ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಎಸ್‌ಎಕ್ಸ್‌ಫೋರ್ ಡೀಸೆಲ್ ಕಾರು

Last Updated 22 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಮಂಗಳವಾರ ಇಲ್ಲಿ ‘ಎಸ್‌ಎಕ್ಸ್‌ಫೋರ್’ ಸೆಡಾನ್ ಡೀಸೆಲ್ ಮಾದರಿ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

‘ವಿಡಿಐ’ ಮತ್ತು ‘ಜಡ್ ಡಿಐ’ ಎಂಬ ಎರಡು ಮಾದರಿಗಳಲ್ಲಿ ಈ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬೆಂಗಳೂರಿನಲ್ಲಿ ಇರುವ ಎಕ್ಸ್ ಷೋರೂಂ ಬೆಲೆ ಕ್ರಮವಾಗಿ ರೂ 7.94 ಲಕ್ಷ ಮತ್ತು ರೂ 8.83 ಲಕ್ಷ ಇದೆ.  ಎಸ್‌ಎಕ್ಸ್‌ಫೋರ್ ಮಾದರಿಯನ್ನು ಕಂಪೆನಿಯು ‘ಎ-3’ ತಯಾರಿಕಾ ಸರಣಿಯಲ್ಲಿ ಹೊರತಂದಿದ್ದು, ಇದು ದೂರದ ಪ್ರಯಾಣಕ್ಕೆ ಅತ್ಯತ್ತಮ ಆಯ್ಕೆ ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಿಂಜೊ ನಕಾನಿಶಿ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ  ಅಭಿಪ್ರಾಯಪಟ್ಟರು.

‘ಸೂಪರ್ ಟರ್ಬೊ’ ಎಂಜಿನ್ ಸಾಮರ್ಥ್ಯವನ್ನು ಎಸ್‌ಎಕ್ಸ್‌ಫೋರ್ ಹೊಂದಿದೆ. ಕಡಿಮೆ ಇಂಧನ ದಕ್ಷತೆ ಹೊಂದಿರುವ  ‘ಕೆ’ ಸರಣಿ ಎಂಜಿನ್ ಬಳಸಿರುವುದರಿಂದ ಪ್ರತಿ ಲೀಟರಿಗೆ 21.5ಕಿಮೀ ಇಂಧನ ಕ್ಷಮತೆ ಹೊಂದಿದೆ. ಉಳಿದ ಸೆಡಾನ್ ಮಾದರಿ ಕಾರುಗಳಿಗೆ ಹೋಲಿಸಿದರೆ ಇದು ಶೇ 8ರಷ್ಟು ಹೆಚ್ಚಿದೆ ಎಂದು ನಕಾನಿಶಿ ಹೇಳಿದರು.

ತುಮಕೂರು ರಸ್ತೆಯಲ್ಲಿ ಪ್ರಾಂಗಣ:
ಕಂಪೆನಿಯು ದಕ್ಷಿಣ ಮಾರುಕಟ್ಟೆ ವಿಸ್ತರಣೆಯ ಅಂಗವಾಗಿ, ಬೆಂಗಳೂರಿನ ಹೊರವಲಯದಲ್ಲಿರುವ  ತುಮಕೂರು ರಸ್ತೆಯಲ್ಲಿ 120 ಎಕರೆ ಪ್ರದೇಶದಲ್ಲಿ ದೇಶದ ಮೊತ್ತ ಮೊದಲ ಕಾರುಗಳ ಬೃಹತ್ ಪ್ರಾಂಗಣ (ಸ್ಟಾಕ್‌ಯಾರ್ಡ್) ಪ್ರಾರಂಭಿಸಲಿದೆ. ಇದಕ್ಕಾಗಿ ರೂ 1000 ಕೋಟಿ ಹೂಡಿಕೆ ಮಾಡಲಾಗುವುದು. ಇಲ್ಲಿ ಕಾರುಗಳ ಪ್ರದರ್ಶನ ಮತ್ತು ಮಾರಾಟ ವಹಿವಾಟು ನಡೆಸಲಾಗುವುದು. ಮಾರ್ಚ್ ಅಂತ್ಯದ ವೇಳೆಗೆ ಇದು ಅಸ್ತಿತ್ವಕ್ಕೆ ಬರಲಿದೆ ಎಂದು  ಮಯಾಂಕ್ ಹೇಳಿದರು. ಕಂಪೆನಿಯು ಅಗ್ಗದ ದರದ ಸಣ್ಣ ಕಾರುಗಳ ತಯಾರಿಕೆಗೆ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದ ಅವರು ಇತರೆ ಕಂಪೆನಿಗಳ ಅಗ್ಗದ ಕಾರುಗಳ ಮಾರುಕಟ್ಟೆ  ಸ್ಪರ್ಧೆಯನ್ನು ಪರೋಕ್ಷವಾಗಿ ಅಲ್ಲಗಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT