ಮಂಗಳೂರು: ಸ್ಥಳೀಯ ಪ‍್ರತಿಭೆ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವಾ ಇಲ್ಲಿನ ಮಿನಿ ಟೌನ್ ಹಾಲ್‌ನಲ್ಲಿ ನಡೆಯುತ್ತಿರುವ ಫಿಡೆ ರೇಟೆಡ್ ಚೆಸ್ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದ ಟೂರ್ನಿಯ ಎರಡನೇ ದಿನವಾದ ಶನಿವಾರ ಆರು ಸುತ್ತುಗಳ ಮುಕ್ತಾಯಕ್ಕೆ ಆರುಷಿ ಆರು ಪಾಯಿಂಟ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಕೊನೆಯ ಸುತ್ತಿನಲ್ಲಿ ಅಕ್ಷಯಾ ಸಾಥಿ ಅವರನ್ನು ಮಣಿಸಿ ಅವರು ಅಗ್ರಸ್ಥಾನಕ್ಕೇರಿದರು. ಶ್ರೇಯಾ ರಾಜೇಶ್, ದೃಷ್ಟಿ ಘೋಷ್ ಮತ್ತು ಶ್ರೀಯಾನಾ ಮಲ್ಯ ತಲಾ 5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಮುಕ್ತ ವಿಭಾಗದಲ್ಲಿ ಪ್ರತೀತಿ ಬರ್ಡೋಲಿ ಮತ್ತು ನಾಗ ಸಾಯ್ ಸಾರ್ಥಕ್ ಕರಣಮ್ ತಲಾ 5.5 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. ಐದನೇ ಸುತ್ತು ಮುಕ್ತಾಯಗೊಂಡಾಗ ಅಗ್ರ ಶ್ರೇಯಾಂಕದ ಸಿದ್ಧಾಂತ್ ಪೂಂಜಾ ಅವರೊಂದಿಗೆ ಹೃಷಿಕೇಶ್ ಗಣಪತಿ ಸುಬ್ರಮಣಿಯನ್, ನಾಗ ಸಾಯ್ ಸಾರ್ಥಕ್, ವೃಷಾಂಕ್, ಪ್ರತೀತಿ ಮತ್ತು ಶ್ರೀಕರ ತಲಾ 4.5 ಪಾಯಿಂಟ್‌ಗಳನ್ನು ಹೊಂದಿದ್ದರು. ಹೃಷಿಕೇಶ್ ಎದುರಿನ ಪಂದ್ಯ ಡ್ರಾ ಆದ ಕಾರಣ ಸಿದ್ಧಾಂತ್ ನಿರಾಸೆಗೆ ಒಳಗಾದರು. ಪ್ರತೀತಿ ಮತ್ತು ನಾಗಸಾಯ್ ಸಾರ್ಥಕ್ ಕ್ರಮವಾಗಿ ವೃಷಾಂಕ್ ಮತ್ತು ಶ್ರೀಕರ ಅವರನ್ನು ಮಣಿಸಿದರು.

6ನೇ ಸುತ್ತಿನ ಪ್ರಮುಖ ಫಲಿತಾಂಶಗಳು: ಬಾಲಕಿಯರು: ಅಕ್ಷಯಾ ಸಾಥಿ ವಿರುದ್ಧ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವಾಗೆ ಗೆಲುವು; ಜಾಹ್ನವಿ ಎಸ್. ವಿರುದ್ಧ ಶ್ರೇಯಾ ರಾಜೇಶ್‌ಗೆ, ಶ್ರೀಖಾ ಹೆಗಡೆ ವಿರುದ್ಧ ದೃಷ್ಟಿ ಘೋಷ್‌ಗೆ, ಶ್ರದ್ಧಾ ರಾಜ್ ವಿರುದ್ಧ ಶ್ರೀಯಾನಾ ಮಲ್ಯಗೆ, ಆಕೃತಿ ತ್ರಿಪಾಠಿ ವಿರುದ್ಧ ಸಾನ್ವಿತಾ ಶೆಟ್ಟಿಗೆ ಗೆಲುವು; ಆರಾಧ್ಯಾ ಶೆಟ್ಟಿ ಮತ್ತು ಧನುಷ್ಕಾ ಎಸ್, ಪಾವನಿ ಮತ್ತು ಯಾಶಿಕಾ ಜೋಷಿ, ಅನುಷ್ಕಾ ಭಟ್ ಮತ್ತು ಆದ್ಯಾ ಕೃಷ್ಣವಜ್ಜಲ, ಲಿನ್ಸಿಯಾ ಜಾಸ್ಲಿನ್ ಮತ್ತು ಅಪೇಕ್ಷಾ ಎಸ್.ಆರ್ ನಡುವಿನ ಪಂದ್ಯ ಡ್ರಾ.

ಮುಕ್ತ ವಿಭಾಗ: ಹೃಷಿಕೇಷ್ ಗಣಪತಿ ಸುಬ್ರಹ್ಮಣ್ಯನ್ ಮತ್ತು ಸಿದ್ಧಾಂತ್ ಪೂಂಜಾ ನಡುವಿನ ಪಂದ್ಯ ಡ್ರಾ; ನಾಗಸಾಯ್ ಸಾರ್ಥಕ್‌ಗೆ ವೃಷಾಂಕ್ ವಿರುದ್ಧ ಜಯ, ಪ್ರತೀತಿ ಬೊರ್ಡೊಲಿಗೆ ಶ್ರೀಕರ ವಿರುದ್ಧ ಗೆಲುವು, ರಿತೇಶ್ ವಿರುದ್ಧ ರವೀಶ್ ಕೋಟೆ, ಆರಾಧ್ಯ ಭಟ್ಟಾಚಾರ್ಯ ವಿರುದ್ಧ ಶ್ರೇಯಸ್ ಪಾಟೀಲ್‌ಗೆ, ಆದಿತ್ಯ ಟಿ. ವಿರುದ್ಧ ಅನ್ಶುಲ್ ಪಣಿಕ್ಕರ್, ವಿಹಾನ್ ಶೆಟ್ಟಿ ವಿರುದ್ಧ ರಜಸ್ ಡಿ., ಪರಿಣಿತಾ ಗೌಡ ವಿರುದ್ಧ ಪ್ರಣವ್, ವಿಹಾನ್ ಸಚದೇವ್ ವಿರುದ್ಧ ಶೌರ್ಯ ಸುವರ್ಣ ಜಯಭೇರಿ; ಆರುಷ್ ಭಟ್ ಹಾಗೂ ಸುಶಾಂತ್, ಅದ್ರಿಜ್ ಭಟ್ಟಾಚಾರ್ಯ ಮತ್ತು ಆದ್ಯಾ ಗೌಡ, ಅವನೀಶ್ ದೇವಾಡಿಗ ಮತ್ತು ಅನ್ವಿತಾ ಸಾಥಿ ನಡುವಿನ ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.