ಚೆಲುವೆಯರ ನಲಿವಿನ ಚುಲ್‌ಬುಲೀಸ್

7

ಚೆಲುವೆಯರ ನಲಿವಿನ ಚುಲ್‌ಬುಲೀಸ್

Published:
Updated:

ಅಡುಗೆ ಮನೆ, ಮಕ್ಕಳು ಹಾಗೂ ಗಂಡನಷ್ಟೇ ನಮ್ಮ ಪ್ರಪಂಚ, ಅದರಿಂದ ಹೊರಬರಬಾರದು ಎಂಬ ಮನೋಭಾವದ ಹಾಗೂ ಸಂಸಾರದ ಜಂಜಾಟದಿಂದ ಹೊರಬಾರದ ಸಾಕಷ್ಟು ಮಹಿಳೆಯರು ನಗರದಲ್ಲಿದ್ದಾರೆ. ಕೆಲಸದ ಒತ್ತಡಗಳಿಂದ ಬಿಡುವು ಸಿಗದೆ ಸಂತಸವನ್ನೇ ಮರೆತ ಸ್ತ್ರೀಯರೂ ಇದ್ದಾರೆ. ಅಂಥವರನ್ನು ಒಂದೆಡೆ ಸೇರಿಸಿ, ವಯಸ್ಸಿನ ಹಂಗು ತೊರೆದು ನಲಿಯುವಂತೆ ಮಾಡುತ್ತಿದೆ ‘ಚೆಲುವಿನ ಚುಲ್‌ಬುಲೀಸ್’.

‘ಚೆಲುವಿನ ಚುಲ್‌ಬುಲೀಸ್’ ಮಹಿಳೆಯರಿಂದ ಕೂಡಿದ ಕಿಟ್ಟಿ ಪಾರ್ಟಿಯ ತಂಡ. ಸಮಾನಮನಸ್ಕರು ಕಟ್ಟಿಕೊಂಡ ಈ ತಂಡಕ್ಕೆ 2017ರ ಮಿಸೆಸ್ ಗ್ಯಾಲಕ್ಸಿ ಸೆಕೆಂಡ್‌ ರನ್ನರ್ ಅಪ್‌ ವಿಜೇತೆ ಪ್ರಿಯಾ ಪ್ರಶಾಂತ್‌ರದ್ದೇ ನೇತೃತ್ವ. ಇಲ್ಲಿ 30 ರಿಂದ 70 ವಯಸ್ಸಿನವರು ಇದ್ದಾರೆ.

ಈ ತಂಡದಲ್ಲಿ ಸದ್ಯ 91 ಮಂದಿ ಇದ್ದಾರೆ. ಅವರಲ್ಲಿ ಬಹುತೇಕರು ಮನೆಗಳಲ್ಲಿದ್ದರೆ, ಕೆಲವರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ತಿಂಗಳಿಗೊಮ್ಮೆ ಒಂದೆಡೆ ಸೇರುವ ತಂಡದ ಸದಸ್ಯರು ಸಂಸಾರದ ಜಂಜಾಟ, ಕಚೇರಿಯ ಒತ್ತಡ ಮರೆತು ನಲಿಯುತ್ತಾರೆ.

ಒಂಡೆದೆ ಸೇರುವ ಸದಸ್ಯರೆಲ್ಲರೂ ಆಟವಾಡಿ ನಲಿಯುತ್ತಾರೆ. ಕುಂಟೆಬಿಲ್ಲೆ, ಕುಂಟಾಟ, ಗೋಣಿ ಚೀಲದ ಓಟ, ನೃತ್ಯ, ಸಂಗೀತ, ನಟನೆ, ನಾಟಕ ಪ್ರದರ್ಶನ, ಫ್ಯಾಷನ್ ಶೋ ಮುಂತಾದ ಸ್ಪರ್ಧೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ತಂಡದ ಪ್ರತಿಯೊಬ್ಬ ಸದಸ್ಯರು ತಮ್ಮಲ್ಲಿನ ಪ್ರತಿಭೆಯಲ್ಲಿ ಈ ಪಾರ್ಟಿಗಳಲ್ಲಿ ಹೊರಹಾಕುತ್ತಾರೆ.

ಈ ತಂಡದ ಸದಸ್ಯರನ್ನು ಏಳು ಮಂದಿಯ ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಿಂಗಳು ಒಂದೊಂದು ತಂಡವು ಕಿಟ್ಟಿ ಪಾರ್ಟಿ ಆಯೋಜಿಸಬೇಕಾಗುತ್ತದೆ. ಆ ತಂಡಕ್ಕೆ ಅನುಕೂಲವಾಗುವ ಜಾಗದಲ್ಲಿ ಪಾರ್ಟಿ ಆಯೋಜಿಸಿ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ವರ್ಷಕ್ಕೊಮ್ಮೆ ಮಾತ್ರ ಈ ತಂಡದ ಸದಸ್ಯತ್ವ ಪಡೆಯಲು ಅವಕಾಶವಿದೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಸದಸ್ಯತ್ವ ಪಡೆಯುವ ಅವಕಾಶವಿದ್ದು, ಫೇಸ್‌ಬುಕ್‌ನ ‘ಚೆಲುವಿನ ಚುಲ್‌ಬುಲೀಸ್’ ಪೇಜ್ ಮೂಲಕವೂ ತಂಡವನ್ನು ಸಂಪರ್ಕಿಸಬಹುದು.

ಆಲೋಚನೆ ಹುಟ್ಟಿದ್ದು ಹೀಗೆ
‘ನನಗೆ ತುಂಬಾ ಮಂದಿ ಸ್ನೇಹಿತರಿದ್ದಾರೆ. ಅವರನ್ನೆಲ್ಲ ಭೇಟಿಯಾದಾಗ, ‘ಅಯ್ಯಾ ಬಿಡು ಪ್ರಿಯಾ ಬರೀ ಅಡುಗೆ ಮಾಡುವುದು, ಮಕ್ಕಳು ಹಾಗೂ ಗಂಡನನ್ನು ನೋಡಿಕೊಳ್ಳುವುದು ಇಷ್ಟೇ ಆಗೋಗಿದೆ. ಅದರ ನಡುವೆ ನಮ್ಮ ಸಂತಸ ಹಾಗೂ ಪ್ರತಿಭೆಯ ಅನಾವರಣಕ್ಕೆ ಎಲ್ಲಿದೆ ಬಿಡುವು’ ಅನ್ನುತ್ತಿದ್ದರು. ಅವರಿಗೆ ಸಂತಸ ತಂದುಕೊಡುವ ಹಾಗೂ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಚೆಲುವಿನ ಚುಲ್‌ಬುಲೀಸ್ ಸ್ಥಾಪಿಸಿದೆ’ ಎನ್ನುತ್ತಾರೆ ಪ್ರಿಯಾ.

ಅನಾಥಾಶ್ರಮಕ್ಕೆ ನೆರವು
‘ಪ್ರತಿ ತಿಂಗಳು ಕಿಟ್ಟಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತೇವೆ. ಕಳೆದ ಎರಡು ವರ್ಷಗಳಿಂದ ಈ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದೆ. ನಮ್ಮ ಖುಷಿಯ ಜೊತೆಗೆ ಇತರರ ಖುಷಿಗೂ ಕಾರಣರಾಗಬೇಕೆಂಬ ಉದ್ದೇಶ=ದಿಂದ ಮುಂದಿನ ವರ್ಷ ತಂಡದ ಸದಸ್ಯರಿಂದ ಹೆಚ್ಚಿನ ಹಣ ಸಂಗ್ರಹಿಸಿ ಅದನ್ನು ಅನಾಥಾಶ್ರಮವೊಂದಕ್ಕೆ ನೀಡಲು ನಿರ್ಧರಿಸಿದ್ದೇವೆ’ ಎಂದರು.

ಸದಸ್ಯೆಯರ ಅಭಿಪ್ರಾಯ

ಚೆಲುವಿನ ಚುಲ್‌ಬುಲೀಸ್ ಹೆಸರು ಕೇಳಿದ ಕೂಡಲೇ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಲಿವಿನ ಕ್ಷಣಗಳು ನೆನಪಿಗೆ ಬರುತ್ತವೆ. ಕಿಟ್ಟಿ ಪಾರ್ಟಿಗಳಲ್ಲಿ ಪಾಲ್ಗೊಂಡಾಗ ನಾವೆಲ್ಲರೂ ಸಣ್ಣ ಮಕ್ಕಳಾಗುತ್ತೇವೆ. ಅದೇ ಖುಷಿ.
–ವಿದ್ಯಾ ವಿವೇಕ್

*

ಸ್ವಂತ ಕಂಪನಿ ಇದೆ. ಅಲ್ಲಿ ಕೆಲಸ ಮಾಡುವ ನಾನು ಒಂದು ರೋಟಿನ್ ಜೀವನಕ್ಕೆ ಅಂಟಿಕೊಂಡು ಬಿಟ್ಟಿದ್ದೆ. ಸ್ನೇಹಿತರ ಭೇಟಿಗೆ ಬಿಡುವು ಸಿಗುತ್ತಿರಲಿಲ್ಲ. ಈ ತಂಡಕ್ಕೆ ಸೇರಿದ ಬಳಿಕ ನನ್ನ ಜೀವನ ಶೈಲಿಯಲ್ಲಿ ಬದಲಾವಣೆಯಾಗಿದೆ.
–ಶೋಭಾ ನಿರಂಜನ್

*
ಆಗಿರುವುದರಿಂದ ನಿತ್ಯವೂ ಹಲವಾರು ಮೀಟಿಂಗ್‌
ಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಸಿಬ್ಬಂದಿಯನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ನನಗೆ ಅತಿಯಾದ ಸ್ಟ್ರೆಸ್ ಆಗುತ್ತದೆ. ಅದಕ್ಕೆ ಪರಿಹಾರವಾಗಿ ಕಿಟ್ಟಿ ಪಾರ್ಟಿ ನನಗೆ ಸ್ಟ್ರೆಸ್ ಬಸ್ಟರ್ ಆಗಿದೆ.
–ಮಾಧುರಿ ಮಿಥುನ್ 

*
ಫ್ರೋಸಿಲ್ ಎಂಬ ಸ್ಪೋರ್ಟ್ಸ್ ಕಂಪನಿ ನಡೆಸುತ್ತಿದ್ದೇನೆ. ಅದರಲ್ಲಿ ನನ್ನದು ಫೀಲ್ಡ್ ವರ್ಕ್‌ ಜಾಸ್ತಿ. ನಗರದ ಸಂಚಾರ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವುದು ಹಿಂಸೆಯಾಗುತ್ತದೆ. ಇದರಿಂದ ಒತ್ತಡ ಹೆಚ್ಚುತ್ತದೆ. ಒತ್ತಡ ನಿವಾರಣೆಗಾಗಿ ಕಿಟ್ಟಿ ಪಾರ್ಟಿಯಲ್ಲಿ 
ಪಾಲ್ಗೊಳ್ಳುತ್ತೇನೆ. 
–ಭಾವನಾ ಮಧುಕರ್

*
ಅನಾರೋಗ್ಯಕ್ಕೀಡಾಗಿದ್ದೆ. ಎಲ್ಲೂ ಹೊರಗಡೆ ಹೋಗಲು ಆಗುತ್ತಿರಲಿಲ್ಲ. ಪ್ರಿಯಾ ನನ್ನನ್ನು ಸಂಪರ್ಕಿಸಿ ಕಿಟ್ಟಿ ಪಾರ್ಟಿಗೆ ಕರೆದುಕೊಂಡು ಹೋದರು. ಕ್ರಮೇಣ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವೆ.
–ಲೀಲಾ ಕೃಷ್ಣ

*

ಮೂರು ವರ್ಷದಿಂದ ಈ ತಂಡದೊಂದಿಗೆ ಇದ್ದೇನೆ. ನನ್ನಲ್ಲಿ ಅಡಗಿದ ಎಲ್ಲ ಕಲೆಗಳಿಗೆ ಇಲ್ಲಿ ವೇದಿಕೆ ಸಿಕ್ಕಿದೆ. ಆಸಕ್ತರಿಗೆ ಆ ಕಲೆಗಳ ಬಗ್ಗೆ ಹೇಳಿಕೊಡುತ್ತಿದ್ದೇನೆ.
–ಗೀತಾ ಗಣೇಶ್

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !