ಶನಿವಾರ, ಡಿಸೆಂಬರ್ 7, 2019
21 °C

ಕರ್ತಾರಪುರ ಕಾರಿಡಾರ್‌: ಭಾರತ–ಪಾಕಿಸ್ತಾನದ ನಡೆಗೆ ಚೀನಾ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಬೀಜಿಂಗ್‌: ಪಾಕಿಸ್ತಾನದ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ಮಂದಿರದಿಂದ, ಭಾರತದ ಪಂಜಾಬ್‌ನಲ್ಲಿರುವ ದೇರಾ ಬಾಬಾ ನಾನಕ್‌ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರಪುರ ಕಾರಿಡಾರ್‌ ನಿರ್ಮಾಣದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಕಾರ ನಡೆಸಿದ ‍ಪ್ರಯತ್ನವನ್ನು ಚೀನಾ ಸ್ವಾಗತಿಸಿದೆ.

ಎರಡು ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳ ಕುರಿತಂತೆ ಮಾತುಕತೆ ನಡೆದರೆ, ಜಾಗತಿಕ ಶಾಂತಿ ಹಾಗೂ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಿಳಿಸಿದೆ.

ಕರ್ತಾರಪುರ ಸಿಖ್‌ ಧರ್ಮಗುರು ಗುರುನಾನಕ್‌ದೇವ್‌ ಅವರ ಐಕ್ಯಸ್ಥಳ. ಭಾರತೀಯ ಸಿಖ್‌ ಯಾತ್ರಿಕರಿಗೆ ವೀಸಾ ಮುಕ್ತ ಸಂಚಾರ ಸೌಲಭ್ಯ ಕಲ್ಪಿಸುವ ಈ ಕಾರಿಡಾರ್‌ 4 ಕಿ.ಮೀ. ಉದ್ದವಿರಲಿದೆ. ಮುಂದಿನ ವರ್ಷ ಗುರು ನಾನಕ್‌ ಅವರ 550ನೇ ಜನ್ಮದಿನೋತ್ಸವದ ನಿಮಿತ್ತ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. 

‘ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಮಾತುಕತೆ ನಡೆಯುವುದನ್ನು ಎದುರುನೋಡುತ್ತಿದ್ದೇವೆ. ದಕ್ಷಿಣ ಏಷ್ಯಾದಲ್ಲಿ ಎರಡು ಮುಖ್ಯವಾದ ರಾಷ್ಟ್ರಗಳು. ಬಾಂಧವ್ಯವೃದ್ಧಿ ಮೂಲಕ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯ ಸ್ಥಿರತೆ ಕಾಪಾಡಲು ಇದರಿಂದ ಸಾಧ್ಯವಾಗಲಿದೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಗೆಂಗ್‌ ಶುವಾಂಗ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು