ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ್ ವಾಸ್ತು

Last Updated 22 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಲೋಹಿತ ಆರಾಧ್ಯ, ಕೆಂಗೇರಿ: ಜನನ 15-9-1993, ಸಮಯ 8-20 ರಾತ್ರಿ.
ಪ್ರಶ್ನೆ: ವಿದ್ಯೆ , ಉದ್ಯೋಗ, ವೈವಾಹಿಕ ಜೀವನದ ಬಗ್ಗೆ ತಿಳಿಸಿ
.
ಉತ್ತರ: ಇವರದು ಮೇಷಲಗ್ನ, ಭರಣಿ ನಕ್ಷತ್ರ, ಮೇಷರಾಶಿ. ಇವರ ರಾಶಿಯಲ್ಲಿ ಚಂದ್ರ, ರಾಹು, ಗುಳಿಕ ಸ್ಥಿತರಿದ್ದಾರೆ. ಲಗ್ನ ಭಾವದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ಅವಯೋಗಿ ಗುರು ಪಂಚಮದಿಂದ ವೀಕ್ಷಿಸುತ್ತಾರೆ.

ಲಗ್ನಾಧಿಪತಿ ಕುಜರು ವಕ್ರೀ ಆಗಿ ಲಾಭದಲ್ಲಿರಾಹು ನಕ್ಷತ್ರ ಸ್ಥಿತರಿದ್ದು, ಅವಯೋಗಿ ಗುರು ವೀಕ್ಷಿತರಾಗಿದ್ದಾರೆ.  ಇದರಿಂದ ಇವರ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದು ಇವರು ಹಠಮಾರಿಗಳೂ, ತುಂಟರೂ ಆಗಿದ್ದಾರೆ.

ಚತುರ್ಥಭಾವದಲ್ಲಿ ಶನಿ ಸ್ಥಿತರಿದ್ದು, ಚತುರ್ಥಾಧಿಪತಿ ಚಂದ್ರರು ದ್ವಿತೀಯದಲ್ಲಿ ಶುಕ್ರ ನಕ್ಷತ್ರ ಸ್ಥಿತರಿದ್ದು ರಾಹುಗ್ರಸ್ತರಾಗಿದ್ದಾರೆ. ಇದರಿಂದ ಇವರ ವಿದ್ಯೆಯಲ್ಲಿ ಹೆಚ್ಚಿನ ಒತ್ತಡದಿಂದ ಪ್ರಗತಿ ಸಾಧ್ಯ.  ಚಿಕ್ಕಂದಿನಲ್ಲೇ ಯೋಗ ಧ್ಯಾನಗಳ ಅಭ್ಯಾಸದಿಂದ ಮನೋನಿಗ್ರಹ ಸಾಧಿಸಿದರೆ ಎಂಜನಿಯರಿಂಗ್ ಡಿಗ್ರಿ ಗಳಿಸಬಲ್ಲರು.

ಇವರ ಉದ್ಯೋಗ ಸೂಚಕ ದಶಮವು ಮಕರ ರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ದಶಮಾಧಿಪತಿ ಶನಿ ದಗ್ಧರಾಶಿಯಲ್ಲಿ, ಪುಷ್ಕರನವಾಂಶದಲ್ಲಿ, ರಾಹು ನಕ್ಷತ್ರದಲ್ಲಿದ್ದು, ಭಾವದಲ್ಲಿ ಸುಖಸ್ಥಾನ ಸ್ಥಿತರಿದ್ದಾರೆ. ದಶಮಕ್ಕೆ ಯಾವ ಶುಭ ಸಂಬಂಧವೂ ಇಲ್ಲ, ಶನಿಯನ್ನು ಕೇತು ವೀಕ್ಷಿಸುತ್ತಾರೆ.
 
ಶನಿ, ಗುರು ನವಾಂಶದಲ್ಲಿ, ವ್ಯಯಾಂಶ ಸ್ಥಿತರಿದ್ದಾರೆ. ಉದ್ಯೋಗ ಸೂಚಕ ಅಂಶಕುಂಡಲಿಯಲ್ಲಿ ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇವು ಉದ್ಯೋಗದಲ್ಲಿ ಅಡೆತಡೆಗಳಿದ್ದರೂ  ಪ್ರಯತ್ನದಿಂದ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯಲ್ಲಿ ಹೆಚ್ಚಿನ ಗ್ರಹರು ದುಃಸ್ಥಾನಸ್ಥಿತರಿದ್ದಾರೆ. ಇದರಿಂದ ಪರಿಹಾರದ ನಂತರ ಮದುವೆ ಮಾಡಿಕೊಳ್ಳುವುದು ಅವಶ್ಯಕ, ಅಲ್ಲದೇ ಪ್ರೇಮವಿವಾಹ ಸಫಲವಾಗುವುದಿಲ್ಲ. ಇವರಿಗೆ ಈಗ ರವಿದೆಶೆ ಬುಧ ಭುಕ್ತಿ. ಗೋಚಾರದಲ್ಲಿ ಷಷ್ಟಶನಿ ಜನ್ಮ ಗುರು ಇದ್ದಾರೆ. ಇವು ಶುಭಕರ.

ಪರಿಹಾರ: ಮಾಣಿಕ್ಯ ಧರಿಸಿ. ಗ್ರಾಮದೇವತೆಗೆ ಹರಕೆ ತೀರಿಸಿ. ವೀರಭದ್ರ ಪೂಜೆ ಸಲ್ಲಿಸಿ. ಕಾಳಿಕಾ ಅಷ್ಟೋತ್ತರ ಪಠಿಸಿ.

ಕೆ.ರಾಮಾಂಜನೇಯ, ಗಾಣದಾಳು: ಜನನ      23-3-1991, ಸಮಯ 4-00 ಬೆಳಿಗ್ಗೆ.
ಪ್ರಶ್ನೆ: ಟಿಸಿಎಚ್ ಓದುತ್ತೀದ್ದೆೀನೆ. ರಾಜಕೀಯ ಯಶಸ್ಸು, ಮುಂದಿನ ಜೀವನದ ಬಗ್ಗೆ ತಿಳಿಸಿ.
ಉತ್ತರ
: ಇವರದು ಮಕರ ಲಗ್ನ, ಮೃಗಶಿರ ನಕ್ಷತ್ರ ಕನ್ಯಾರಾಶಿ. ಇವರ ಲಗ್ನಾಧಿಪತಿ ಶನಿ ಲಗ್ನದಲ್ಲಿ, ಚಂದ್ರ ನಕ್ಷತ್ರದಲ್ಲಿ ಪಾಪ ಕರ್ತರಿಯಲ್ಲಿ ಸ್ಥಿತರಿದ್ದಾರೆ. ಲಗ್ನವನ್ನು ಅವಯೋಗಿ ವಕ್ರೀ ಗುರು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ವೃತ್ತಿ ಸೂಚಕ ದಶಮವು ತುಲಾ ಆಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.ದಶಮಾಧಿಪತಿ ಶುಕ್ರ, ಯೋಗಿಯಾಗಿ ಕೇತು ನಕ್ಷತ್ರದಲ್ಲಿ ತೃತೀಯ ಸ್ಥಿತರಿದ್ದಾರೆ. 

ಇವರ ತೃತೀಯಾಧಿಪತಿ ಗುರು ಪುಷ್ಕರನವಾಂಶದಲ್ಲಿದ್ದು, ಅವಯೋಗಿಯಾಗಿ ಸಪ್ತಮದಲ್ಲಿ ಉಚ್ಛರಾಗಿದ್ದರೂ ವಕ್ರೀ ಆಗಿದ್ದಾರೆ. ಇವು ರಾಜಕೀಯ ಯಶಸ್ಸಿಗೆ ಪೂರಕವಲ್ಲ. ತೀರ ಕೆಳಮಟ್ಟದ ರಾಜಕೀಯ ಮಾತ್ರ ಸಾಧ್ಯವಾಗಬಹುದು.

ಇವರ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಸುಖಾಂಶದಲ್ಲಿದ್ದು, ಲಗ್ನಾಧಿಪತಿ ಕುಜರು ತೃತೀಯದಲ್ಲಿ ಗುರು ಒಡನೆ ಸ್ಥಿತರಿದ್ದಾರೆ. ಇದರಿಂದ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಉದ್ಯೋಗ ಸಿಗುವುದು.

ಪರಿಹಾರ: ಪಚ್ಛೆಹರಳು ಧರಿಸಿ. ದುರ್ಗಾತ್ರಿಶತಿ ಪಠಿಸಿ. ಆದಿತ್ಯ ಹೃದಯ ಮತ್ತು ಕವಚ ಪಠಿಸಿ.

ಎಸ್. ಪ್ರಮೋದ, ಶಿವಮೊಗ್ಗ: ಜನನ  7-2-1984, ಸಮಯ 12-35 ರಾತ್ರಿ.
ಪ್ರಶ್ನೆ: ಸಾಪ್ಟ್‌ವೇರ್ ಉದ್ಯೋಗಿ, ವಿದೇಶದಲ್ಲಿ ಉದ್ಯೋಗ ಮತ್ತು ಮದುವೆ ಯೋಗ ಯಾವಾಗ ತಿಳಿಸಿ
.
ಉತ್ತರ: ಇವರದು ತುಲಾ ಲಗ್ನ, ಉತ್ತರಾಭಾದ್ರ ನಕ್ಷತ್ರ ಮೀನರಾಶಿ. ಇವರ ಲಗ್ನದಲ್ಲಿ ಉಚ್ಛಶನಿ ಮತ್ತು ಸಹಯೋಗಿ ಕುಜ ಸ್ಥಿತರಿದ್ದಾರೆ.

ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ.ಲಗ್ನಾಧಿಪತಿ ಶುಕ್ರರು ತೃತೀಯದಲ್ಲಿ ಪುಷ್ಕರ ನವಾಂಶದಲ್ಲಿ ವೈರಿ ಕ್ಷೇತ್ರದಲ್ಲಿ ವೈರಿ ಗುರು ಒಡನೆ ಸ್ಥಿತರಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ಕರ್ಕವಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ದಶಮಾಧಿಪತಿ ಚಂದ್ರರು ಷಷ್ಟದಲ್ಲಿ, ನೀಚಾಂಶದಲ್ಲಿ, ಶನಿ ನಕ್ಷತ್ರದಲ್ಲಿ ಸ್ಥಿತರಿದ್ದಾರೆ.

ಇವರನ್ನು ಯೋಗಿ ಕೇತು ವೀಕ್ಷಿಸುತ್ತಾರೆ.  ಭಾಗ್ಯಾಧಿಪತಿ ಬುಧರು ತೃತೀಯದಲ್ಲಿದ್ದು, ಲಾಭಾಧಿಪತಿ ರವಿ ಚತುರ್ಥದಲ್ಲಿ ಕುಜ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಅವಯೋಗಿ ರಾಹು ವೀಕ್ಷಿಸುತ್ತಾರೆ.
 
ಇವರ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ವೃಷಭವಾಗಿದ್ದು ಅಷ್ಟಮಾಂಶದಲ್ಲಿದೆ. ಲಗ್ನದಲ್ಲಿ ಶನಿ ಸ್ಥಿತರಿದ್ದಾರೆ. ಲಗ್ನಾಧಿಪತಿ ಶುಕ್ರರು ಅವಯೋಗಿ ರಾಹು ಒಡನೆ ತೃತೀಯ ಸ್ಥಿತರಿದ್ದಾರೆ.

ಜನ್ಮ ದಶಮಾಧಿಪತಿ ಚಂದ್ರ ಮತ್ತು ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. 2012ರಲ್ಲಿ ಶುಕ್ರದಶಾ ರವಿ ಭುಕ್ತಿಯಲ್ಲಿ ಮತ್ತು ಬೇರೆ ಬೇರೆ ಭುಕ್ತಿಯಲ್ಲಿ ಇವರಿಗೆ ಕೆಲವು ಕಾಲ ವಿದೇಶ ಯೋಗ ಬರಬಹುದು.

ಇವರ ಕಳತ್ರ ಸ್ಥಾನ ಸಪ್ತಮವು ಮೇಷರಾಶಿಯಾಗಿದ್ದು, ಇಲ್ಲಿ ಯಾವ ಗ್ರಹರೂ ಇಲ್ಲ. ಸಪ್ತಮಾಧಿಪತಿ ಕುಜರು ಲಗ್ನದಲ್ಲಿ ಪುಷ್ಕರ ನವಾಂಶದಲ್ಲಿದ್ದರೂ ಅವಯೋಗಿ ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರೊಡನೆ ಯೋಗಕಾರಕ ಶನಿ ಸ್ಥಿತರಿದ್ದಾರೆ.

ಸಪ್ತಮವನ್ನು ಗುರು, ಶನಿ ಮತ್ತು ಕುಜ ವೀಕ್ಷಿಸುತ್ತಾರೆ. ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಮೇಷವಾಗಿದ್ದು ಸಪ್ತಾಂಶದಲ್ಲಿದೆ. ಇಲ್ಲಿ ಶನಿ ನೀಚಾಂಶ ಸ್ಥಿತರಿದ್ದು, ಲಗ್ನಾಧಿಪತಿ ವ್ಯಯಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇದರಿಂದ ಇವರು ಸೂಕ್ತ ಪರಿಹಾರದ ನಂತರ ಪ್ರಯತ್ನಿಸಿದರೆ 2012ರಲ್ಲಿ ಇವರ ಮದುವೆ ನೆರವೇರುವದು.

ಇವರಿಗೆ ಈಗ ಶುಕ್ರ ದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಸಪ್ತಮಶನಿ ದ್ವಿತೀಯ ಗುರು ಇದ್ದಾರೆ. ಇವು ಶುಭಕರ.

ಪರಿಹಾರ: ಪಚ್ಚೆಹರಳು ಧರಿಸಿ. ಅರ್ಕವಿವಾಹ ಮಾಡಿಸಿಕೊಳ್ಳಿ. ಆದಿತ್ಯ ಹೃದಯ ಮತ್ತು ಕವಚ ಪಠಿಸಿ. ದುರ್ಗಾತ್ರಿಶತಿ ಪಠಿಸಿ. 

ಶ್ರೀಶಾಂತ.ಕೆ, ಕುಂದುವಾಡ: ಜನನ 20-8-1984, ಸಮಯ 7-00 ಬೆಳಿಗ್ಗೆ.
ಪ್ರಶ್ನೆ: ಉದ್ಯೋಗ ಮತ್ತು ಮುಂದಿನ ಓದಿನ ಬಗ್ಗೆ ತಿಳಿಸಿ.

ಉತ್ತರ: ಇವರದು ಸಿಂಹ ಲಗ್ನ, ಕೃತ್ತಿಕಾ ನಕ್ಷತ್ರ, ವೃಷಭರಾಶಿ. ಇವರ ಲಗ್ನದಲ್ಲಿ ಲಗ್ನಾಧಿಪತಿ ರವಿ, ಕರ್ಮಾಧಿಪತಿ ಶುಕ್ರ ಮತ್ತು ಲಾಭಾಧಿಪತಿ, ದಗ್ಧರಾಶ್ಯಾಧಿಪತಿ ವಕ್ರೀ ಬುಧರು ಸ್ಥಿತರಿದ್ದಾರೆ. ಲಗ್ನವನ್ನು ವಕ್ರೀ ಗುರು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ವೃಷಭರಾಶಿಯಾಗಿದ್ದು ಇಲ್ಲಿ ವ್ಯಯಾಧಿಪತಿ ಉಚ್ಛ ಚಂದ್ರ ಮತ್ತು ಅವಯೋಗಿ ರಾಹು ಸ್ಥಿತರಿದ್ದಾರೆ. ಇವರನ್ನು ಕುಜ ಮತ್ತು ಯೋಗಿ ಕೇತು ಪುಷ್ಕರ ನವಾಂಶ ಸ್ಥಿತರಿದ್ದು ವೀಕ್ಷಿಸುತ್ತಾರೆ.

ಲಗ್ನಾಧಿಪತಿ ಗುರು ವಕ್ರೀ ಆಗಿ ಸ್ವಾಂಶದಲ್ಲಿ, ಚತುರ್ಥದಲ್ಲಿ ಚಂದ್ರ, ಉಚ್ಛಾಂಶಸ್ಥಿತ ಶುಕ್ರ, ಶನಿ, ಅವಯೋಗಿ ರಾಹು ಒಡನೆ ಸ್ಥಿತರಿದ್ದಾರೆ. ಇವು ಶುಭಾಶುಭಕರವಾಗಿದ್ದು, ಉದ್ಯೋಗದಲ್ಲಿ ಹೆಚ್ಚಿನ ಅಡೆತಡೆಗಳ ಸೂಚಕವಾಗಿದೆ.

ಆದ್ದರಿಂದ ಸ್ತ್ರೀ ಸಂಬಂಧಿ ವಸ್ತುಗಳ ವ್ಯಾಪಾರವನ್ನು ಚಿಕ್ಕದಾಗಿ ಪ್ರಾರಂಭಿಸಿದರೆ ನಿಧಾನವಾಗಿ ಪ್ರಗತಿ ಕಾಣುವಿರಿ. ಅಥವಾ ಖಾಸಗಿ ಉದ್ಯೋಗಕ್ಕೆ ಪ್ರಯತ್ನಿಸಬಹುದು.

ಇವರ ಉನ್ನತ ವಿದ್ಯಾಸ್ಥಾನ ಪಂಚಮದಲ್ಲಿ ಪಂಚಮಾಧಿಪತಿ ವಕ್ರೀ ಗುರು ಯೋಗಿ ಕೇತು ನಕ್ಷತ್ರದಲ್ಲಿ ಸ್ವಕ್ಷೇತ್ರ ಸ್ಥಿತರಿದ್ದಾರೆ. ಷಷ್ಟಾಧಿಪತಿ ಶನಿ ಉಚ್ಛರಾಗಿ ಪುಷ್ಕರನವಾಂಶದಲ್ಲಿ ತೃತೀಯದಲ್ಲಿ, ಅವಯೊಗಿ ರಾಹು ನಕ್ಷತ್ರ ಸ್ಥಿತರಿದ್ದಾರೆ.
 
ಇವರಿಗೆ ಇವುಗಳಲ್ಲಿ ಯಶಸ್ಸು ಕಷ್ಟಸಾಧ್ಯ. ಈವರಿಗೆ ಈಗ ಅವಯೋಗಿ ರಾಹು ದಶಾ ಬುಧ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಪಂಚಮ ಶನಿ, ವ್ಯಯಗುರು ಇದ್ದಾರೆ. ಇವು ಅಶುಭಕರ.

ಪರಿಹಾರ: ಹವಳ ಧರಿಸಿ. ವೀರಭದ್ರರನ್ನು ಪೂಜಿಸಿ. ದುರ್ಗಾದೇವಿ ಅಷ್ಟೋತ್ತರ ಪಠಿಸಿ. ಕುಲದೇವತೆಯ ಹರಕೆ ತೀರಿಸಿ.

ಸುಮಂಗಳ. ಎಂ, ಊರು ಬೇಡ: ಜನನ 26-2-1965, ಸಮಯ 11.05 ಬೆಳಿಗ್ಗೆ.
ಪ್ರಶ್ನೆ: ವಿವಾಹ, ಮುಂದಿನ ಜೀವನದ ಬಗ್ಗೆ ತಿಳಿಸಿ.
ಉತ್ತರ: ಇವರದು ವೃಷಭಲಗ್ನ, ಪೂರ್ವಾಷಾಡ ನಕ್ಷತ್ರ ಧನು ರಾಶಿ.  ಇವರ ಲಗ್ನದಲ್ಲಿ ದಗ್ಧರಾಶ್ಯಾಧಿಪತಿ ಗುರು ಸ್ಥಿತರಿದ್ದು ಯಾವ ಶುಭ ಸಂಬಂಧವೂ ಇಲ್ಲ.ಲಗ್ನಾಧಿಪತಿ ಶುಕ್ರರು ದಶಮದಲ್ಲಿ ಯೋಗಿ ಕುಜ ನಕ್ಷತ್ರ ಸ್ಥಿತರಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಕಳತ್ರ ಸೂಚಕ ಸಪ್ತಮವು ವೃಶ್ಚಿಕರಾಶಿಯಾಗಿದ್ದು, ಇಲ್ಲಿ ಯಾವ ಗ್ರಹರೂ ಇಲ್ಲ. ಸಪ್ತಮಾಧಿಪತಿ ವಕ್ರಿ ಕುಜರು ಯೋಗಿಯಾಗಿ ಪುಷ್ಕರನವಾಂಶದಲ್ಲಿ ಪಂಚಮಸ್ಥಿತರಿದ್ದು ಸಪ್ತಮವನ್ನು ವೀಕ್ಷಿಸುತ್ತಾರೆ. ಕಳತ್ರಕಾರಕ ಶುಕ್ರರು ದಶಮದಲ್ಲಿ ಕುಜ ನಕ್ಷತ್ರದಲ್ಲಿದಾರೆ.

ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಮಕರವಾಗಿದ್ದು ಭಾಗ್ಯಾಂಶದಲ್ಲಿದೆ. ಲಗ್ನವು ಪಾಪ ಕರ್ತರಿಯಲ್ಲಿದೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇವು ಇವರ ಮದುವೆ ನಿಧಾನವಾಗಲು ಕಾರಣವಾಗಿದ್ದು, ದಾಂಪತ್ಯ ಸಾಮಾನ್ಯ ಉತ್ತಮವಾಗಿರುವುದು.

ಇವರಿಗೆ ಈಗ ರಾಹುದಶಾ ಬುಧ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ದಶಮಶನಿ, ಪಂಚಮಗುರು ಇದ್ದಾರೆ. ಇವು ಶುಭಾಶುಭಕರವಾಗಿದೆ.

ಇವರು ಪ್ರೇಮವಿವಾಹ ಮಾಡಿಕೊಳ್ಳಬಹುದಾಗಿದ್ದರೂ, ರಾಹು ದೆಶೆಯಿಂದಾಗಿ ಮೋಸವಾಗುವ ಸಾಧ್ಯತೆ ಇದ್ದು, ನವೆಂಬರ್ 2014ರ ನಂತರ ಮದುವೆ ಮಾಡಿಕೊಳ್ಳುವುದು ಸೂಕ್ತ.

ಪರಿಹಾರ: ಪಚ್ಛೆಹರಳು ಧರಿಸಿ. ಸುಬ್ರಮಣ್ಯರನ್ನು ಪೂಜಿಸಿ. ಗಣಪತಿ ಅಷ್ಟೋತ್ತರ ಪಠಿಸಿ. ದೇವಿಮಹಾತ್ಮೆ ಓದಿ. ಸ್ವರ್ಣಗೌರಿ ವೃತಮಾಡಿ.

ಯಾಮಿನಿ, ಬೆಂಗಳೂರು: ಜನನ 31-5-1999, ಸಮಯ 4-21 ರಾತ್ರಿ.
ಪ್ರಶ್ನೆ: ವಿದ್ಯಾಭ್ಯಾಸದ ಬಗ್ಗೆ ತಿಳಿಸಿ.

ಉತ್ತರ: ಇವರದು ಮೇಷಲಗ್ನ, ಜ್ಯೇಷ್ಠ ನಕ್ಷತ್ರ ವೃಶ್ಚಿಕರಾಶಿ. ಇವರ ಲಗ್ನವು ಪುಷ್ಕರ ನವಾಂಶದಲ್ಲಿದ್ದು,  ಲಗ್ನದಲ್ಲಿ ನೀಚಶನಿ ಸ್ಥಿತರಿದ್ದಾರೆ. ಇವರನ್ನು ಲಗ್ನಧಿಪತಿ ವಕ್ರೀ ಕುಜರು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. 

ಇವರ ವಿದ್ಯಾಸ್ಥಾನಗಳಾದ ದ್ವಿತೀಯ ಮತ್ತು ಚತುರ್ಥವು ವೃಷಭ ಮತ್ತು ಕರ್ಕವಾಗಿದ್ದು ಇಲ್ಲಿ ರವಿ ಮತ್ತು ಬುಧರು ದ್ವಿತೀಯದಲ್ಲೂ ಶುಕ್ರ ಮತ್ತು ಅವಯೋಗಿ ರಾಹು ಚಥುರ್ತದಲ್ಲೂ ಇದ್ದಾರೆ.

ಇವರ ವಿದ್ಯಾಬುದ್ಧಿ ಸ್ಥಾನ ಪಂಚಮವು ಸಿಂಹರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಜ್ಞಾನಕಾರಕ ಗುರು ವೀಕ್ಷಿಸುತ್ತಾರೆ. ಇವರ ವಿದ್ಯಾಸೂಚಕ ಅಂಶ ಕುಂಡಲಿಯ ಲಗ್ನವು ಧನು ಆಗಿದ್ದು ಭಾಗ್ಯಾಂಶದಲ್ಲಿದೆ.

ಈ ಲಗ್ನದಲ್ಲಿ ಬುಧ, ರಾಹು ಮತ್ತು ಕೇತು ಸ್ಥಿತರಿದ್ದಾರೆ. ಲಗ್ನಧಿಪತಿ ಗುರು ಭಾಗ್ಯದಲ್ಲಿ ಕುಜರೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ.

ಇವರಿಗೆ ಈಗ ಕೇತು ದಶಾ ಅವಯೋಗಿ ರಾಹು ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಲಾಭಶನಿ ಷಷ್ಟಗುರು ಇದ್ದಾರೆ. ನವೆಂಬರ್ 2011ರಿಂದ ಸಾಡೆಸಾತಿ ಪ್ರಾರಂಭವಾಗುತ್ತಿದ್ದು ವಿದ್ಯೆಗೆ ತಾತ್ಕಾಲಿಕ ಹಿನ್ನೆಡೆ ಆಗಬಹುದಾಗಿದೆ. ಆದ್ದರಿಂದ ಧೈರ್ಯಗೆಡದೆ ಶ್ರದ್ಧೆ ಮತ್ತು ಪರಿಶ್ರಮದಿಂದ ಇವರು ಎಂಜನಿಯರಿಂಗ್ ಡಿಗ್ರಿ ಗಳಿಸಬಲ್ಲರು.

ಪರಿಹಾರ: ಮಾಣಿಕ್ಯ ಧರಿಸಿ. 6 ಮುಖ ರುದ್ರಾಕ್ಷಿ ಧರಿಸಿ. ಸರ್ಪದೋಷ ಶಾಂತಿ ಮಾಡಿಸಿ. ಗುರು ಚರಿತ್ರೆ ಓದಿ.

ನಾಗಲಕ್ಷ್ಮೀ ಸುಬ್ರಮಣ್ಯ, ಬೆಂಗಳೂರು: ಜನನ     31-3-1944, ಸಮಯ 1-28 ಮಧ್ಯಾಹ್ನ.
ಪ್ರಶ್ನೆ: ವಾತ ಸಮಸ್ಯೆಯಿಂದ ಬಳಲುತ್ತಿದ್ದೆೀನೆ. ಪರಿಹಾರ ತಿಳಿಸಿ
.
ಉತ್ತರ: ಇವರದು ಮಿಥುನಲಗ್ನ, ಆರಿದ್ರಾ ನಕ್ಷತ್ರ ಮಿಥುನರಾಶಿ. ಇವರ ಲಗ್ನವು ದಗ್ಧರಾಶಿಯಾಗಿದ್ದು ಇಲ್ಲಿ ಚಂದ್ರ ಮತ್ತು ರೋಗಾಧಿಪತಿ ಕುಜರು ರಾಹು ನಕ್ಷತ್ರ ಸ್ಥಿತರಿದ್ದಾರೆ.
 
ಲಗ್ನವು ಪಾಪ ಕರ್ತರಿಗೆ ಒಳಗಾಗಿದೆ. ಯಾವ ಶುಭ ಸಂಬಂಧವೂ ಇಲ್ಲ.ಲಗ್ನಾಧಿಪತಿ ಬುಧರು ವೈರಿ ಕ್ಷೇತ್ರದಲ್ಲಿ, ಪಾಪಿ ಕೇತು ನಕ್ಷತ್ರದಲ್ಲಿ, ಭಾವದಲ್ಲಿ ದಶಮಸ್ಥಿತರಿದ್ದಾರೆ.  ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ಆರೋಗ್ಯ ಸೂಚಕ ಷಷ್ಟವು ವೃಶ್ಚಿಕರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಅವಯೋಗಿ, ಅಷ್ಟಮಾಧಿಪತಿ ಶನಿ, ವಕ್ರೀ ಬಾಧಕಾಧಿಪತಿ ಗುರು ಮತ್ತು ಪಾಪಿ ರಾಹು ವೀಕ್ಷಿಸುತ್ತಾರೆ. 

ಇವರ ಆರೋಗ್ಯ ಸೂಚಕ ಅಂಶ ಕುಂಡಲಿಯ ಲಗ್ನವು ಸಿಂಹವಾಗಿದ್ದು ಸಹಜಾಂಶದಲ್ಲಿದೆ. ಲಗ್ನದಲ್ಲಿ ಶುಕ್ರರು ಸ್ಥಿತರಿದ್ದು ಲಗ್ನಾಧಿಪತಿ ಮತ್ತು ಆರೋಗ್ಯಕಾರ ರವಿ, ಯೋಗಿಯಾಗಿ ಷಷ್ಟಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾ ಶುಭ ಸ್ಥಿತರಿದ್ದಾರೆ. ಇವು ಇವರಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಇಷ್ಟು ವರ್ಷ ದಯಪಾಲಿಸಿವೆ. 

ಈಗ ಇವರಿಗೆ ಶುಕ್ರ ದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಅರ್ಧಾಷ್ಟಮ ಶನಿ, ಲಾಭ ಗುರು ಇದ್ದಾರೆ. ಇವು ಅಶುಭಕರ. ಉತ್ತಮ ಆಯುರ್ವೇದ ಔಷಧದ ಸಹಾಯದಿಂದ, ಯೋಗದ ಸಹಾಯದಿಂದ ಇವರಿಗೆ 2013ರಲ್ಲಿ ಗುಣವಾಗುವುದು.

ಪರಿಹಾರ:  ನೀಲಮಣಿ ಧರಿಸಿ. ಲಕ್ಷ್ಮೀ ಸಹಸ್ರನಾಮ ಪಠಿಸಿ. ಕುಲದೇವತಾ ಶಾಂತಿ ಮಾಡಿಸಿ. ದುರ್ಗಾದೇವಿಯನ್ನು ಪೂಜಿಸಿ.

ಯಾಮಿನಿ, ಬೆಂಗಳೂರು: ಜನನ 31-5-1999, ಸಮಯ 4-21 ರಾತ್ರಿ.
ಪ್ರಶ್ನೆ: ವಿದ್ಯಾಭ್ಯಾಸದ ಬಗ್ಗೆ ತಿಳಿಸಿ.
ಉತ್ತರ:
ಇವರದು ಮೇಷಲಗ್ನ, ಜ್ಯೇಷ್ಠ ನಕ್ಷತ್ರ ವೃಶ್ಚಿಕರಾಶಿ. ಇವರ ಲಗ್ನವು ಪುಷ್ಕರ ನವಾಂಶದಲ್ಲಿದ್ದು,  ಲಗ್ನದಲ್ಲಿ ನೀಚಶನಿ ಸ್ಥಿತರಿದ್ದಾರೆ. ಇವರನ್ನು ಲಗ್ನಧಿಪತಿ ವಕ್ರೀ ಕುಜರು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಕುಜರು ಷಷ್ಟದಲ್ಲಿ ಸ್ವನಕ್ಷತ್ರದಲ್ಲಿ ಸಹಯೋಗಿಯಾಗಿ ಸ್ಥಿತರಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.

ಇವರ ವಿದ್ಯಾಸ್ಥಾನಗಳಾದ ದ್ವಿತೀಯ ಮತ್ತು ಚತುರ್ಥವು ವೃಷಭ ಮತ್ತು ಕರ್ಕವಾಗಿದ್ದು ಇಲ್ಲಿ ರವಿ ಮತ್ತು ಬುಧರು ದ್ವಿತೀಯದಲ್ಲೂ ಶುಕ್ರ ಮತ್ತು ಅವಯೋಗಿ ರಾಹು ಚಥುರ್ತದಲ್ಲೂ ಇದ್ದಾರೆ.

ಇವರ ವಿದ್ಯಾಬುದ್ಧಿ ಸ್ಥಾನ ಪಂಚಮವು ಸಿಂಹರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಜ್ಞಾನಕಾರಕ ಗುರು ವೀಕ್ಷಿಸುತ್ತಾರೆ. ಇವರ ವಿದ್ಯಾಸೂಚಕ ಅಂಶ ಕುಂಡಲಿಯ ಲಗ್ನವು ಧನು ಆಗಿದ್ದು ಭಾಗ್ಯಾಂಶದಲ್ಲಿದೆ.

ಈ ಲಗ್ನದಲ್ಲಿ ಬುಧ, ರಾಹು ಮತ್ತು ಕೇತು ಸ್ಥಿತರಿದ್ದಾರೆ. ಲಗ್ನಧಿಪತಿ ಗುರು ಭಾಗ್ಯದಲ್ಲಿ ಕುಜರೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ.

ಇವರಿಗೆ ಈಗ ಕೇತು ದಶಾ ಅವಯೋಗಿ ರಾಹು ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಲಾಭಶನಿ ಷಷ್ಟಗುರು ಇದ್ದಾರೆ. ನವೆಂಬರ್ 2011ರಿಂದ ಸಾಡೆಸಾತಿ ಪ್ರಾರಂಭವಾಗುತ್ತಿದ್ದು ವಿದ್ಯೆಗೆ ತಾತ್ಕಾಲಿಕ ಹಿನ್ನೆಡೆ ಆಗಬಹುದಾಗಿದೆ. ಆದ್ದರಿಂದ ಧೈರ್ಯಗೆಡದೆ ಶ್ರದ್ಧೆ ಮತ್ತು ಪರಿಶ್ರಮದಿಂದ ಇವರು ಎಂಜನಿಯರಿಂಗ್ ಡಿಗ್ರಿ ಗಳಿಸಬಲ್ಲರು.

ಪರಿಹಾರ: ಮಾಣಿಕ್ಯ ಧರಿಸಿ. 6 ಮುಖ ರುದ್ರಾಕ್ಷಿ ಧರಿಸಿ. ಸರ್ಪದೋಷ ಶಾಂತಿ ಮಾಡಿಸಿ. ಗುರು ಚರಿತ್ರೆ ಓದಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT