ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಸಂಪತ್ತು: ಭಾರತಕ್ಕೆ 3ನೇ ಸ್ಥಾನ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದ ಬ್ಯಾಂಕಿಂಗ್ ವಲಯದ ಒಟ್ಟು  ಸಂಪತ್ತು 2025ರ ವೇಳೆಗೆ ವಿಶ್ವದಲ್ಲಿಯೇ ಮೂರನೆಯ ಸ್ಥಾನಕ್ಕೆ ಏರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಜಾಗತಿಕ ಸಲಹಾ ಸಂಸ್ಥೆ ಬಿಸಿಜಿ ನಡೆಸಿದ ಜಂಟಿ ಸಮೀಕ್ಷೆ ತಿಳಿಸಿದೆ. 

ಸದ್ಯ ದೇಶದ ಬ್ಯಾಂಕಿಂಗ್ ಸಂಪತ್ತು 1,350 ಶತಕೋಟಿ ಡಾಲರ್‌ಗಳಷ್ಟಿದ್ದು,  (ರೂ60,75,000 ಕೋಟಿ) 2025ರ ವೇಳೆಗೆ ಇದು  28,500 ಶತಕೋಟಿ ಡಾಲರ್‌ಗಳಿಗೆ ಏರಿಕೆ ಕಾಣಲಿದೆ. ಈ ಅವಧಿಯಲ್ಲಿ ಚೀನಾದ ಬ್ಯಾಂಕಿಂಗ್ ಮೌಲ್ಯವು 1,15,000 ಶತಕೋಟಿ ಡಾಲರ್ ಮತ್ತು ಅಮೆರಿಕದ ಬ್ಯಾಂಕಿಂಗ್ ಸಂಪತ್ತು 1,00,000 ಶತಕೋಟಿ ಡಾಲರ್‌ಗಳಿಗೆ ಏರಿಕೆ ಕಾಣಲಿದ್ದು, ಮೊದಲೆರಡು ಸ್ಥಾನಗಳನ್ನು ಪಡೆಯಲಿವೆ.  ಇನ್ನು 5 ವರ್ಷಗಳಲ್ಲಿ ಚೀನಾ, ಪ್ರಪಂಚದ ಅತಿ ದೊಡ್ಡ ಬ್ಯಾಂಕಿಂಗ್ ಉದ್ಯಮ ಅಮೆರಿಕವನ್ನು ಹಿಂದಿಕ್ಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT