ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ದೀಪಾವಳಿ ಖರೀದಿ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಿದ್ದ ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲಿ ಮಂಗಳೂರಿನ ಗ್ರಾಹಕಿ ಜಾಕುಲಿನ್ ಕ್ಯಾರೊಲಿನ್ ಅವರು 5 ಕೆ.ಜಿ ಚಿನ್ನ ಗೆದ್ದ ಅದೃಷ್ಟಶಾಲಿಯಾಗಿದ್ದಾರೆ.

ಇಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಪ್ರಚಾರ ರಾಯಭಾರಿಯೂ ಆಗಿರುವ ನಟಿ ತಮನ್ನಾ ಭಾಟಿಯಾ ಅವರು 5 ಕೆ. ಜಿ. ಚಿನ್ನವನ್ನು ಜಾಕುಲಿನ್ ಕ್ಯಾರೊಲಿನ್ ಅವರಿಗೆ ಹಸ್ತಾಂತರಿಸಿದರು.

ದೇಶದಾದ್ಯಂತ ಇರುವ ಸಂಸ್ಥೆಯ ಮಳಿಗೆಗಳಲ್ಲಿ ಚಿನ್ನ ಮತ್ತು ವಜ್ರಾಭರಣಗಳನ್ನು ಖರೀದಿಸಿದ ಗ್ರಾಹಕರು ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಕ್ಯಾರೊಲಿನ್ ಅವರು ಮಂಗಳೂರು ಮಳಿಗೆಯಲ್ಲಿ ಚಿನ್ನಾಭರಣ ಖರೀದಿಸಿದ್ದರು.

‘ಚಿನ್ನಾಭರಣ ಖರೀದಿ ಉತ್ತೇಜಿಸುವ ವಿಸ್ತರಿಸಿದ ಯೋಜನೆಯಡಿ ವಾರಕ್ಕೊಮ್ಮೆ ಏರ್ಪಡಿಸಿದ್ದ ಲಕ್ಕಿ ಡ್ರಾ ವಿಜೇತರಿಗೆ ಸಂಸ್ಥೆಯು ಒಟ್ಟು 111 ಕೆಜಿ ಚಿನ್ನ ವಿತರಿಸಿತ್ತು. ವಹಿವಾಟಿನಲ್ಲಿ ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ ನೀಡುತ್ತ ಬರಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಪಿ. ಅಹಮ್ಮದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.