ರಾಂಗ್ ಆತು ಎಣ್ಣೆಪಾರ್ಟಿ

7
ಚುರುಮುರಿ

ರಾಂಗ್ ಆತು ಎಣ್ಣೆಪಾರ್ಟಿ

Published:
Updated:
Prajavani

‘ಗೋರ್ನಮೆಂಟಿನೋರ್ಗೆ ಕುಡುಕರ ಮ್ಯಾಗೆ ಒಂದು ಡ್ರಾಪೂ ಕನಿಕರ ಇಲ್ರಿ. ಸಭ್ಯಸ್ಥರು ಕುಡಿಯೋ ಬಿಯರು ರೇಟು ಏರಿಸಿದ್ದು ಪರಮ ಅನ್ಯಾಯ’ ಅಂತ ರಾಂಗ್ ಆಗಿ ವಾದಕ್ಕೆ ನಿಂತ ಹನುಮಂತಿ.

‘ಬಿರಿಯಾನಿಗಿಂತ ಬಿಯರ್ ರೇಟೇ ಹೆವಿ ಆಗೋದ್ರೆ ಹೆಂಗ್ರಿ ಸಿವ. ನಾವೇನಾರ ಕಂಡೋರ ಕಿಸೆಗೆ ಕೈ ಹಾಕ್ತೀವಾ? ದುಡಿದ ರೊಕ್ಕದಾಗೆ ಕುಡಿತೀವ್ರಪಾ. ಯಾಕೇಳಿ? ಶ್ರಮಜೀವಿಗಳ್ರಿಯಪಾ ನಾವು. ಕಲ್ಲುಮಣ್ಣು ಹೊತ್ತು ದೇಹದ ಮೂಳೆಗಳೆಲ್ಲಾ ಸಂಜೆ ಹೊತ್ತಿಗೆ ಡಿಸ್‍ಲೊಕೇಟು. ಅದರ ಮ್ಯಾಗೆ ಹೆಂಡ್ತಿ ಟಾರ್ಚರ್‍ರು. ಇದನ್ನೆಲ್ಲಾ ಮರೆಯೋಕೆ ಬಾಟ್ಲಿ ಬೇಕ್ರಪಾ. ಲಂಚ ಹೊಡೆಯೋರು ದುಡ್ಡು ಹೆಚ್ಚಾಗಿ ಕುಡಿತಾರೆ. ಏಟು ದುಡಿದ್ರೂ ದುಡ್ಡು ಕೈಗೇ ಹತ್ತಂಗಿಲ್ಲ ಅಂತ ಥಿಂಕ್ ಮಾಡ್ತಾ ನಾವು ಡ್ರಿಂಕ್ಸ್ ತಗೋತೀವಿ. ನಾವೆಲ್ಲಾ ಎಣ್ಣೆ ಮುಟ್ಟಂಗಿಲ್ಲಂತ ಶಪಥ ಮಾಡಿದ್ರೆ ಗೋರ್ನಮೆಂಟು ಮೆಂಟಲ್ ಆಯ್ತದೆ. ನಾವು ಶಪಥ ಮಾಡಂಗಿಲ್ರಿ. ಯಾಕೇಳಿ? ನಮ್ಮನ್ನ ನಂಬಿದೋರು ಬರ್‍ಬಾದ್ ಆಗಬಾರ್ದು. ಎಣ್ಣೆ ಏರ್ಸಿ ನಾವು ಸತ್ತರೂ ಬಾರ್‍ನವರು ಬದುಕಬೇಕು. ಬಾರೇ ನಮ್ಮ ದೇವ್ರು. ನಮ್ಮಿಂದ್ಲೇ ಗೋರ್ನಮೆಂಟು ಅಂತ ನಾವೆಂದಾರಾ ಏನಾರ ಕೇಳೀವಾ? ವಿಷಪ್ರಸಾದ ತಿಂದು ಸತ್ತೋರಿಗೆಲ್ಲಾ ರೊಕ್ಕ ಕೊಟ್ರಿ. ನಿಮ್ಮ ವಿರುದ್ಧ ನಿಂತು, ಕುಡಿಬೇಡ್ರಿ ಅಂದ ಮಠಗಳಿಗೆಲ್ಲಾ ಕೋಟಿಗಟ್ಲೆ ಕೊಟ್ರಿ! ರೈತರಿಗೆ ಸಾಲನೂ ಕೊಟ್ಟು ಮನ್ನಾನೂ ಮಾಡ್ತೀರಿ. ಬಾಟ್ಲಿಬಾಯ್ಸ್‌ಗಳಿಗೇನ್ ಕೊಟ್ರಿ?’ ಎಂದು ತೂರಾಡುತ್ತಲೇ ವದರಿದ.

‘ನಮ್ಮಂಥ ಪರೋಪಕಾರಿಗುಳ್ನೂ ಆಡ್ಕೋತಾರೆ. ಸಿನಿಮಾ ತೆಗಿತಾರೆ, ಸಾಂಗ್ ಬರೀತಾರೆ. ನಾವೆಂದಾರಾ ಕಮಿಸನ್ ಕೇಳೀವಾ? ರಾಜಕಾರಣಿಗಳಂಗೆ ನಮ್ಮನ್ನ ನಾವು ಮಾರ್ಕೊಂಡೀವಾ? ಥುತ್ ನಮ್ಮ ರೇಟೇ ಏರ್ಲಿಲ್ಲ. ಎಣ್ಣೆ ರೇಟ್ ಮಾತ್ರ ಜಾಸ್ತಿ ಆತು. ವಿ ವಾಂಟ್ ಜಸ್ಟಿಸ್. ವಿಡೋ, ಹ್ಯಾಂಡಿಕ್ಯಾಪ್ಸು, ಓಲ್ಡೇಜ್‍ನೋರ್ಗೆ ಕೊಟ್ಟಂಗೆ ನಮ್ಗೂ ಮಂಥ್ಲಿ ‘ಡ್ರಿಂಕರ್ಸ್- ಪೆನ್ಶನ್’ ಅಂತ ಕೊಡ್ಲಿ. ಇಲ್ಲಾ ಅಂದ್ರೋ, ನಾವೂ ಗುಂಪು ಕಟ್ಕೊಂಡು ವಿಥ್ ಫ್ಯಾಮಿಲೀ ಇಧಾನಸೌಧಕ್ಕೆ ಬಾಟ್ಲಿ ಹಿಡ್ಕೊಂಡೇ ಜಾಥಾ ಬರ್ತೀವಿ. ಬಿ ಕೇರ್‌ಫುಲ್’ ರಾಂಗ್ ಆದ ಹನುಮಂತಿ ಚರಂಡಿಗೆ ಮುಗ್ಗರಿಸಿದ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !