ಸಿಬಿಎಸ್‌ಇ: ಎರಡು ಹಂತಗಳಲ್ಲಿ 10ನೇ ತರಗತಿ ಗಣಿತ ಪರೀಕ್ಷೆ

7

ಸಿಬಿಎಸ್‌ಇ: ಎರಡು ಹಂತಗಳಲ್ಲಿ 10ನೇ ತರಗತಿ ಗಣಿತ ಪರೀಕ್ಷೆ

Published:
Updated:

ನವದೆಹಲಿ : 2020ರಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆಎರಡು ಹಂತಗಳಲ್ಲಿ ಗಣಿತ ಶಾಸ್ತ್ರ ಪರೀಕ್ಷೆ ಜಾರಿಗೊಳಿಸಲು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಮುಂದಾಗಿದೆ.

ಈ ಪರೀಕ್ಷೆಗಳಿಗೆ ಗಣಿತ ಶಾಸ್ತ್ರ– ಸ್ಟ್ಯಾಂಡರ್ಡ್ ಮತ್ತು ಗಣಿತ ಶಾಸ್ತ್ರ– ಬೇಸಿಕ್‌ ಎಂದು ಹೆಸರಿಸಲಾಗಿದೆ. ಮೊದಲನೆಯದು ಸದ್ಯ ನಡೆಯುತ್ತಿರುವ ಪರೀಕ್ಷೆಯಾದರೆ, ಎರಡನೆಯದು ಇನ್ನೂ ಸರಳವಾದ ಪರೀಕ್ಷೆಯಾಗಿದೆ ಎಂದು ಸಿಬಿಎಸ್‌ಇ ಸುತ್ತೋಲೆ ತಿಳಿಸಿದೆ.

ಸದ್ಯ ನಡೆಯುತ್ತಿರುವ ಪರೀಕ್ಷಾ ಹಂತ ಮತ್ತು ವಿಷಯದ ಪಠ್ಯವಸ್ತು ಮುಂದುವರಿಯಲಿದ್ದು, ಯಾವುದೇ ಬದಲಾವಣೆ ಇರದು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ, ಎರಡು ಹಂತಗಳ ಪರೀಕ್ಷೆಯಿಂದ ವಿವಿಧ ರೀತಿಯ ಕಲಿಕಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜೊತೆಗೆ, ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸುತ್ತೋಲೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !