ಸೋಮವಾರ, ಜೂನ್ 14, 2021
21 °C

ವಚನಾಮೃತ: ಪರೋಪಕಾರ ಗುಣ ಬೆಳೆಸಿಕೊಳ್ಳಿ

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು

ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ

ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?

ಹೊತ್ತು ಹೋಗದ ಮುನ್ನ,

ಮೃತ್ಯುವೊಯ್ಯದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.

ನಾವು ದಿನ ನಿತ್ಯ ಕರ್ಮಾದಿ ಆಚರಣೆಗಳನ್ನು ಮಾಡುವಾಗ ಪೂಜಾದಿ ಕ್ರಿಯೆಗಳನ್ನು ಮಾಡುತ್ತೇವೆ. ಆಧ್ಯಾತ್ಮಿಕ ಬದುಕು ಸಾಗಿಸುವವರಿಗೆ ಇದು ದಿನಚರಿ ಆಗಿರುತ್ತದೆ. ಆದರೆ, ಬಹುಪಾಲು ಜನರು ಪ್ರಸ್ತುತ ದಿನಮಾನದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನೆ ಮರೆತಿದ್ದಾರೆ ಎನ್ನಬಹುದು. ಮರೆವು ಮನುಷ್ಯನ ಸ್ವಭಾವಗಳಲ್ಲೊಂದು. ಹಾಗೆಂದು ಆಹಾರ, ನಿದ್ರಾದಿಗಳನ್ನ ಮರೆಯುವುದಿಲ್ಲ; ಪೂಜೆ, ಪುನಸ್ಕಾರಗಳನ್ನು ಮರೆಯುತ್ತಾನೆ. ಪ್ರಾತಃಕಾಲದಲ್ಲಿ ಭಗವಂತನನ್ನು ಪತ್ರಿ, ಪುಷ್ಪಗಳಿಂದ ಪೂಜಿಸಬೇಕು. ಆ ಸಮಯವು ಹೋದ ಮೇಲೆ ಮತ್ತೆ ಮರಳುವುದಿಲ್ಲ. ನಂತರದಲ್ಲಿ ಸಂಸಾರದ ಕರ್ಮಗಳಲ್ಲಿ ಸಿಲುಕುತ್ತಾನೆ. ಅದಕ್ಕೆ ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಸಮಯವಿದ್ದಾಗಲೆ ಅಥವಾ ಮರಣ ಬರುವ ಮುನ್ನವೇ ಒಂದಿಷ್ಟು ಪರೋಪಕಾರವನ್ನು ಮತ್ತು ಭಗವಂತನ ಸ್ಮರಣೆಯನ್ನು ಮಾಡು ಎನ್ನುತ್ತಾರೆ. ಈ ವಚನವು ಪರೋಪಕಾರಣ ಗುಣ ಬೆಳೆಸಿಕೊಳ್ಳಬೇಕು ಎನ್ನುವುದು ಮತ್ತು ದೇವರ ಸ್ಮರಣೆಯ ಮಹತ್ವವನ್ನು ಎತ್ತಿ ಹಿಡಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು