ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ ಭವಿಷ್ಯ: ಮಾರ್ಚ್‌ 2023

Last Updated 1 ಮಾರ್ಚ್ 2023, 5:33 IST
ಅಕ್ಷರ ಗಾತ್ರ

ಮೇಷ

ಆಕಸ್ಮಿಕ ಧನಲಾಭ. ಕಲಾವಿದರಿಗೆ ಸಾಹಿತಿಗಳಿಗೆ ಮಾನ ಸನ್ಮಾನ ಯೋಗ. ಅರ್ಧದಲ್ಲಿ ನಿಂತ ಕಟ್ಟಡ ಮನೆ ನಿರ್ಮಾಣ ಕಾರ್ಯಗಳಿದ್ದರೆ ಪೂರ್ಣಗೊಳ್ಳುವವು. ಚಿಕ್ಕ ಪ್ರವಾಸ. ಆರ್ಥಿಕ ಅನುಕೂಲತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಲಾಭ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಹೊಸ ಸ್ನೇಹಿತರು ದೊರೆಯುವರು. ಒಟ್ಟಾರೆಯಾಗಿ ಸಂತಸದ ವಾತಾವರಣ ಇರುತ್ತದೆ.
ಶುಭ: 14, 19, 29 ಅಶುಭ: 11, 16, 20

ವೃಷಭ

ಮನೆಯಲ್ಲಿ ವಿವಾದಗಳು. ಬಂಧುಗಳಿಂದ ಕಿರಿಕಿರಿ. ಅನಾವಶ್ಯಕ ಖರ್ಚು. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ. ತಿಂಗಳ ಅಂತ್ಯದಲ್ಲಿ ಆದಾಯದಲ್ಲಿ ಏರಿಕೆ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ.
ಶುಭ: 05, 11, 23 ಅಶುಭ: 07, 16, 20

ಮಿಥುನ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಸ್ವತಂತ್ರ ಉದ್ಯೋಗದಲ್ಲಿ ಉತ್ತಮ ಲಾಭ. ಮನೆಯ ಹಿರಿಯರ ಪ್ರೀತಿ ಆಶಿರ್ವಾದ ಲಭಿಸುವುದು. ಆಸ್ತಿ ಖರಿದಿ ಬಗ್ಗೆ ಚಿಂತನೆ. ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ. ಸಂಘ ಸಂಸ್ಥೆಗಳಿಂದ ಧನಲಾಭ. ಶತ್ರುಗಳು ಹಿಂದೆ ಸರಿಯುವರು. ಸರಕಾರಿ ಕೆಲಸ ಶೀಘ್ರ ಆಗುವುದು.
ಶುಭ: 10, 14, 22 ಅಶುಭ: 11, 18, 27

ಕರ್ಕ

ಪಾಲುದಾರಿಕೆ ಉದ್ಯೋಗದಲ್ಲಿ ತೊಂದರೆ ಭಿನ್ನಾಭಿಪ್ರಾಯ ತಲೆದೊರಬಹುದು. ಆರ್ಥಿಕ ಮುಗ್ಗಟ್ಟು ಕಾಡಬಹುದು. ಸ್ವತಂತ್ರ ವೃತ್ತಿಪರರಿಗೆ ಲಾಭ. ಸರ್ಕಾರಿ ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ. ವಿದ್ಯಾರ್ಥಿಗಳಿಗೆ ಶುಭ. ತಿಂಗಳಾಂತ್ಯದಲ್ಲಿ ಮನೆಯಲ್ಲಿ ಮಂಗಳ ಕಾರ್ಯ, ಮನಸ್ಸಿಗೆ ನೆಮ್ಮದಿ ಸಂತಸ. ಸೋದರರಿಂದ ಶುಭಸುದ್ದಿ.
ಶುಭ: 11, 16, 24 ಅಶುಭ: 10, 14, 23

ಸಿಂಹ

ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಆರೋಗ್ಯ ಉತ್ತಮವಾಗಿರುತ್ತದೆ. ಹೆಚ್ಚು ಉತ್ಸಾಹ ಹಾಗೂ ಸಂತೋಷದಿಂದ ಕಾಣಿಸಿಕೊಳ್ಳುತ್ತೀರಿ.
ತಿಂಗಳಾಂತ್ಯದಲ್ಲಿ ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತದೆ. ಉತ್ತಮ ಜೀವನ ಶೈಲಿಗೆ ಶ್ರಮವಹಿಸುವಿರಿ. ಸಂಗಾತಿಗೆ ಉತ್ತಮ ಉಡುಗೊರೆಗಳನ್ನು ನೀಡುವಿರಿ.
ಶುಭ: 16, 20, 28, ಅಶುಭ: 13, 19, 26

ಕನ್ಯಾ

ಯುವ ಜನರಿಗೆ ಉತ್ತಮ ಸಮಯ. ಹೊಸ ಯೋಜನೆಗಳು ಸಾಕಾರಗೊಳ್ಳುತ್ತವೆ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ‌ತಿಂಗಳ ಮೊದಲಾರ್ಧದ ನಂತರ ಆರ್ಥಿಕವಾಗಿ ಬಲ ಬರುತ್ತದೆ. ಬಾಕಿ ಹಣ ಕೈಸೇರುತ್ತದೆ.

ಶುಭ: 12, 16, 24 ಅಶುಭ: 11, 18, 20

ತುಲಾ:

ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ವಿವಾಹಾಪೇಕ್ಷಿಗಳಿಗೆ ಶುಭಸಮಾಚಾರ. ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ, ಅಲಂಕಾರಿಕ ವಸ್ತು ಖರೀದಿ.
ಶುಭ: 12, 18, 24 ಅಶುಭ: 13, 19, 27

ವೃಶ್ಚಿಕ:

ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗುತ್ತವೆ. ಎಲ್ಲಾ ಕೆಲಸವನ್ನು ಸಮರ್ಥವಾಗಿ ಮಾಡಲು ಪ್ರಯತ್ನಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.
ಶುಭ: 10, 14, 22 ಅಶುಭ: 12, 16, 23

ಧನು:

ವ್ಯಾಪಾರಕ್ಕೆ ಹೊಸ ಸೇರ್ಪಡೆ ಮಾಡುವ ಮೂಲಕ ಉದ್ಯಮವನ್ನು ವಿಸ್ತರಿಸುವಿರಿ. ಬಿಡುವಿಲ್ಲದ ಉದ್ಯೋಗದ ನಡುವೆಯೂ ಕುಟುಂಬ ಜೀವನಕ್ಕೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ತಿಂಗಳ ಮಧ್ಯೆಭಾಗದಲ್ಲಿ ವ್ಯಾಪಾರ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಸವಾಲುಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಶುಭ: 15, 26, 29 ಅಶುಭ: 12, 23, 27

ಮಕರ:

ಮನೆಗೆ ಹಳೆಯ ಮಿತ್ರರ ಆಗಮನ. ವಿವಿಧ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶವಿದೆ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಯಶಸ್ಸು. ಮಗ ಅಥವಾ ಮಗಳ ಮದುವೆಯ ವಿಚಾರವನ್ನು ಅಂತಿಮಗೊಳಿಸುವಿರಿ. ಕಾಲು ನೋವಿನ ಸಮಸ್ಯೆ ಕಾಡಬಹುದು.
ಶುಭ: 19, 22, 28 ಅಶುಭ: 12, 16, 21

ಕುಂಭ:

ಪಾಲುದಾರಿಕೆ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲವು ಅನಿರೀಕ್ಷಿತ ಖರ್ಚುಗಳಿಗಾಗಿ ಹಣ ಮೀಸಲಿಡಲು ಆಲೋಚಿಸುವಿರಿ. ಆರೋಗ್ಯದಲ್ಲಿ ಏರುಪೇರುಗಳಾಗಬಹುದು. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ಸೋದರ ಸೋದರಿಯರ ಜತೆ ಸಂಘರ್ಷ ಏರ್ಪಡಬಹುದು.
ಶುಭ: 15, 18, 26 ಅಶುಭ: 14, 21, 28

ಮೀನ:

ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲು ಆರಂಭವಾಗುತ್ತದೆ. ಉದ್ಯಮಿಗಳು, ವ್ಯಾಪಾರಿಗಳು ಬೇಡಿಕೆಗೆ ತಕ್ಕಂತೆ ಪೂರೈಕೆ ಒದಗಿಸಲು ಸಿದ್ಧತೆ ಮಾಡಿಕೊಳ್ಳುವರು. ಆರೋಗ್ಯ ಉತ್ತಮವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಹಣಕಾಸಿನ ಹರಿವು ಹೆಚ್ಚಲಿದೆ. ಸಂಬಂಧಗಳು ಸುಮಧುರವಾಗಿರುತ್ತವೆ. ತಿಂಗಳಾಂತ್ಯಕ್ಕೆ ಸ್ವಲ್ಪ ಇರಿಸು–ಮುರಿಸು ಕಾಣಿಸಿಕೊಳ್ಳಬಹುದು.
ಶುಭ: 16, 20, 28 ಅಶುಭ: 12, 22, 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT