ಶನಿವಾರ, ಸೆಪ್ಟೆಂಬರ್ 21, 2019
25 °C

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ: ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

Published:
Updated:
Prajavani

ಚಡಚಣ: ಜವಳಿ ವರ್ತಕ ಅಜಿತ ಮುತ್ತಿನ  ಅವರ ಮೇಲೆ ಹಲ್ಲೆ ಮಾಡಿ ನಗದು ತುಂಬಿದ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಬಡಿಗೇರ ಮಾತನಾಡಿ, ‘ಘಟನೆಗೆ ಪೊಲೀಸ್ ಇಲಾಖೆ ನೇರ ಹೊಣೆ. ಅವರ ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದೆ’ ಎಂದು ಆರೋಪಿಸಿದರು.

24 ಗಂಟೆಯೊಳಗಾಗಿ ದುಷ್ಕರ್ಮಿ ಗಳ ಬಂಧನವಾಗದಿದ್ದರೆ ಬುಧವಾರ ಪಟ್ಟಣ ಬಂದ್ ಕರೆ ನೀಡಿ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದರು.

ಡಿಎಸ್ಎಸ್ ಮುಖಂಡ ಮಹಾದೇವ ಬನಸೋಡೆ, ಮುಖಂಡ ರಾದ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಮ ಅವಟಿ, ಮುಖಂಡ ಮಹಾದೇವ ಯಂಕಂಚಿ, ದೇವೀಂದ್ರಪ್ಪ ಪಾಟೀಲ, ಶಶಿಧರ ಯಂಕಂಚಿ, ಉದಯ ಅವಟಿ, ದಶರಥ ಬನಸೋಡೆ, ಬಸವರಾಜ ಇಂಗಳಗಿ,ಚೇತನ ಮಠ, ಸುನೀಲ ಧೋತ್ರೆ, ನಾಗು ವೆಂಕಟಾಪೂರ, ಸಂಗು ಇಂಡಿ, ರಾಹುಲ ಹಜೇರಿ, ಅಶೋಕ ಕುಲಕಣ, ಪ್ರಜ್ವಲ ತಂಗಾ, ಶ್ರೀಶೈಲ ಜೀರಂಕಲಗಿ, ಬಸು ಅಂಕದ, ಲಕ್ಷ್ಮಣ ಶಿಂಧೆ, ಶಿವು ಪಾತ್ರೋಟಿ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಇದ್ದರು.

Post Comments (+)