ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆ ಯುದ್ಧಕ್ಕೆ ಮನಸ್ಸಿಲ್ಲ: ಪಾಕಿಸ್ತಾನ

ಐಎಸ್‌ಪಿಆರ್‌ ಮಹಾನಿರ್ದೇಶಕರ ಹೇಳಿಕೆ
Last Updated 4 ಜೂನ್ 2018, 15:53 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ : ಭಾರತದ ಜತೆ ಯುದ್ಧ ಮಾಡಬೇಕು ಎಂಬ ಮನಸ್ಸಿಲ್ಲ; ಆದರೆ, ಶಾಂತಿಯಿಂದಿರಬೇಕು ಎಂಬ ನಮ್ಮ ಬಯಕೆಯನ್ನೇ ತಪ್ಪು ತಿಳಿದುಕೊಳ್ಳಬಾರದು ಎಂದು ಪಾಕಿಸ್ತಾನದ ಸೇನೆ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಮಾಧ್ಯಮ ವಿಭಾಗ ‘ಇಂಟರ್‌ ಸರ್ವೀಸಸ್ ಪಬ್ಲಿಕ್‌ ರಿಲೇಷನ್ಸ್‌’ನ (ಐಎಸ್‌ಪಿಆರ್‌) ಮಹಾನಿರ್ದೇಶಕ ಮೇಜರ್‌ ಜನರಲ್‌ ಆಸಿಫ್‌ ಘಫೂರ್, ಈ ವರ್ಷಾರಂಭದಿಂದ ಭಾರತ 1,077 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದರು.

‘ಭಾರತದ ದಾಳಿಗೆ ‍ಪಾಕಿಸ್ತಾನ ಪ್ರತಿಯಾಗಿ ದಾಳಿ ನಡೆಸಿಲ್ಲ. 2003ರಲ್ಲಿ ಕದನವಿರಾಮ ಉಲ್ಲಂಘನೆ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದದ ಅನ್ವಯ, ಕಳೆದ ವಾರ ಉಭಯ ದೇಶಗಳ ಸೇನೆ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಪಾಲಿಸಿದ್ದೇವೆ. ಆದರೆ, ನಾಗರಿಕರ ಮೇಲೆ ದಾಳಿ ನಡೆದಾಗ ಒತ್ತಾಯಪೂರ್ವಕವಾಗಿ ಪ್ರತಿದಾಳಿ ಮಾಡಬೇಕಾಯಿತು’ ಎಂದು ಅವರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.

ಪಾಕಿಸ್ತಾನ ಒಪ್ಪಂದಕ್ಕೆ ಗೌರವ ನೀಡುವುದನ್ನು ಬಯಸುತ್ತದೆ ಎಂದು ಘಫೂರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT