ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ ಕೃಷಿ-ಲಾಭದ ಖುಷಿ...

Last Updated 19 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಪೂಜಿಸಲೆಂದೇ ಹೂಗಳ ತಂದೆ'... ಹಾಡು ಹಳೆಯದಾಗಿದೆ. ಆದರೆ, ಪುಷ್ಪೋದ್ಯಮ ದೊಡ್ಡ ಪ್ರಮಾಣದಲ್ಲಿ ಲಾಭ ತಂದು ಕೊಡುವ ವಹಿವಾಟು ಎಂಬುದು ಅನುಮಾನವಿಲ್ಲದಂತೆ ಸಾಬೀತಾಗಿದೆ. ಅದರಲ್ಲೂ ಅಲಂಕಾರಿಕ ಹೂವುಗಳ ರಫ್ತು ಬೇಡಿಕೆ ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ.

ಸದ್ಯ ದೇಶದ ಪುಷ್ಪೋದ್ಯಮದ ವಾರ್ಷಿಕ ವಹಿವಾಟು ರೂ3.7 ಲಕ್ಷ ಕೋಟಿ. 2015ರ ವೇಳೆಗೆ ಇದು ರೂ 9 ಲಕ್ಷ ಕೋಟಿ ದಾಟಬಹುದು ಎಂಬ ಅಂದಾಜಿದೆ. ಜಾಗತಿಕ ಪುಷ್ಪ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ 0.61 ರಷ್ಟಿದ್ದು, ಇದು ಮುಂದಿನ 3 ವರ್ಷಗಳಲ್ಲಿ  ಶೇ 0.89ಕ್ಕೆ ಏರುವ ನಿರೀಕ್ಷೆ ಇದೆ.   

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟಾರೆ ಹೂವುಗಳಲ್ಲಿ ಗುಲಾಬಿ ಹೂವಿಗೇ ಶೇ 65ರಷ್ಟು ಬೇಡಿಕೆ ಇದೆ. ಕೇವಲ ಗುಲಾಬಿ ಹೂವಿನ ವಹಿವಾಟೇ ಒಟ್ಟುರೂ2.4 ಲಕ್ಷ ಕೋಟಿಯಷ್ಟಿದೆ.  ಕೇಂದ್ರ ಸರ್ಕಾರ ಇದನ್ನು `ಉದಯೋನ್ಮುಖ ಉದ್ಯಮ' ಎಂದೇ ಗುರುತಿಸಿದ್ದು ಶೇ 100ರಷ್ಟು ರಫ್ತು ಆಧಾರಿತ ಸ್ಥಾನ ಮಾನ ನೀಡಿದೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ, ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪುಷ್ಪ ಕೃಷಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಇಲ್ಲಿ ಪುಷ್ಪ ಸಂಸ್ಕರಣೆ ಮತ್ತು ಹರಾಜು ಘಟಕಗಳನ್ನು ತೆರೆಯಲಾಗಿದೆ. ರಾಷ್ಟ್ರೀಯ ಕೃಷಿ ಮಂಡಳಿ ವರದಿ ಪ್ರಕಾರ  2011-12ನೇ ಸಾಲಿನಲ್ಲಿ 1900 ಹೆಕ್ಟೇರ್ ಪ್ರದೇಶದಲ್ಲಿ ಹೂವುಗಳನ್ನು ಬೆಳೆಯಲಾಗಿದೆ. 365 ಕೋಟಿ ಮೌಲ್ಯದ  ಹೂವುಗಳು ರಫ್ತಾಗಿವೆ.

ಪುಷ್ಪೋದ್ಯಮದಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಮುಂಚೂಣಿಯಲ್ಲಿವೆ.  ದೇಶದ ಒಟ್ಟು ಪುಷ್ಪ ರಫ್ತಿನಲ್ಲಿ ಶೇ 75ರಷ್ಟು ಪಾಲಿನೊಂದಿಗೆ ಕರ್ನಾಟಕ ನಂ. 1 ಸ್ಥಾನದಲ್ಲಿದೆ. ದೇಶದಲ್ಲಿ ಬೆಳೆಯಲಾಗುವ ತಾಜಾ ಹೂಗಳು ಅಮೆರಿಕ, ಜರ್ಮನಿ, ನೆದರ್‌ಲೆಂಡ್, ಇಂಗ್ಲೆಂಡ್ ಸೇರಿದಂತೆ 136 ದೇಶಗಳಿಗೆ ರಫ್ತಾಗುತ್ತವೆ.

ಪುಷ್ಪೋದ್ಯಮದಿಂದಾಗಿ ಅದನ್ನು ಅವಲಂಬಿಸಿದ ಇತರೆ ಉದ್ಯಮಗಳಿಗೂ ಉತ್ತೇಜನ ಲಭಿಸಿದೆ. ಉತ್ಪಾದನೆ, ಮಾರಾಟ, ರಫ್ತು, ಸಂಶೋಧನಾ ವೃತ್ತಿ, ಕೃಷಿ, ಬೀಜ ಉತ್ಪಾದನೆ, ಒಣ ಬೀಜ ಸಂಸ್ಕರಣೆ, ವೇದಿಕೆ ಅಲಂಕಾರ, ಪುಷ್ಪ ಗುಚ್ಛ (ಬೊಕೆ) ತಯಾರಿಕೆ.. ಇವೆಲ್ಲ ಒಂದಕ್ಕೊಂದು ಪೂರಕವಾಗಿ ಬೆಳವಣಿಗೆ ಕಾಣುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT