ಶನಿವಾರ, ಜೂನ್ 19, 2021
22 °C
ಮಕ್ಕಳ ದಿನಾಚರಣೆ ವಿಶೇಷ

ಟ್ರಾಫಿಕ್ ಜಾಮು!

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Deccan Herald

ನಾಲ್ಕು ರಸ್ತೆ ಸೇರುವ ಜಾಗ

ನಿಂತಿವೆ ನೂರಾರು ಮೋಟಾರು!

ಕೊಳ್ಳಿರಿ ಅಕ್ಕ ಕೊಳ್ಳೋ ತಮ್ಮ

ದಾಹಕೆ ಬೇಡವೆ ನೀರು?

 

ಒರೆಸಲು ವಸ್ತ್ರ ಕುರುಕಲು ಸಸ್ತಾ

ಕೊಳ್ಳಿರಿ ಕಂದಗೆ ಆಟಿಕೆ ಕಾರು;

ಬರೆಯಲು ಪೆನ್ನು ಸೆರಗಿಗೆ ಪಿನ್ನು

ಯಾವುದು ಬೇಕು ಹೇಳಿ ಸಾರು!

 

ನೆರಿಗೆಯ ಚಿಮ್ಮುತ ಬಂದಳು ತರಳೆ

ಜೊತೆಗೇ ಮೊಳಗಿತು ಚಪ್ಪಾಳೆ!

ನೆಟಿಕೆಯ ಮುರಿದು ತೆಗೆದಳು ದೃಷ್ಟಿ

ಎಂಥ ವಿಚಿತ್ರ ಈ ಸೃಷ್ಟಿ!

 

ಪಕಳೆ ಪಕಳೆಯಲು ನಗುತಿದೆ ರೋಜ

ಹೂ ಮಾರುವ ಹುಡುಗಿ ಸರೋಜ!

ತೇಲಿ ಬರುತಲಿದೆ ಹುರಿದ ಕಡಲೆ ಘಮ

ಯಾರ ಶಾಪವೋ ಈ ಟ್ರಾಫಿಕ್ ಸಜ

 

ಅಕ್ಷಯ ಪಾತ್ರೆಯ ಅಗುಳಿನ ರೀತಿ

ನಿಂತಿದೆ ನೋಡಿ ವಾಹನ ಸಾಲು

ಸ್ಕೂಟರ್ ಕಾರು, ತುಂಬಿದ ಬಸ್ಸು

ರಸ್ತೆಯ ಬದಿಗೆ ಛೀ ಛೀ ಸುಸ್ಸು!

 

ಸಾಕೊ ಸಾಕಿದು ಟ್ರಾಫಿಕ್ ಜಾಮು

ಕಾರಿಗು ಕಾಲಿಗು ಹಿಡಿದಿದೆ ಜೋಮು!

ರೆಪ್ಪೆಯ ಮುಚ್ಚಿತು ಕೆಂಪನೆ ದೀಪ

ಅದೊ ಹೊಳೆಯುತಿದೆ ಹಸುರಿನ ರೂಪ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.