ರೈತರಿಗೂ ಬ್ಯಾಂಕ್ ಕ್ರೆಡಿಟ್ ಕಾರ್ಡ್

ಸೋಮವಾರ, ಮೇ 27, 2019
27 °C

ರೈತರಿಗೂ ಬ್ಯಾಂಕ್ ಕ್ರೆಡಿಟ್ ಕಾರ್ಡ್

Published:
Updated:

ನವದೆಹಲಿ, ಮೇ 6 (ಪಿಟಿಐ)– ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ಗಳನ್ನು ಈಗ ರೈತರಿಗೆ ನೀಡಲಾಗುತ್ತಿದೆ.

ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಸಾರ್ವಜನಿಕ ವಲಯದ 20 ಬ್ಯಾಂಕ್‌ಗಳು ಯೋಜನೆಯನ್ನು ಜಾರಿ ಮಾಡಿವೆ ಎಂದು ಇಂದು ಲೋಕಸಭೆಯಲ್ಲಿ ತಿಳಿಸಲಾಯಿತು.

ಉತ್ತಮ ಕ್ರೆಡಿಟ್ ದಾಖಲೆಯನ್ನು ಹೊಂದಿದ ರೈತರಿಗೆ ಈ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಂ.ವಿ. ಚಂದ್ರಶೇಖರ ಮೂರ್ತಿ ಅವರು ಶೀಲಾ ಗೌತಂ ಅವರಿಗೆ ಪ್ರಶ್ನೋತ್ತರ ವೇಳೆಯಲ್ಲಿ
ತಿಳಿಸಿದರು.

ಶಂಕರಾಚಾರ್ಯರ ಆಗ್ರಹ

ವಾರಾಣಸಿ, ಮೇ 6 (ಯುಎನ್‌ಐ)– ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವ ಸಲುವಾಗಿ ಕೇಂದ್ರವು ಆ ಪ್ರದೇಶವನ್ನು ಸಂತರಿಗೆ ವಹಿಸಿಕೊಡಬೇಕೆಂದು ದ್ವಾರಕಾ ಪೀಠದ ಶಂಕರಾಚಾರ್ಯರು ಆಗ್ರಹಪಡಿಸಿದ್ದಾರೆ.

ಈಗಾಗಲೇ 26 ಜನರ ‍ಸಮಿತಿಯನ್ನು ರಚಿಸಲಾಗಿದ್ದು, ರಾಮಜನ್ಮಭೂಮಿಯನ್ನು ಸಂತರಿಗೆ ವರ್ಗಾಯಿಸಬೇಕೆಂದು ನಿರ್ಣಯದ ಮೂಲಕ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ಒತ್ತಾಯಿಸಲಾಗಿದೆ ಎಂದ ಶಂಕರಾಚಾರ್ಯ ಸ್ವಾಮಿ ಸ್ವರೂ‍ಪಾನಂದ ಸರಸ್ವತಿ ಅವರು, ಈ ಕುರಿತು ಕೇಂದ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತ‍ಪಡಿಸಿಲ್ಲ ಎಂದು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !