ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಅನವಶ್ಯಕವಾದ ಕಠೋರ ಪ್ರವೃತ್ತಿ

Last Updated 26 ಮೇ 2019, 19:45 IST
ಅಕ್ಷರ ಗಾತ್ರ

ವಾರಣಾಸಿಯಲ್ಲಿ ಬ್ರಹ್ಮದತ್ತರಾಜ್ಯಭಾರಮಾಡುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿಒಂದು ವಾನರನಾಗಿ ಹುಟ್ಟಿದ್ದ. ಅವನ ಹೆಸರು ನಂದಿಯ. ಆತನಿಗೊಬ್ಬತಮ್ಮ. ಅವನ ಹೆಸರುಚುಲ್ಲನಂದಿಯ. ಇವರತಾಯಿಕುರುಡಿ. ಇಬ್ಬರೂ ಮಕ್ಕಳುಇಡೀ ವಾನರರ ಗುಂಪಿಗೆ ನಾಯಕರು. ಮಕ್ಕಳಿಬ್ಬರೂ ಕುರುಡಿತಾಯಿಯನ್ನುಒಂದು ಪೊದೆಯಲ್ಲಿ ಮಲಗಿಸಿ, ಎಲ್ಲ ವ್ಯವಸ್ಥೆ ಮಾಡಿಆಹಾರ ಹುಡುಕಲು ಹೋಗುತ್ತಿದ್ದರು. ಇವರುತಾಯಿಗೆಂದು ಕಳುಹಿಸುತ್ತಿದ್ದ ಹಣ್ಣು, ಹಂಪಲಗಳನ್ನು ಸೇವಕ ಕೋತಿಗÀಳು ಮಧ್ಯದಲ್ಲೇತಿಂದುಬಿಡುತ್ತಿದ್ದುರಿಂದತಾಯಿಗೆ ಅವು ದಕ್ಕದೇ ಆಕೆ ಸೊರಗಿ ಹೋಗಿದ್ದಳು.

ಇದನ್ನು ಗಮನಿಸಿ ಬೋಧಿಸತ್ವಕೋತಿತನ್ನತಮ್ಮನಿಗೆ ಹೇಳಿತು, “ತಮ್ಮಾ, ನಾವು ಇಚ್ಛಿಸಿದಂತೆ ತಾಯಿಯ ಸೇವೆ ಆಗುತ್ತಿಲ್ಲ, ಆಕೆಯನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಮ್ಮಧರ್ಮ. ಆದ್ದರಿಂದ ನಾನು ನಾಯಕತ್ವವನ್ನು ಬಿಡುತ್ತೇನೆ. ನೀನು ನಾಯಕನಾಗಿ ಕೆಲಸ ನಡೆಯಿಸು. ನಾನು ತಾಯಿಯನ್ನು ನೋಡಿಕೊಳ್ಳುತ್ತೇನೆ”. ತಮ್ಮಚುಲ್ಲನಂದಿಯ, “ಅಣ್ಣಾ, ನಾಯಕತ್ವಯಾರಿಗೆ ಬೇಕು? ನಾವಿಬ್ಬರೂ ಸೇರಿತಾಯಿಯ ಸೇವೆಮಾಡಿಆಕೆಯನ್ನು ಸಂತೋಷವಾಗಿಇರಿಸೋಣ” ಎಂದ. ಅವರಿಬ್ಬರೂ ಹಿಮಾಲಯವನ್ನು ಬಿಟ್ಟುಗಡಿಪ್ರದೇಶದಒಂದುದೊಡ್ಡಆಲದ ಮರದ ಕೆಳಗೆ ವಾಸಮಾಡತೊಡಗಿದರು.

ಇದೇ ಸಮಯದಲ್ಲಿ ಬ್ರಾಹ್ಮಣಯುವಕನೊಬ್ಬ ತಕ್ಷಶಿಲೆಯಲ್ಲಿಅತ್ಯಂತ ಪ್ರಸಿದ್ಧನಾದ ಗುರುವಿನಿಂದ ಬಿಲ್ಲುವಿದ್ಯೆಯನ್ನುಕಲಿತು ಪಾರಂಗತನಾದ. ಶಿಕ್ಷಣ ಮುಗಿದು ಮನೆಗೆ ತೆರಳುವಾಗ ಗುರು ಹೇಳಿದ, “ಮಗೂ, ನಿನಗೆ ಬಿಲ್ಲುವಿದ್ಯೆದೊರೆತಿದೆ. ಆದರೆ ನೀನು ಕಠೋರ ಮನಸ್ಸಿನ ತರುಣ. ಯಾರಿಗೂಅನಾವಶ್ಯಕವಾಗಿತೊಂದರೆಮಾಡಬೇಡ, ಅತಿಯಾಸೆ ಪಡಬೇಡ. ಎಂದಿಗೂ ಪಶ್ಚಾತ್ತಾಪ ಪಡುವಂಥ ಕೆಲಸ ಮಾಡಬೇಡ”. ತರುಣ ಗುರುಗಳ ಆಶೀರ್ವಾದ ಪಡೆದು ನನ್ನಊರಿಗೆ ಮರಳಿದ. ದಿನವೂ ಕಾಡಿಗೆ ಹೋಗಿ ಬೇಟೆಯಾಡಿ, ಮಾಂಸವನ್ನು ಮಾರಿಜೀವನ ಸಾಗಿಸುತ್ತಿದ್ದ.

ಒಂದು ದಿನ ಯಾವುದೂ ಬೇಟೆ ಸಿಗಲಿಲ್ಲವೆಂದು ಹುಡುಕುತ್ತ ಈ ಬೇಟೆಗಾರಗಡಿಪ್ರದೇಶದಲ್ಲಿದ್ದಆಲದಮರದ ಬಳಿಗೆ ಬಂದ. ಅವನು ಬರುವುದನ್ನುಕಂಡು ಬೋಧಿಸತ್ವ ಹಾಗೂ ಚುಲ್ಲನಂದಿಯರಿಬ್ಬರೂ ಯೋಚಿಸಿ ಆತ ವಯಸ್ಸಾದ ತಾಯಿ ಕೋತಿಯನ್ನು ಹೊಡೆಯಲಾರ ಎಂದುಕೊಂಡು ಇಬ್ಬರೂ ಮರವನ್ನೇರಿಅಡಗಿ ಕುಳಿತರು. ಆತ ದುರಾಸೆಯುಳ್ಳವನು. ಏನೂ ಸಿಕ್ಕಿಲ್ಲವಲ್ಲ, ಈ ಮುದಿ ಕೋತಿಯನ್ನಾದರೂ ಕೊಂದು ಮನೆಗೆ ಒಯ್ಯುತ್ತೇನೆ ಎಂದು ಬಾಣವನ್ನು ಗುರಿಇಟ್ಟ.

“ಅಯ್ಯೋ ತಾಯಿಯನ್ನು ಆತ ಹೊಡೆದು ಬಿಡುತ್ತಾನೆ. ತಾನು ಸತ್ತರೂ ತಾಯಿಗೇನೂ ಆಗುವುದು ಬೇಡ” ಎಂದು ಬೋಧಿಸತ್ವ ಕೆಳಗೆ ಹಾರಿತಾಯಿಯ ಮುಂದೆ ನಿಂತುತಾಯಿಗೇನೂ ಮಾಡಬೇಡ ಎಂದು ಬೇಡಿಕೊಂಡ. ಚುಲ್ಲನಂದಿಯಾನೂ ಹಾರಿಕೊಂಡು, ಅಣ್ಣ ಮತ್ತು ತಾಯಿಯನ್ನು ಬಿಟ್ಟು ಬಿಡು, ಬದಲಾಗಿ ನನ್ನನ್ನು ಕೊಲ್ಲು ಎಂದು ಬೇಡಿಕೊಂಡ. ಕರುಣೆಯ ಭಾಷೆಯನ್ನೇ ಮರೆತಿದ್ದ ಈ ಕಠೋರನಿಗೆ ಈ ತ್ಯಾಗದ ಮಾತು ಹೇಗೆ ಅರ್ಥವಾದೀತು. ಆತ ಸಂತೋಷದಿಂದ ಮೂವರನ್ನು ಕೊಂದು, ಹೊತ್ತುಕೊಂಡು ನಡೆದ. ಅವನು ತನ್ನ ಮನೆಯ ಹತ್ತಿರಕ್ಕೆ ಬರುತ್ತಿದ್ದಂತೆ ಈ ಪಾಪಿಯ ಮನೆಗೆ ಸಿಡಿಲು ಬಡಿಯಿತು. ಮನೆಗೆ ಬೆಂಕಿ ಹತ್ತಿತು, ಕುಸಿದು ಬಿದ್ದ ಅವನ ಹೆಂಡತಿ ಮತ್ತು ಇಬ್ಬರು ಮಕ್ಕಳು ಸತ್ತುಹೋದರು. ಅವರ ಸಾವನ್ನುತನ್ನಕಣ್ಣಿಂದಲೇ ನೋಡುವ ದೌರ್ಭಾಗ್ಯ ಆತನದಾಯಿತು. ಆಗ ತನ್ನಗುರು ಹೇಳಿದ ಮಾತು ಕಠೋರತೆಯನ್ನು ಮರೆತುಕರುಣೆಯನ್ನು ತೋರುವ ಮಾತು ನೆನಪಿಗೆ ಬಂತು. ಆದರೆತಡವಾಗಿ ಹೋಗಿತ್ತು.

ನಾವು ಮಾಡಿದ ಅನ್ಯಾಯಗಳಿಗೆ ಇದೇ ಜನ್ಮದಲ್ಲೇ ಶಿಕ್ಷೆ ಕಟ್ಟಿಟ್ಟಿದ್ದು. ಸ್ವರ್ಗ, ನರಕವೆಂಬುದು ಹೊರಗಿಲ್ಲ. ಎಲ್ಲವೂ ಇಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT