ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಪರದೆಯ ವರ್ಣ ಸಂಯೋಜನೆಯನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸ್ಯಾಮ್ಸಂಗ್ ಸಂಸ್ಥೆಯು ಆರಂಭದಲ್ಲಿ ವಿವರಣೆ ನೀಡಿತ್ತು. ಹೆಚ್ಚಿನ ಗ್ರಾಹಕರಿಂದ ದೂರುಗಳು ಬರುತ್ತಿದ್ದಂತೆ, ಈ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಾಫ್ಟ್ವೇರ್ ಒದಗಿಸಲು ಸಂಸ್ಥೆ ಮುಂದಾಗಿದೆ. ಪರದೆಯ ವರ್ಣ ಸಂಯೋಜನೆ ಹೊಂದಾಣಿಕೆ ಮಾಡಿಕೊಳ್ಳಲು ಈ ಸಾಫ್ಟ್ವೇರ್ ನೆರವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.