ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಮಳೆ ನಕ್ಷತ್ರ ಕೃತ್ತಿಕಾ ಅಷ್ಟಮಿ ಗಂ. 10-33 (ಹ. 10-15) ಶುಕ್ರವಾರ ನಿತ್ಯ ನಕ್ಷತ್ರ ಧನಿಷ್ಠ ಗಂ. 11-9 (ಹ. 10-29) ಐಂದ್ರ ನಾಮ ಯೋಗ ಗಂ 53-44 ಕೌಲವ ಕರಣ ಗಂ 10-33 ವಿಷ ಗಂ. 30-35 ಅಮೃತ ಗಂ 56-30 ರಾಹುಕಾಲ ಬೆ ಗಂ. 10-30 ರಿಂದ 12-00 ಗುಳಿಕ ಬೆ ಕಾಲ ಗಂ 7-30 ರಿಂದ 9-00 ಯಮಗಂಡ ಕಾಲ ಮ ಗಂ 3-00 ರಿಂದ 4-30 ಸೂರ್ಯೋದಯ: 5-58 ಸೂರ್ಯಾಸ್ತ: 6-34 ಅದೃಷ್ಟ ಸಂಖ್ಯೆ 1, 8

ಮೇಷ: ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಸರಳ ವಿವಾಹದ ನಿಶ್ಚಯದಿಂದಾಗಿ ಮನೆಯಲ್ಲಿ ಸಂತಸ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ.

ವೃಷಭ: ಬಂಧುವಿನ ಮನೆಯಲ್ಲಿ ಸಂಜೆಯವರೆಗೂ ವಿಶೇಷ ಸಮಾರಂಭಗಳಲ್ಲಿ ಭಾಗಿಯಾಗಿ ಭೋಜನಕೂಟದಲ್ಲಿ ಭಾಗವಹಿಸುವ ಸಾಧ್ಯತೆ. ಮನೆಯವರ ವಿಷಯದಲ್ಲಿ ಉದಾಸೀನ ಸಲ್ಲದು. ವ್ಯವಹಾರಗಳು ಎಂದಿನಂತೆ ನಡೆಯಲಿವೆ.

ಮಿಥುನ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸಿ ಮಾಡಿದ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಪದೋನ್ನತಿಯಿಂದಾಗಿ ಉತ್ತಮ ಆದಾಯ.

ಕರ್ಕಾಟಕ: ವೃತ್ತಿ ಜೀವನದಲ್ಲಿ ಬದಲಾವಣೆ ಸಾಧ್ಯತೆ. ಆದಾಯದಲ್ಲಿ ಹೆಚ್ಚಳ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆಯನ್ನು ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತವಾಗಲಿದೆ. ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉಚಿತ.

ಸಿಂಹ: ವ್ಯವಹಾರದಲ್ಲಿ ಅತಿಯಾದ ಕಾರ್ಯಬಾಹುಳ್ಯದಿಂದಾಗಿ ದೇಹಾಲಸ್ಯ. ವೈಯಕ್ತಿಕ ವ್ಯವಹಾರದ ನಿಮಿತ್ತ ಕೆಲಸದಿಂದ ಬಿಡುವು ಪಡೆದುಕೊಳ್ಳುವಿರಿ. ಬಹುದಿನಗಳ ನಂತರ ಬಿಡುವಿನ ದಿನದ ಸವಿಯನ್ನು ಉಣ್ಣಲಿದ್ದೀರಿ.

ಕನ್ಯಾ: ವೃತ್ತಿ ನೈಪುಣ್ಯತೆಯಿಂದಾಗಿ ನೌಕರಸ್ಥರಿಗೆ ವಿಶೇಷ ಸ್ಥಾನಮಾನ ದೊರಕಲಿದೆ. ಪದೋನ್ನತಿಯಿಂದಾಗಿ ಆರ್ಥಿಕ ಸುಧಾರಣೆ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೆಗೆ ಹೊಸ ಸದಸ್ಯರ ಸೇರ್ಪಡೆಯ ಸಂಭ್ರಮ.

ತುಲಾ: ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಸ್ನೇಹಿತರು ಮತ್ತು ಬಂಧುಗಳೊಂದಿಗಿನ ಸಂಬಂಧಗಳು ಗಟ್ಟಿಗೊಳ್ಳುವ ಸಂಭವ. ಮನೆಯವರ ಮನ ಮೆಚ್ಚಿಸಲು ಅನ್ಯ ಮಾರ್ಗದ ಸಂಪಾದನೆ ಸರಿಯಲ್ಲ.

ವೃಶ್ಚಿಕ: ಆಭರಣ ತಯಾರಿಕೆ, ಗೃಹಾಲಂಕಾರ ಸಾಮಗ್ರಿ ಮುಂತಾದ ಕರಕುಶಲ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಚ್ಚಿನ ವರಮಾನ. ನೆನೆಗುದಿಗೆ ಬಿದ್ದಿರುವ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಲು ಚುರುಕು ಪಡೆದುಕೊಳ್ಳುವವು.

ಧನು: ಕೆಲಸ–ಕಾರ್ಯಗಳಲ್ಲಿ ಸಂಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಮನೆಯ ಜವಾಬ್ದಾರಿಯನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಿ ಅನ್ಯರ ಪ್ರಶಂಸೆಗೆ ಪಾತ್ರರಾಗುವಿರಿ.

ಮಕರ: ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಆಸ್ತಿ ಖರೀದಿಯ ಸಾಧ್ಯತೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ. ಗೆಳೆಯರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ.

ಕುಂಭ: ನಿಮ್ಮ ರಾಜಕೀಯ ವಿಷಯದಲ್ಲಿ ಬದಲಾವಣೆಯೊಂದನ್ನು ಕಾಣಲಿದ್ದೀರಿ. ನಿಮ್ಮ ಪ್ರಭಾವದಿಂದಾಗಿ ನೆರೆಹೊರೆಯವರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಾಧ್ಯತೆ.

ಮೀನ: ಅನಗತ್ಯ ಮಾತುಕತೆ, ಚರ್ಚೆಗಳಲ್ಲಿ ಭಾಗವಹಿಸದಿರುವುದೇ ಉತ್ತಮ. ವಕೀಲ ವೃತ್ತಿಯಲ್ಲಿರುವವರಿಗೆ ಬಿಡುವಿನ ದಿನ. ಪ್ರಯಾಣ ಪ್ರವಾಸಗಳಿಗೆ ಶುಭದಿನವಾಗಲಿದೆ. ಚಿನ್ನಾಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.