರ್ಕವಾಗಿದ್ದು, ಇಲ್ಲಿ ಚಥುರ್ತಾಧಿಪತಿ ಚಂದ್ರರು ಶನಿ ನಕ್ಷತ್ರ ಸ್ಥಿತರಿದ್ದು ಉಚ್ಛಗುರು ಮತ್ತು ಯೋಗಿ ಕೇತು ಒಡನೆ ಸ್ಥಿತರಿದ್ದಾರೆ. ಇವರನ್ನು ಅವಯೋಗಿ ರಾಹು ವೀಕ್ಷಿಸುತ್ತಾರೆ. ಇದರಿಂದ ಇವರಲ್ಲಿ ಉತ್ತಮ ಬುದ್ಧಿಮತ್ತೆ ಇದ್ದರೂ ಚಂಚಲ ಚಿತ್ತದಿಂದಾಗಿ ಅದರ ಸದ್ವಿನಿಯೋಗ ವಾಗುತ್ತಿಲ್ಲ.

ಇವರ ಉನ್ನತ ವಿದ್ಯಾಸ್ಥಾನ ಪಂಚಮವು ಸಿಂಹರಾಶಿಯಾಗಿದ್ದು ದಗ್ಧವಾಗಿದೆ. ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಲಗ್ನಾಧಿಪತಿ ಕುಜರು ವೀಕ್ಷಿಸುತ್ತಾರೆ. ಪಂಚಮಾಧಿಪತಿ ರವಿ ದಗ್ಧರಾಶ್ಯಾಧಿಪರಾಗಿ, ಷಷ್ಟದಲ್ಲಿ,  ಕುಜ ನಕ್ಷತ್ರದಲ್ಲಿ,  ಬುಧರೊಡನೆ ಸ್ಥಿತರಿದ್ದಾರೆ. 

 ಇವು ಉನ್ನತ ವಿದ್ಯೆಗೆ ಪೂರಕವಲ್ಲ. ಇವರಿಗೆ ಉನ್ನತ ವಿದ್ಯೆ ಕಷ್ಟಸಾಧ್ಯ.  ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇವು ಉದ್ಯೋಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಸೂಚಿಸುತ್ತವೆ. ಇವರು ಪಾಲುದಾರಿಕೆಯಗಿಂತ ಸ್ವತಂತ್ರರಾಗಿ ಉದ್ಯೋಗ ಮಾಡುವುದು ಒಳಿತು.ಇವರಿಗೆ ಅರ್ಕವಿವಾಹದ ಮಾಡಿಸಿ ಮದುವೆ ಪ್ರಯತ್ನ ಮಾಡುವುದು ಉತ್ತಮ. 2012-13ರಲ್ಲಿ ಇವರ ಮದುವೆ ನೆರವೇರುವುದು. ಇವರಿಗೆ ಈಗ ಬುಧದಶಾ ಶನಿ ಭುಕ್ತಿ ನಡೆಯುತ್ತಿದೆ. ಹೆಚ್ಚಿನ ಪ್ರಯತ್ನದಿಂದ ವಿದ್ಯೆ ಗಳಿಸಲು ಇದು ಸಕಾಲ.

ಪರಿಹಾರ: ಮಾಣಿಕ್ಯ ಧರಿಸಿ. ದುರ್ಗಾತ್ರಿಶತಿ ಪಠಿಸಿ, ಗಣಪತಿಯನ್ನು ಪೂಜಿಸಿ.

ಎಸ್. ಜಗದೀಶ, ಗೌರಿಬಿದನೂರು: ಜನನ 5-6-1981, ಸಮಯ 11-30 ರಾತ್ರಿ.
ಪ್ರಶ್ನೆ: ಮದುವೆ ಮತ್ತು ಮುಂದಿನ ಜೀವನದ ಬಗ್ಗೆ ತಿಳಿಸಿ.
ಉತ್ತರ:
ಇವರದು ಕುಂಭಲಗ್ನ, ಪುಷ್ಯನಕ್ಷತ್ರ ಕರ್ಕಾಟಕ ರಾಶಿ. ಇವರ ಲಗ್ನವು ದಗ್ಧರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಯಾವ ಶುಭ ಸಂಬಂಧವೂ ಇಲ್ಲ. ಲಗ್ನಾಧಿಪತಿ ಶನಿ ಪುಷ್ಕರ ನವಾಂಶದಲ್ಲಿ ಗುರು ಒಡನೆ ಅಷ್ಟಮಸ್ಥಿತರಿದ್ದಾರೆ. ಇವರನ್ನು ಯೋಗಿ ಕೇತು ವ್ಯಯದಿಂದ ವೀಕ್ಷಿಸುತ್ತಾರೆ.  ಕಳತ್ರಕಾರಕ ಶುಕ್ರರು ಪಂಚಮದಲ್ಲಿದ್ದರೂ ಅವಯೋಗಿ ರಾಹು ನಕ್ಷತ್ರದಲ್ಲಿ ಬುಧರೊಡನೆ ಸ್ಥಿತರಿದ್ದಾರೆ. ಇವರನ್ನು ಶನಿ ವೀಕ್ಷಿಸುತ್ತಾರೆ. ಇವು ಇವರ ಮದುವೆ ನಿಧಾನವಾಗಲು ಕಾರಣವಾಗಿದೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ಭಾಗ್ಯಾಂಶದಲ್ಲಿದೆ. ಲಗ್ನಾಧಿಪತಿ ಶುಕ್ರರು ತೃತೀಯದಲ್ಲಿ ಸ್ಥಿತರಿದ್ದಾರೆ. ಜನ್ಮ ಸಪ್ತಮಾಧಿಪತಿ ರವಿ ದಶಮಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿರುವುದು ಅಶುಭಕರ. ಇವರಿಗೆ ಈಗ ಮೇ 2011 ರನಂತರ ಗುರುಬಲವಿಲ್ಲ. ಈ ಕಾರಣ 2012-13 ರಲ್ಲಿ ಹೆಚ್ಚಿನ ಪ್ರಯತ್ನದಿಂದ ಇವರ ಮದುವೆ ನೆರವೇರುವುದು.

ಇವರ ಧನಾಧಿಪತಿ ಗುರು ಲಗ್ನಾಧಿಪತಿ ಶನಿಯೊಡನೆ ಪುಷ್ಕರ ನವಾಂಶದಲ್ಲಿ ಅಷ್ಟಮಸ್ಥಿತರಿದ್ದಾರೆ. ಪೂರ್ವಪುಣ್ಯಾಧಿಪತಿ ಬುಧರು ಅವಯೋಗಿ ರಾಹು ನಕ್ಷತ್ರದಲ್ಲಿ ಭಾಗ್ಯಾಧಿಪತಿ ಶುಕ್ರರೊಡನೆ ಪಂಚಮಸ್ಥಿತರಿದ್ದಾರೆ.  ಇದರಿಂದ ಇವರ ಮುಂದಿನ ಜೀವನವು ಸಾಕಷ್ಟು ಏಳು ಬೀಳುಗಳನ್ನು ಕಾಣುವುದು.

ಇವರಿಗೆ ಈಗ ಅಷ್ಟಮದ ಫಲನೀಡುವ ಬುಧದಶಾ ಶನಿ ಭುಕ್ತಿ ನಡೆಯುತ್ತಿದೆ. ಗೋಚಾರದಲ್ಲಿ ತೃತಿಯ ಶನಿ ಭಾಗ್ಯ ಗುರು ಇದ್ದಾರೆ. ಇವು ಶುಭಾಶುಭಕರವಾಗಿದೆ. 
ಪರಿಹಾರ: ಪಚ್ಛೆಹರಳು ಧರಿಸಿ. ಚಾಮುಂಡಿ ತ್ರಿಶತಿ ಪಠಿಸಿ. ವೀರಭದ್ರರನ್ನು ಪೂಜಿಸಿ. ಕುಲದೇವತೆಯ ಹರಕೆ ತೀರಿಸಿ. 

 ಕೆ.ಪ್ರಕಾಶ , ರಾಣಿಬೆನ್ನೂರು: ಜನನ 15-5-1969, ಸಮಯ 1-30 ರಾತ್ರಿ.
ಪ್ರಶ್ನೆ: ವ್ಯಾಪಾರದಲ್ಲಿ ನಷ್ಟ, ಸಾಲದ ಬಾಧೆ, ಖಾಸಗಿ ಕೆಲಸ ಸಿಗುವುದು ಸಾಧ್ಯವೇ? ತಿಳಿಸಿ.

ಉತ್ತರ: ಇವರದು ಕುಂಭಲಗ್ನ, ಅಶ್ವಿನಿ ನಕ್ಷತ್ರ ಮೇಷರಾಶಿ. ಇವರ ಲಗ್ನಾಧಿಪತಿ ಶನಿ ನೀಚರಾಗಿ ತೃತೀಯದಲ್ಲಿ ಕೇತು ನಕ್ಷತ್ರದಲ್ಲಿ ವೈರಿ ಚಂದ್ರರೊಡನೆ ಸ್ಥಿತರಿದ್ದಾರೆ.  ಇದರಿಂದ ಇವರ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದು ಇವರು ಕಟು ಮಾತಿನವರೂ ಆಲಸಿಗರೂ ಆಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ವೃಶ್ಚಿಕರಾಶಿಯಾಗಿದ್ದು ಇಲ್ಲಿ ದಶಮಾಧಿಪತಿ ವಕ್ರೀ ಕುಜರು ದಗ್ಧರಾಶ್ಯಾಧಿಪತಿ ಬುಧ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ರವಿ, ಬುಧ ಮತ್ತು ರಾಹು ವೀಕ್ಷಿಸುತ್ತಾರೆ. ಇವರ ಷಷ್ಟಾಧಿಪತಿ ಚಂದ್ರರು ಅಷ್ಟಮ ಸ್ಥಿತ ಕೇತು ನಕ್ಷತ್ರದಲ್ಲಿ ವೈರಿ ವ್ಯಯಾಧಿಪತಿ ನೀಚಶನಿಯೊಡನೆ ಸ್ಥಿತರಿರುವುದು ಇವರ ಸಾಲಬಾಧೆಗೆ ಕಾರಣವಾಗಿದೆ.

ಇವರ ಉದ್ಯೋಗ ಸೂಚಕ ಅಂಶಕುಂಡಲಿಯ ಲಗ್ನವು ವೃಷಭವಾಗಿದ್ದು ಸುಖಾಂಶದಲ್ಲಿದೆ. . ದಶಮದಲ್ಲಿ ವಕ್ರೀ ಕುಜರು ಮತ್ತು ಲಗ್ನಾಧಿಪತಿ ಶುಕ್ರರು ಧನಸ್ಥಾನದಲ್ಲಿ ಶನಿ ಮತ್ತು ಕೇತು ಒಡನೆ ಸ್ಥಿತರಿದ್ದಾರೆ. ಇವು ಅಶುಭಕರ.

ಇವರ ಧನ, ಪೂರ್ವಪುಣ್ಯಸ್ಥಾನ, ಅಷ್ಟಮ ಮತ್ತು ಲಾಭಸ್ಥಾನಗಳು ದಗ್ಧರಾಶಿಯಾಗಿರುವುದು ಅಲ್ಲದೇ ಧನಾಧಿಪತಿ ಗುರು ಅವಯೋಗಿಯಾಗಿ ಕೇತು ಒಡನೆ ಅಷ್ಟಮ ಸ್ಥಿತರಿರುವುದು ಇವರ ಸಂಕಷ್ಟಗಳಿಗೆ ಕಾರಣವಾಗಿದೆ. ಇದರಿಂದ ಇವರು ಕೃಷಿಗೆ ಸಂಬಂಧಿಸಿದ ಔಷಧಿಗಳ ಮತ್ತು ಇತರೆ ವಸ್ತುಗಳ ವ್ಯಾಪಾರ ಮಾಡುವುದು ಒಳಿತು. ಆದರೂ ಹಣಕಾಸಿನ (ಉದ್ದರಿ) ವಿಚಾರದಲ್ಲಿ ತುಂಬಾ ಎಚ್ಚರಿಕೆ ಅವಶ್ಯಕ. ಇವರಿಗೆ ಸೇವಾ ಕ್ಷೇತ್ರದಲ್ಲಿ ಅವಕಾಶಗಳು ಸಿಗುವುದು ತುಂಬಾ ಕಷ್ಟಸಾಧ್ಯ. 

 ಪರಿಹಾರ: ನೀಲಮಣಿ ಧರಿಸಿ. ಜನ್ಮದೋಷಶಾಂತಿ ಮಾಡಿಸಿಕೊಳ್ಳಿ. ಯಲ್ಲಮ್ಮ ದೇವಿಯನ್ನು ಪೂಜಿಸಿ. ಗಣಪತಿ ಅಷ್ಟೋತ್ತರ ಪಠಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT