ಸಾಮಾನ್ಯವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮೊಬೈಲ್ ಆ್ಯಪ್ ಆಧಾರಿತ ನಗದು ರಹಿತ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತಿದೆ.
‘ಯುಪಿಐ ಮೂಲಕ ಗ್ರಾಹಕ ಪಾವತಿಸುವ ಹಣಕ್ಕೆ ವರ್ತಕರು ಶುಲ್ಕ ಭರಿಸಬೇಕಾಗುತ್ತದೆ. ಗ್ರಾಹಕರಿಬ್ಬರ ನಡುವಣ ವಹಿವಾಟಿನಲ್ಲಿ ಹಣ ಕಳಿಸುವ ವ್ಯಕ್ತಿ ಶುಲ್ಕ ಭರಿಸಬೇಕಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಭೀಮ್ ಆ್ಯಪ್’ ಮೂಲಕ ಇಬ್ಬರು ಬಳಕೆದಾರರ ಮಧ್ಯೆ ನಡೆಯುವ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎರಡು ತಿಂಗಳಲ್ಲಿ ತೀರ್ಮಾನ
ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಕೆಲವು ಬ್ಯಾಂಕ್ಗಳ ನಿರ್ಧಾರ ಕುರಿತು ಚರ್ಚಿಸಲು ಶೀಘ್ರದಲ್ಲಿಯೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯಲಾಗುವುದು. ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.