ಈ ಕೇಂದ್ರದ ನೆರವಿನಿಂದ ಸಾರಿಗೆ, ಇಂಧನ, ಕೈಗಾರಿಕೆ, ಹಣಕಾಸು ಸೇವೆ ಮತ್ತು ಸಮುದಾಯ ಸೇವೆಗಳಿಗೂ ಒತ್ತು ನೀಡುವುದಾಗಿ ಸಂಸ್ಥೆ ಪ್ರಕಟಿಸಿದೆ. ಕೌಶಲ ಅಭಿವೃದ್ಧಿ ಕೇಂದ್ರದ ಮೂಲಕ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಸಂಸ್ಥೆ ಬಳಿ ಇರುವ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಸೇವೆಗಳನ್ನು ಒದಗಿಸಲಾಗುವುದು.