ಸತ್‍ಪ್ರಜೆಗಳಿಗೆ ಐನೂರು!

ಬುಧವಾರ, ಮೇ 22, 2019
32 °C

ಸತ್‍ಪ್ರಜೆಗಳಿಗೆ ಐನೂರು!

Published:
Updated:
Prajavani

ಗೌಡರು ಲೋಕಸಭೆ ಚುನಾವಣೆ ಮಜಾ ನೋಡ್ತಾ ಕೂತಿದ್ದಾಗ ಚಂದ್ರು ಹಾಜರಾದ. ‘ಅಯ್ಯೋ ಬಡ್ಡೆತ್ತದೇ ಸೆಕೇಲಿ ಎಲ್ಲೋಗಿದ್ದಲಾ ಇಷ್ಟು ದಿನ!’ ಅಂತ ಬರಮಾಡಿಕೊಂಡರು.

‘ಎಚ್‍ಎಂಟಿಗೋಗಿದ್ದೆ ಗೌಡ್ರೆ. ಅಲ್ಲಿ ವೋಟಿಗೆ ನಿಂತೋರಿಗೆ ಭಯದಲ್ಲಿ, ಟಿಕೆಟ್ ಸಿಗದೋರಿಗೆ ರೋಷದಲ್ಲಿ ನೀರು ಕಡೀತಿತ್ತು. ಜೋಡೆತ್ತು- ಕಳ್ಳೆತ್ತುಗಳು ಗುಮ್ಮಾಡತಿದ್ದೋ’ ಅಂದ ಚಂದ್ರು.

‘ಅಡಾ ಚಂದ್ರು, ಅಲ್ಲಿ ನೀನೇನು ಮಾಡತಿದ್ದೆ?’ ಅಂದ್ರು ಗೌಡರು. ಚಂದ್ರು ಅದಕ್ಕೆ ಉತ್ತರ ಕೊಟ್ಟ.

‘ಎದ್ದೇಟಿಗೆ ಕಾಂಗ್ರೇಸ್‌ ಆಪೀಸ್ ತಕ್ಕೆ ಹೋದ್ರೆ ಪಾಂಪ್ಲೆಟ್ಟು, ಐನೂರು ರೂಪಾಯಿ ಕೊಡತಿದ್ರು. ಹಂಗೇ ವಸಿ ವೊತ್ತು ತಟಾಡಿ ಬಿಜೆಪಿ ಆಪೀಸಿಗೋದ್ರೆ ಕಾರ್ಯಕರ್ತರು ಅಂತ ನಾಷ್ಟಾ ಕೊಡಿಸಿ ಐನೂರು ಕೊಡೋರು. ಮಧ್ಯಾನಕ್ಕೆ ಜೇಡಿಎಸ್ ಆಪೀಸಲ್ಲಿ ತಲೆ-ಮಾಂಸ ಮುದ್ದೆ ಊಟ. ರಾತ್ರಿಕೆ ಪಕ್ಷೇತರದ್ದು ಎಣ್ಣೆ ಕುಡಕಂಡು ಮನೆಗೋಯ್ತಿದ್ದೆ. ನೈಟು ಮಾಡಿದ್ರೆ ಎರಡು ಸಾವಿರ ಇನ್ಕಮ್ಮು ಗೌಡ್ರೆ’ ಅಂತ ತನ್ನ ಆದಾಯದ ವಿವರ ಕೊಟ್ಟ.

‘ಥೂ ನಿನ್ನ, ಚಿಲ್ರೆ ಕಾಸು ಹುಡಿಕ್ಕಂಡು ಅಲ್ಲಿಗೆಲ್ಲಾ ಹೋಯ್ತಿಲಾ! ಸರಕಾರ ವೋಟಿಂಗಿಗೆ ಏನೇನು ಬಕ್ಕಬಾರಲು ಬೀಳ್ತಾ ಅದೆ ಅಂತ ಗೊತ್ಲಾ ನಿನಗೆ’ ಅಂತ ಗೌಡರು ಕ್ಯಾಕರಿಸಿ ಉಗಿದರು.

‘ಗೊತ್ತದೇಳಿ! ಈ ಸಾರಿ 90 ಕೋಟಿ ಮತದಾರರಿಗೆ ವೋಟಾಕ್ಸಕೆ ಸರ್ಕಾರ 50,000 ಕೋಟಿ ರೂಪಾಯಿ ಖರ್ಚು ಮಾಡತಾದೆ. ಅಂದ್ರೆ ತಲಾ 550 ರೂಪಾಯಿ. ಇಷ್ಟಾದ್ರೂ ನೀವು ಬೆಂಗಳೂರಿನೋರು ಅರ್ಧಜನ ವೋಟಾಕಕೆ ವೋಗದೇ ಇರೋ ಸತ್ ಪ್ರಜೆಗಳಲ್ಲವೇನಪ್ಪಾ. ಬರೀ ಮಾತಾಡತೀರಾ! ನಾಚಿಕೆ ಆಗಬೇಕು ನಿಮಗೆ. ನಿಮಗಿಂತ ನಿಯತ್ತಿನ ನಮ್ಮ ಹಳ್ಳಿ ಜನವೇ ವಾಸಿ’.

ಬೀಗರೂಟಕ್ಕೋಗಿ ವೋಟು ಮಾಡದಿದ್ದ ಗೌಡರು ಬೆಪ್ಪಾದರು. ಚಂದ್ರು ಮುಂದುವರಿಸಿದ.

‘ಗೌಡ್ರೆ, ಬೆಂಗಳೂರಿಗೆ ಬುದ್ಧಿ ಬರಕ್ಕೆ ಒಂದು ತಿಂಗಳು ಕರಂಟು, ಕಾವೇರಿ ನೀರು ನಿಲ್ಲಿಸ್‌ಬೇಕು. ಇಂಟರ್ನೆಟ್ ಕತ್ತರಿಸ್‌ಬೇಕು, ಮೊಬೈಲ್ ಸಿಗ್ನಲ್ ಜಾಂ ಮಾಡ್ಬೇಕು. ಆಗ ದಾರಿಗೆ ಬತ್ತೀರಾ’ ಅಂದ ಚಂದ್ರು, ನಿಜವಾದ ಮತದಾರನಾಗಿ ಕಾಣಿಸತೊಡಗಿದ್ದ!

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !