ನವದೆಹಲಿ : ‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ’ಯ (ಇಪಿಎಫ್‌ಒ) ಚಂದಾದಾರರಿಗೆ 2017–18ನೆ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ ಪಾವತಿಸುವ ಸಂಬಂಧ ಕಾರ್ಮಿಕ ಸಚಿವಾಲಯವು ಈ ವಾರ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಹಣಕಾಸು ಸಚಿವಾಲಯವು ಈಗಾಗಲೇ ಈ ಬಡ್ಡಿ ದರಕ್ಕೆ ತನ್ನ ಸಮ್ಮತಿ ನೀಡಿದೆ. ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಜಾರಿಯಲ್ಲಿ ಇರುವ ನೀತಿಸಂಹಿತೆ ಕಾರಣಕ್ಕೆ ಅಧಿಸೂಚನೆ ಪ್ರಕಟಿಸಲು ಸಚಿವಾಲಯವು ಚುನಾವಣಾ ಆಯೋಗದ ಅನುಮತಿ ಕೇಳಿದೆ. ಆಯೋಗವು ಶೀಘ್ರದಲ್ಲಿಯೇ ತನ್ನ ಅನುಮತಿ ನೀಡುವ ನಿರೀಕ್ಷೆ ಇದೆ. ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಈ ಬಡ್ಡಿಯನ್ನು ಭವಿಷ್ಯ ನಿಧಿಯ ಐದು ಕೋಟಿ ಚಂದಾದಾರರ ಖಾತೆಗೆ ಜಮೆ ಮಾಡಲಾಗುವುದು.

ಶೇ 8.55ರಷ್ಟು ಬಡ್ಡಿ ದರವು ಐದು ವರ್ಷಗಳ ಅವಧಿಯಲ್ಲಿನ ಕಡಿಮೆ ಮಟ್ಟದ್ದಾಗಿದೆ. ‘ಇಪಿಎಫ್‌ಒ’ದ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ಫೆಬ್ರುವರಿ 21ರಂದು ಈ ಬಡ್ಡಿ ದರ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.