ಮೊನ್ನೆ ಆನಂದನ ಫೋನ್ ಬಂದಿತ್ತು. ಮೊದಲು ಕರೆ ಮಾಡಿದ್ದು ಯಾರು ಎಂಬುದು ತಿಳಿಯಲಿಲ್ಲ. ‘ಯಾವ ಆನಂದ?’ ಎಂದು ಕೇಳಿದೆ. ‘ಸರ್, ನಾನು ಮುಂಬೈನಿಂದ ಮಾತನಾಡುತ್ತಿದ್ದೇನೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ತಾವು ಪ್ರಿನ್ಸಿಪಾಲರಾಗಿದ್ದಿರಿ ಸರ್’ ಎಂದು ಹೇಳಿದ. ಫೋನ್ನಲ್ಲಿ ಕೇಳಿಸುತ್ತಿದ್ದ ಗಡಸು ದನಿಗೂ ನಾನು ಹಿಂದೆಂದೊ ಕೇಳಿರಬಹುದಾಗಿದ್ದ ಹುಡುಗ ಆನಂದನ ಧ್ವನಿಗೂ ತಾಳೆಯಾಗಲಿಲ್ಲ. ‘ಹೌದಪ್ಪ, ಆನಂದ ಎನ್ನುವ ಎಷ್ಟೋ ಹುಡುಗರಿದ್ದರಲ್ಲ? ನಿನ್ನದು ಯಾವ ಬ್ಯಾಚು?’ ಎಂದು ಕೇಳಿ ನೆನಪಿನ ಗೂಡಿನಲ್ಲಿ ತುಂಬಿ ಹೋಗಿದ್ದ ಮಕ್ಕಳ ಚಿತ್ರಗಳನ್ನೆಲ್ಲ ಹೆಕ್ಕತೊಡಗಿದೆ.

ಆಗ ಆತ ಹೇಳಿದ, ‘ಹೌದು ಸರ್, ಆನಂದ ಎಂಬ ಹೆಸರಿನ ಹುಡುಗರು ಬಹಳಷ್ಟು ಜನ ಇರಬಹುದು. ಆದರೆ ನಾನು ವಿಶೇಷ ಆನಂದ ಸರ್. ನನ್ನ ಹಾಗೆ ಯಾರೂ ಇರುವುದು ಸಾಧ್ಯವಿಲ್ಲ ಅಲ್ಲವೇ ಸರ್? ನಾನು ಆರು ಬೆರಳಿನ ಆನಂದ’ ಎಂದ. ತಕ್ಷಣವೇ ನನಗೆಲ್ಲ ತಿಳಿದುಹೋಯಿತು. ಮಬ್ಬು ಸರಿದು ಆನಂದನ ಮುಖ ಕಣ್ಣಮುಂದೆ ಕಡೆದು ನಿಂತಿತು. ಹದಿನೈದು ವರ್ಷಗಳ ಹಿಂದೆ ನಡೆದುಹೋದ ಘಟನೆ ಈಗಷ್ಟೇ ನಡೆದಂತೆ ಮೈತುಂಬಿ ಮನದಲ್ಲಿ ಓಡಾಡಿತು.

ಹತ್ತನೆಯ ತರಗತಿಯ ಕ್ಲಾಸು. ತರಗತಿಗಳೆಲ್ಲ ಮುಗಿದಿದ್ದವು. ಇನ್ನು ಮುಂದೆ ಪರೀಕ್ಷೆ ಬರಲಿದೆ. ಅದಾದ ನಂತರ ಮಕ್ಕಳು ಎಲ್ಲೆಲ್ಲಿಗೆ ಹೋಗುತ್ತಾರೋ ತಿಳಿಯದು. ದೈವ ಅವರನ್ನು ಪ್ರಪಂಚದ ಯಾವ ಮೂಲೆಗೆ ಎಳೆದು ಒಯ್ಯುತ್ತದೋ ಗೊತ್ತಿಲ್ಲ.

ಅದಕ್ಕೆ ನಾನೊಂದು ವಿಚಾರಮಾಡಿ ತರಗತಿಗೆ ಬಂದಿದ್ದೆ. ‘ಇದೊಂದು ವಿಶೇಷ ತರಗತಿ. ನಿಮಗೆಲ್ಲ ಕೆಲವು ಅದ್ಭುತಗಳನ್ನು ಪರಿಚಯ ಮಾಡಿಸಲು ಬಂದಿದ್ದೇನೆ. ಇದನ್ನು ನೀವೆಂದೂ ಮರೆಯುವುದು ಸಾಧ್ಯವಿಲ್ಲ, ಮರೆಯಬಾರದು’ ಎಂದೆ. ಮಕ್ಕಳೆಲ್ಲ ಚುರುಕಾಗಿ ಮುಖದ ಮೇಲೆಲ್ಲ ಕುತೂಹಲ, ನಗೆ ಹರಡಿಕೊಂಡು ಕುಳಿತರು. ನಾನು ಆಗ, ‘ಮಕ್ಕಳೇ ನೀವೀಗ ನಿಮ್ಮ ಪಕ್ಕದಲ್ಲಿರುವ ವಿದ್ಯಾರ್ಥಿಗೆ ಎದುರು ಬದುರಾಗಿ ಕುಳಿತುಕೊಳ್ಳಿ. ನಿಮ್ಮ ಎದುರಿಗಿರುವ ವಿದ್ಯಾರ್ಥಿಯ ಮುಖವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ. ಮುಖದ ಒಂದೊಂದು ಭಾಗವನ್ನು ನೋಡುತ್ತ ಬನ್ನಿ. ತಲೆಗೂದಲು, ಕಣ್ಣಿನ ಹುಬ್ಬುಗಳು, ಕಣ್ಣಿನ ಹೊಳಪು, ಎವೆಗಳು, ಮೂಗಿನ ಬಾಗು, ಕಿವಿಗಳು, ತುಟಿಗಳು, ಗದ್ದ ಹೀಗೆ ಪ್ರತಿಯೊಂದನ್ನೂ ಗಮನವಿಟ್ಟು ನೋಡಿ’ ಎಂದೆ. ಅವರಿಗೆ ಇದನ್ನು ಏಕೆ ಮಾಡುತ್ತಿದ್ದೇವೆಂಬುದು ತಿಳಿಯದು. ಕೆಲವರಿಗೆ ಮೊದಮೊದಲು ಸ್ವಲ್ಪ ಇರಿಸು ಮುರಿಸಾದರೂ ಮುಂದೆ ಸಂತೋಷವಾಗಿ ಭಾಗವಹಿಸಿದರು.

ಐದು ನಿಮಿಷಗಳ ನಂತರ ಅವರನ್ನು ಮೊದಲಿನಂತೆ ಕುಳಿತುಕೊಳ್ಳಲು ಹೇಳಿ, ‘ಈಗ ನಿಮ್ಮ ಕೈಗಳನ್ನು ನಿಮ್ಮ ಮುಂದೆ ಇಟ್ಟುಕೊಂಡು ಹಸ್ತಗಳನ್ನು ಸೂಕ್ಷ್ಮವಾಗಿ ನೋಡುತ್ತ ಬನ್ನಿ. ಮಕ್ಕಳೇ ಇದೀಗ ನಿಮ್ಮ ಸ್ನೇಹಿತರ ಮುಖವನ್ನು ವಿವರವಾಗಿ ನೋಡಿದಿರಿ. ಅದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಂಥ ಮುಖ ಮುಂದೆ ನಿಮಗೆಂದೆಂದೂ ದೊರೆಯದು. ಪ್ರಪಂಚದ ಉದಯದಿಂದ ಅದರ ನಾಶದವರೆಗೆ ಇಂಥದೊಂದು ಮುಖ ಮೊದಲು ಸೃಷ್ಟಿಯಾಗಿರಲಿಲ್ಲ, ಮುಂದೆ ಅಗುವುದಿಲ್ಲ. ಅದೊಂದು ಪ್ರಪಂಚದ ವಿಶೇಷ ಅದ್ಭುತ. ಅಂಥ ಅದ್ಭುತವನ್ನು ಅಷ್ಟು ಹತ್ತಿರದಿಂದ ಸೂಕ್ಷ್ಮವಾಗಿ ನೋಡುವ ಅವಕಾಶ ನಿಮಗೆ ದೊರಕಿದೆ.

ಈಗ ನಿಮ್ಮ ಬೆರಳಿನ ತುದಿಗಳನ್ನು ಗಮನಿಸಿ. ಅವುಗಳ ಮೇಲಿದ್ದ ಗೆರೆಗಳನ್ನು ನೋಡಿ. ಮತ್ತೆ ಅವು ಅದ್ಭುತ. ಪ್ರಪಂಚ ಎಂದೆಂದೂ ಕಂಡಿರದ ಬೆರಳುಗಳವು. ಅವುಗಳ ಮೇಲಿನ ಗೆರೆಗಳು ಕೇವಲ ನಿಮ್ಮವು. ನಿಮ್ಮ ಹೊರತು ಯಾರಿಗೂ ಅವು ದೊರೆತಿರಲಿಲ್ಲ, ಮುಂದೆ ದೊರೆಯುವುದಿಲ್ಲ. ಇಂಥ ಅದ್ವಿತೀಯವಾದ, ವಿಶೇಷವಾದ ಅದ್ಭುತವನ್ನು ನಿಮಗಾಗಿ ನೀಡಿದ ಭಗವಂತನಿಗೆ ನೀವು ಋಣಿಯಾಗಿರಬೇಕಲ್ಲವೇ?’ ಎಂದೆ. ತರಗತಿಯಲ್ಲಿ ಒಂದು ಅವರ್ಣನೀಯವಾದ ಮೌನ ಆವರಿಸಿತ್ತು. ಮಕ್ಕಳು ತಾವೊಂದು ಅದ್ಭುತ, ತಮ್ಮ ಹಸ್ತರೇಖೆಗಳೊಂದು ಅದ್ಭುತ ಎಂದು ಗಮನಿಸುವುದರಲ್ಲಿ ತಲ್ಲೆನರಾಗಿದ್ದರು.

‘ಸರ್’ ಎಂಬ ಧ್ವನಿ ಮೌನವನ್ನು ಸೀಳಿತು. ತಿರುಗಿ ನೋಡಿದರೆ ಆನಂದ! ಅವನು ತರಗತಿಯಲ್ಲಿ ಎಂದೂ ಮಾತನಾಡಿದ್ದೇ ಇಲ್ಲ. ನಾಚಿಕೆಯ ಹುಡುಗ, ‘ಸರ್,’ ಎಂದು ಎಂದವನೇ ಮುಂದೆ ಬಂದು ನನ್ನ ಕಾಲಿಗೆ ನಮಸ್ಕಾರ ಮಾಡಿದ. ಏನಾಗುತ್ತಿದೆ ಎಂದು ನೋಡುವುದರಲ್ಲಿ ಆತ ಎದ್ದು ನಿಂತು ನನ್ನನ್ನು ಅಪ್ಪಿಕೊಂಡು ಬಿಟ್ಟ. ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ!

‘ಯಾಕಪ್ಪ?’ ಎಂದು ಕಣ್ಣೊರೆಸಿದೆ. ‘ದುಃಖವಿಲ್ಲ ಸರ್, ಸಂತೋಷ. ನಾನೊಬ್ಬ ವಿಶೇಷ ವ್ಯಕ್ತಿ ಎಂಬುದೇ ಗೊತ್ತಿರಲಿಲ್ಲ ಸರ್, ನನ್ನ ಕೈ ಬಗ್ಗೆ ನನಗೆ ಅಸಹ್ಯವಿತ್ತು ಸರ್, ಈ ತಿರುಚಿದ ಕೈ, ಅದಕ್ಕೆ ನೇತಾಡುತ್ತಿದ್ದ ಆರನೇ ಬೆರಳು ನನಗೆ ಹೇಸಿಗೆ ತರುತ್ತಿತ್ತು. ಈಗ ನನಗರ್ಥವಾಯಿತು. ಇದೊಂದು ಪ್ರಪಂಚದ ಅದ್ಭುತ. ಭಗವಂತ ನನಗಾಗಿ ಯಾವುದೋ ಪ್ರಯೋಜನಕ್ಕಾಗಿ ಸೃಷ್ಟಿ ಮಾಡಿದ್ದಾನೆ ಸರ್’ ಎಂದು ಹಿಗ್ಗಿನಿಂದ ಹೇಳಿದ.

ಇನ್ನೊಂದು ವಿಷಯ ಹೇಳುವುದನ್ನು ಮರೆತೆ. ತಾನೀಗ ಒಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದೇನೆಂದು ಆನಂದ ಫೋನಿನಲ್ಲಿ ಹೇಳಿದ. ಅವನಲ್ಲಿ ಅತ್ಮವಿಶ್ವಾಸ ಒಸರುತ್ತಿತ್ತು, ನಾವೆಲ್ಲ ಅದ್ಭುತಗಳು. ಸಣ್ಣವರಲ್ಲ. ನಮ್ಮನ್ನು ಭಗವಂತ ವಿಶೇಷವಾಗಿ ನಿರ್ಮಿಸಿದ್ದಾನೆ. ನಾವು ನಿರ್ಮಾಣವಾದದ್ದೇ ಅದ್ಭುತವಾದ ಸಾಧನೆಗಳನ್ನು ಮಾಡಲು. ಹಾಗೆ ಮಾಡದೇ ಹೋದರೆ ಅವನ ಆಶಯಕ್ಕೆ ನಾವು ನಿರಾಸೆಯನ್ನು ಮಾಡಿದಂತೆ. ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.