ಅಸ್ತಾನಾ (ಕಜಕಸ್ತಾನ): ಹಾಲಿ ವಿಶ್ವ ಚಾಂಪಿಯನ್ ನಿಕತ್ ಜರೀನ್ ಹಾಗೂ ಮೀನಾಕ್ಷಿ ಅವರು ಎಲೋರ್ಡಾ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಶನಿವಾರ ತಲಾ ಒಂದು ಚಿನ್ನದ ಪದಕ ಗೆದ್ದರು. ಭಾರತ ತಂಡ ಒಟ್ಟು 12 ಪದಕಗಳೊಂದಿಗೆ ಅಭಿಯಾನವನ್ನು ಕೊನೆಗೊಳಿಸಿತು.

ನಿಖತ್ ಮತ್ತು ಮೀನಾಕ್ಷಿ ಅವರ ಚಿನ್ನದ ಪದಕಗಳಲ್ಲದೆ, ಭಾರತದ ಬಾಕ್ಸರ್ಗಳು ಎರಡು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳನ್ನು ಗೆದ್ದು ಕಳೆದ ಆವೃತ್ತಿಯ ಐದು ಪದಕಗಳ ದಾಖಲೆಯನ್ನು ಉತ್ತಮಪಡಿಸಿದರು.

ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ನಿಖತ್ ಅವರು 5–0 ಅಂತರದಿಂದ ಕಜಕಸ್ತಾನದ ಝಾಜಿರಾ ಉರಕ್ಬಯೇವಾ ಅವರನ್ನು ಸೋಲಿಸುವ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದರು. 48 ಕೆ.ಜಿ ವಿಭಾಗದ ಫೈನಲ್ನಲ್ಲಿ ಉಜ್ಬೇಕಿಸ್ತಾನದ ರಹಮೊನೊವಾ ಸೈದಾಹೊನ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಮಿನಾಕ್ಷಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.

ಅನಾಮಿಕಾ (50 ಕೆಜಿ) ಮತ್ತು ಮನೀಷಾ (60 ಕೆಜಿ) ಫೈನಲ್ನಲ್ಲಿ ಸೋತು ಬೆಳ್ಳಿ ಪದಕಗಳೊಂದಿಗೆ ತಮ್ಮ ಅಭಿಯಾನ ಕೊನೆಗೊಳಿಸಿದರು.

ಅನಾಮಿಕಾ 1–4 ರಿಂದ ಚೀನಾದ ವು ಯು ಅವರಿಗೆ ಶರಣಾದರೆ, ಮನೀಷಾ 0–5 ಅಂತರದಲ್ಲಿ ಕಜಕಸ್ತಾನದ ವಿಕ್ಟೋರಿಯಾ ಗ್ರಾಫೀವಾ ಎದುರು ಸೋಲನುಭವಿಸಿದರು.

ಪದಕ ವಿಜೇತರ ವಿವರ– ಚಿನ್ನ: ಮೀನಾಕ್ಷಿ (48 ಕೆಜಿ) ಮತ್ತು ನಿಖತ್ ಜರೀನ್ (52 ಕೆಜಿ),

ಬೆಳ್ಳಿ: ಅನಾಮಿಕಾ (50 ಕೆಜಿ) ಮತ್ತು ಮನೀಷಾ (60 ಕೆಜಿ),

ಕಂಚು (ಪುರುಷರು): ಯೈಫಾಬಾ ಸಿಂಗ್ ಸೊಯಿಬಾಮ್ (48 ಕೆಜಿ), ಅಭಿಷೇಕ್ ಯಾದವ್ (67 ಕೆಜಿ), ವಿಶಾಲ್ (86 ಕೆಜಿ) ಮತ್ತು ಗೌರವ್ ಚೌಹಾಣ್ (92+ ಕೆಜಿ), (ಮಹಿಳೆಯರು) ಸೋನು (63 ಕೆಜಿ), ಮಂಜು ಬಾಂಬೋರಿಯಾ (66 ಕೆಜಿ), ಶಲಾಖಾ ಸಿಂಗ್ ಸನ್ಸನ್ವಾಲ್ (70 ಕೆಜಿ) ಮತ್ತು ಮೋನಿಕಾ (81+ ಕೆಜಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.