ವಾರದ ಹಿಂದೆ (ಸೆ. 17) ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಪೆಟ್ರೋಲ್ ಸರಾಸರಿ ಮಾರಾಟ ದರ ಪ್ರತಿ ಲೀಟರ್ಗೆ ₹ 71.62 ಇತ್ತು. ಈ ಭಾನುವಾರ (ಸೆ. 24) ಈ ಸರಾಸರಿ ಬೆಲೆ ₹ 71.48ಕ್ಕೆ ತಲುಪಿದೆ. ಅಂದರೆ, ಪ್ರತಿ ಲೀಟರ್ಗೆ 14 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 23 ಪೈಸೆ ಇಳಿಕೆ ಕಂಡಿದೆ.