ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಭವಿಷ್ಯ 2021| ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ

Last Updated 1 ಜನವರಿ 2021, 1:55 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಎಂಬ ಸಾಂಕ್ರಾಮಿಕ ರೋಗ ಮತ್ತು ಇನ್ನಿತರಕಾರಣಗಳಿಂದಾಗಿ 2020 ಹಲವರಿಗೆ ಕಷ್ಟ, ನಷ್ಟಗಳನ್ನು ತಂದೊಡ್ಡಿತು. 2021ರಲ್ಲಾದರೂ ಬದುಕುಸುಧಾರಣೆಯಾಗಲಿದೆಯೇ ಎಂಬ ಪ್ರಶ್ನೆ ಸಾರ್ವತ್ರಿಕವಾಗಿದೆ. ಈ ವರ್ಷ ಯಾವ ರಾಶಿಗಳಿಗೆ ಏನೇನು ಫಲಗಳು ಲಭಿಸಲಿವೆ ಎಂಬುದರ ಮುನ್ನೋಟವನ್ನು ಇಲ್ಲಿ ನೀಡಲಾಗಿದೆ.

***

ಮೇಷ

ಆರೋಗ್ಯದಲ್ಲಿ ಹೆಚ್ಚಿನ ಗಮನ ಅಗತ್ಯ. ಕೆಲಸದಲ್ಲಿ ಸಣ್ಣಪುಟ್ಟ ಅಡಚಣೆ ಇದ್ದರೂ ಏಪ್ರಿಲ್ ನಂತರದಲ್ಲಿ ಸ್ವಲ್ಪ ಪ್ರಮಾಣದ ಲಾಭವನ್ನು ಕಾಣುವ ಯೋಗವಿದೆ. ಹಣಕಾಸಿನ ತೊಂದರೆ ನಿವಾರಣೆಗಾಗಿ ಲಕ್ಷ್ಮಿ ನರಸಿಂಹನಿಗೆ ಪಂಚಾಮೃತ ಅಭಿಷೇಕ ಮತ್ತು ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡುವುದು ಒಳಿತು.

ವೃಷಭ

ಹೊಸ ಉದ್ಯೋಗದ ಆಲೋಚನೆ ಮೂಡಲಿದೆ. ಸ್ನೇಹಿತರ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ. ಮಕ್ಕಳ ವಿಚಾರದಲ್ಲಿ ಮತ್ತು ತಾಯಿಯ ಆರೋಗ್ಯದಲ್ಲಿ ಹೆಚ್ಚಿನ ಗಮನ ಕೊಡುವುದು ಉತ್ತಮ ಸಮಸ್ಯೆಗಳ ಪರಿಹಾರಕ್ಕಾಗಿ ಹುಣ್ಣಿಮೆಯಂದು ಉಪ್ಪಿನ ತುಲಾಭಾರ, ರಾಹುಕಾಲದಲ್ಲಿ ದೇವಿಯ ದರ್ಶನದಿಂದ ಹೆಚ್ಚಿನ ಲಾಭವನ್ನು ಪಡೆಯಿರಿ

ಮಿಥುನ

ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಮತ್ತು ಅಧಿಕ ಖರ್ಚಿನಿಂದ ಮನಸ್ಸಿಗೆ ಚಿಂತೆ. ಭೂಮಿ ಅಥವಾ ಮನೆ ಖರೀದಿಸುವ ಯೋಗವು ಈ ರಾಶಿಯವರಿಗೆ ಇದೆ. ಶೃಂಗೇರಿ ಜಗದ್ಗುರುಗಳ ಪಾದಪೂಜೆ ಮತ್ತು ಅನ್ನಪೂರ್ಣೇಶ್ವರಿ ದರ್ಶನದಿಂದ ಹೆಚ್ಚಿನ ಲಾಭ ಕಾಣಬಹುದು.

ಕರ್ಕಾಟಕ

ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ. ಹೊಸ ಉದ್ಯೋಗ ಅಥವಾ ಹೊಸ ವ್ಯಾಪಾರದಿಂದ ಯಶಸ್ಸು ಸಿಗಲಿದೆ. ಕೆಲವು ದಿನಗಳಿಂದ ಅನುಭವಿಸುತ್ತಿದ್ದ ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ನಿವಾರಣೆಯಾಗಲಿದೆ. ನಂಜುಂಡೇಶ್ವರನ ದರ್ಶನ ಮತ್ತು ಅಂಬಲಪಾಡಿ ದುರ್ಗಾಪರಮೇಶ್ವರಿ ಪೂಜೆಯಿಂದ ಹೆಚ್ಚಿನ ಅನುಕೂಲವಾಗಲಿದೆ.

ಸಿಂಹ

ದುಡ್ಡಿನ ವಿಚಾರದಲ್ಲಿ ಸಣ್ಣಪುಟ್ಟ ಮನಸ್ತಾಪವ ಉಂಟಾಗಲಿದೆ. ತಾಯಿಯ ಆರೋಗ್ಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಏಪ್ರಿಲ್ ನಂತರ ಹೊಸ ಉದ್ಯೋಗ, ಹೊಸ ಕೆಲಸವು ನಿಮ್ಮನ್ನು ಅರಸಿ ಬರಲಿದೆ. ಏಕವಾರ ರುದ್ರಾಭಿಷೇಕ ಮತ್ತು ಸಮುದ್ರ ಸ್ನಾನದಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.

ಕನ್ಯಾ

ಹಣಕಾಸಿನ ಸಮಸ್ಯೆ, ಕೆಲಸದಲ್ಲಿನ ಒತ್ತಡ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ. ಹಿತ ಶತ್ರುಗಳ ಕಾಟ ಮತ್ತು ಕೆಲಸದ ಹುಡುಕಾಟವು ಸದ್ಯದಲ್ಲೇ ಪರಿಹಾರವಾಗಲಿದೆ. ಸಮಸ್ಯೆಗಳ ಪರಿಹಾರಕ್ಕೆ, ದುರ್ಗಾಸಪ್ತಶತಿ ಮತ್ತು ವೀರಭದ್ರ ದೇವರ ಆರಾಧನೆ ಮಾಡುವುದು ಒಳಿತು.

ತುಲಾ

ಹೊಸ ಮನೆ ಅಥವಾ ಆಸ್ತಿ ಖರೀದಿ ಮಾಡುವ ಯೋಗ ನಿಮ್ಮದಾಗಲಿದೆ. ಮಕ್ಕಳಿಂದ ಕೀರ್ತ ಸಂಪಾದನೆ. ಹೊಸ ಉದ್ಯಮದಲ್ಲಿ ಯಶಸ್ಸು ಕಾಣುವಿರಿ. ಲಲಿತಾಸಹಸ್ರನಾಮ ಪಾರಾಯಣದಿಂದ ಹೆಚ್ಚಿನ ಯಶಸ್ಸು ಕಾಣುವಿರಿ.

ವೃಶ್ಚಿಕ

ತೀರ್ಥಕ್ಷೇತ್ರಗಳ ದರ್ಶನ ದಿಂದ ಮಾನಸಿಕ ಹಿಂಸೆಗಳು ಕಡಿಮೆಯಾಗಲಿದೆ. ವಾಹನ ಖರೀದಿ ಯೋಗವೂ ಇದೆ. ಅಧಿಕ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲದ ದಾನ ಮತ್ತು ತಿರುಪತಿ ತಿಮ್ಮಪ್ಪನ ದರ್ಶನ ದಿಂದ ಹೆಚ್ಚಿನ ಲಾಭವನ್ನು ಕಾಣುತ್ತೀರಿ

ಧನಸ್ಸು

ಮನೆ ಅಥವಾ ಆಸ್ತಿ ಖರೀದಿಯಲ್ಲಿ ಎಚ್ಚರಿಕೆ ವಹಿಸಬೇಕು. ಪತ್ನಿ ಅಥವಾ ಸಹೋದರರಿಂದ ಹಣಕಾಸಿನ ಅನುಕೂಲಗಳು ಆಗಲಿದೆ. ದೂರ ಪ್ರಯಾಣದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿವಹಿಸಬೇಕು. ಗುರು ಪಾದುಕಾ ಪೂಜೆ ಮತ್ತು ಶಿವ ಕವಚದಿಂದ ಹೆಚ್ಚಿನ ಲಾಭವನ್ನು ಕಾಣುತ್ತೀರಿ

ಮಕರ

ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳು ಪ್ರಶಂಸಿಸಿ ಮತ್ತು ಉನ್ನತ ಸ್ಥಾನ ದೊರೆಯುವ ಸಾಧ್ಯತೆ ನಾನಾ ರೀತಿಯ ತೊಂದರೆಗಳಿಂದ ಹೊರಬಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೆಚ್ಚುಗೆ ಪಡೆಯುವಿರಿ ಮಕ್ಕಳ ವಿಚಾರ ಚಿಂತೆ ಸದ್ಯದಲ್ಲಿ ದೂರವಾಗಿದೆ ಪರಿಹಾರ :- ರಾಮೇಶ್ವರದ ಶಿವದರ್ಶನ ಮತ್ತು ಶೃಂಗೇರಿ ಜಗದ್ಗುರುಗಳ ಪಾದಪೂಜೆ ಯಿಂದ ಅಭಿವೃದ್ಧಿ ಕಾಣುವಿರಿ

ಕುಂಭ

ಅವಿವಾಹಿತರಿಗೆ ವಿವಾಹಯೋಗ ಬರಲಿದೆ. ಹೊಸ ವ್ಯಾಪಾರವನ್ನು ಮುಂದೂಡಿದರೆ ಉತ್ತಮ. ತಂದೆತಾಯಿಯರ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ನೀಡಿ. ಶೃಂಗೇರಿ ಜಗದ್ಗುರುಗಳ ದರ್ಶನ ಮತ್ತು ರಾಮೇಶ್ವರ ದೇವರ ದರ್ಶನದಿಂದ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ

ಮೀನ

ಪುತ್ರ ಅಥವಾ ಪುತ್ರಿಯ ಮದುವೆ ವಿಚಾರದಲ್ಲಿ ಸಂತೋಷಗೊಳ್ಳುವಿರಿ. ಕೆಲಸದ ವಿಚಾರದಲ್ಲಿ ಒತ್ತಡ ಉಂಟಾಗಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತವೆ. ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಮತ್ತು ಮಂಜುನಾಥನಿಗೆ ಏಕವಾರ ರುದ್ರಾಭಿಷೇಕದಿಂದ ಹೆಚ್ಚಿನ ಲಾಭವನ್ನು ಕಾಣುತ್ತೀರಿ.

***

ಜ್ಯೋತಿಷಿ: ಸುಬ್ರಹ್ಮಣ್ಯ ರಾವ್‌, ಮೈಸೂರು
ಮೊಬೈಲ್‌: +917022036917

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT