ಮಂಗಳವಾರ, ಜೂನ್ 28, 2022
25 °C

ವಾರ ಭವಿಷ್ಯ: 6-3-2022 ರಿಂದ 12-3-2022 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಮನಸ್ಸಿಗೆ ಒಂದು ರೀತಿಯ ಸಂತೋಷ ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಡುವಳಿಕೆಯಿಂದ ಜನರ ಮನಸ್ಸನ್ನು ಗೆದ್ದು ಕಾರ್ಯಸಾಧನೆ ಮಾಡುವಿರಿ. ಸ್ಥಿರಾಸ್ತಿಯ ವಿಷಯದಲ್ಲಿ ಸಂತೋಷ ಪಡುವಂತಹ ವಿಚಾರವೊಂದನ್ನು ಕೇಳುವಿರಿ. ಮಕ್ಕಳ ವ್ಯವಹಾರಕ್ಕಾಗಿ ಹಣ ಹೂಡಿಕೆ ಮಾಡುವಿರಿ. ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳಿದ್ದಲ್ಲಿ ಶೀಘ್ರವಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಜಂಟಿ ವ್ಯವಹಾರಗಳಲ್ಲಿ ಸಾಕಷ್ಟು ಗೊಂದಲ ಮೂಡುವ ಸಾಧ್ಯತೆ ಇದೆ. ಕುತಂತ್ರಿಗಳ ಸಹವಾಸದಿಂದ ನಿಮ್ಮ ಶ್ರಮ ವ್ಯರ್ಥವಾಗುವುದು. ಪಿತ್ರಾರ್ಜಿತ ಆಸ್ತಿ ಬರುವ ಬಗ್ಗೆ ಸೂಚನೆ ದೊರೆಯುತ್ತದೆ. ದಿನಸಿ ವ್ಯಾಪಾರಿಗಳಿಗೆ ದಾಸ್ತಾನು ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶವಿದೆ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಮಾತಿನಲ್ಲಿ ಬಹಳ ಕಾಠಿಣ್ಯತೆ ಇರುತ್ತದೆ. ಹಣದ ಒಳಹರಿವು ಅವಶ್ಯಕತೆ ಪೂರೈಸುವಷ್ಟು ಇರುತ್ತದೆ. ಒಡಹುಟ್ಟಿದವರಿಗಾಗಿ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳಿಗೆ ಅವರ ಅಭ್ಯಾಸದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಯೋಗವಿದೆ. ಶ್ವಾಸಕೋಶದ ತೊಂದರೆ ಇರುವವರು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಸಂಗಾತಿಯು ನಿಮ್ಮ ಮೇಲೆ ವಿನಾಕಾರಣ ಸಿಟ್ಟಾಗಬಹುದು. ಸ್ಥಿರಾಸ್ತಿ ಪ್ರಾಪ್ತವಾಗುವ ಅವಕಾಶಗಳು ಇವೆ. ದುಂದುವೆಚ್ಚಗಳಿಂದ ಆರ್ಥಿಕ ಹೊರೆಯಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಸ್ವತಂತ್ರ ಉದ್ಯೋಗದಲ್ಲಿ ಶ್ರಮಪಟ್ಟು ಮೇಲುಗೈ ಸಾಧಿಸುವಿರಿ. ಹೆಣ್ಣುಮಕ್ಕಳಿಗೆ ಬೇಗ ವಿವಾಹ ನಿಗದಿಯಾಗುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುವುದು ಒಳ್ಳೆಯದು. ರಾಜಕಾರಣಿಗಳಿಗೆ ಅವರ ನಾಯಕರುಗಳಿಂದ ಹೆಚ್ಚಿನ ಒತ್ತಡ ಬರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಡೈರಿ ಉತ್ಪನ್ನಗಳನ್ನು ಮಾರುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಸಂಗಾತಿಯ ಸಹಕಾರದಿಂದ ಕುಟುಂಬದಲ್ಲಿ ಸಂತೋಷ ಕಾಣಬಹುದು. ವಿದ್ಯುತ್ ಉತ್ಪಾದನಾ ಜಾಗದಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಗಿರವಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಧನಾದಾಯವು ನಿಮ್ಮ ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಲಕ್ಷಣಗಳಿವೆ. ಹೆಚ್ಚಿನ ವ್ಯಾಸಂಗಕ್ಕಾಗಿ ಸ್ಥಳ ಬದಲಾವಣೆಯಾಗಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿರುತ್ತದೆ. ಹಿತೈಷಿಗಳಿಂದ ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿಯು ಸಿಗುವ ಅವಕಾಶಗಳಿವೆ. ಮನೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಹಿರಿಯರಿಂದ ಶಹಬ್ಬಾಸ್‌ಗಿರಿ ಪಡೆಯುವಿರಿ. ಸರ್ಕಾರಿ ಸಂಸ್ಥೆಗಳಿಗೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ದ್ರವರೂಪದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚುತ್ತದೆ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಲಾಭ ಬರುತ್ತದೆ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಎಣ್ಣೆ ಮತ್ತು ಎಣ್ಣೆ ಕಾಳುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಾಮಾಜಿಕ ಕಾರ್ಯಗಳನ್ನು ಹೆಚ್ಚು ಮಾಡಿ ತನ್ಮೂಲಕ ರಾಜಕೀಯ ಪ್ರವೇಶ ಮಾಡುವಿರಿ. ಕಾರ್ಖಾನೆಯ ಕೆಲಸಗಾರರಿಗೆ ಬೇಡಿಕೆಗಳು ಈಡೇರುವ ಸಂದರ್ಭ. ಸಂಗಾತಿಯನ್ನು ಹುಡುಕುವ ಬಗ್ಗೆ ಮನೆಯಲ್ಲಿ ಹೆಚ್ಚಿನ ಮಾತುಗಳಾಗುತ್ತವೆ. ಬರಹಗಾರರಿಗೆ ಬಹುಮಾನ ಗೆಲ್ಲುವ ಸಂದರ್ಭವಿರುತ್ತದೆ. ಕಣ್ಣು ಮತ್ತು ಹೊಟ್ಟೆಯ ತೊಂದರೆಯ ಬಗ್ಗೆ ವಹಿಸಿರಿ. ಮಕ್ಕಳ ಅನುಕೂಲಕ್ಕಾಗಿ ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ. ಸಂಗಾತಿಗೆ ಸರ್ಕಾರಿ ಇಲಾಖೆಗಳಿಂದ ಹೆಚ್ಚಿನ ಅನುಕೂಲವಾಗುತ್ತದೆ. ತಾಯಿಯಿಂದ ಧನಸಹಾಯ ಒದಗುವ ಸಾಧ್ಯತೆಗಳಿವೆ. ವಿದೇಶಗಳಲ್ಲಿ ಕಡಿಮೆ ಮೊತ್ತಕ್ಕೆ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸಂಬಳ ಸಿಗುವ ಕೆಲಸ ದೊರೆಯುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಹೊಸ ಉದ್ಯೋಗದ ವಿಷಯದಲ್ಲಿ ಆತ್ಮೀಯರಿಂದ ಸೂಕ್ತ ಸಲಹೆ ದೊರೆಯುತ್ತದೆ. ಸಂಗಾತಿ ನಡೆಸುತ್ತಿದ್ದ ಭೂ ವ್ಯಾಜ್ಯಗಳಲ್ಲಿ ಜಯದೊರೆಯುತ್ತದೆ. ವಿನಾಕಾರಣ ಇತರರ ವಿಷಯದಲ್ಲಿ ಅನಗತ್ಯ ಚರ್ಚೆ ಮಾಡುವುದು ಒಳಿತಲ್ಲ. ಇದು ನಿಮಗೆ ತಿರುಗುಬಾಣವಾಗಬಹುದು. ಈ ವಾರ ಸ್ವಲ್ಪ ಆಲಸಿ ನಡವಳಿಕೆ ಇರುತ್ತದೆ. ಮಕ್ಕಳಿಂದ ಮನಸ್ಸಿಗೆ ಬೇಸರವಾಗುವ ಸಂದರ್ಭಗಳಿವೆ. ಕಣ್ಣು ಮತ್ತು ಜಠರದ ತೊಂದರೆ ಇದ್ದಲ್ಲಿ ಸರಿಯಾಗಿ ಪರೀಕ್ಷಿಸಿಕೊಳ್ಳಿರಿ. ಸಂಗಾತಿಯ ದುಂದುವೆಚ್ಚಗಳು ನಿಮಗೆ ದುಬಾರಿಯಾಗಬಹುದು. ತಾಯಿಯೊಂದಿಗೆ ಸ್ವಲ್ಪ ಕಾವೇರಿದ ಮಾತುಗಳು ಆಗುತ್ತವೆ. ಹಿರಿಯರಿಗೆ ಇದ್ದ ಮೂಳೆಯ ತೊಂದರೆಗಳು ಉಲ್ಬಣವಾಗುತ್ತದೆ. ಆದರೆ ಗಾಬರಿಗೊಳ್ಳುವಂತಹ ಸನ್ನಿವೇಶವಿರುವುದಿಲ್ಲ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಪ್ರೇಮಿಗಳ ಇಷ್ಟಾರ್ಥಗಳು ಈಡೇರದೆ ಮುನಿಸಿಕೊಳ್ಳಬಹುದು. ಉದ್ಯೋಗ ರಂಗದಲ್ಲಿ ಇದ್ದ ಒತ್ತಡಗಳು ಕಡಿಮೆಯಾಗಿ ಮನಸ್ಸಿಗೆ ಸಂತೋಷವೆನಿಸುತ್ತದೆ. ಮಕ್ಕಳಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವ ಕೆಲವರಿಗೆ ಗೌರವಗಳು  ದೊರೆಯುತ್ತವೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಆಸ್ತಿ ವ್ಯವಹಾರಗಳನ್ನು ಮಾಡುವವರು ಹೆಚ್ಚಿನ ಎಚ್ಚರಿಕೆಯಲ್ಲಿ ಇರಬೇಕು. ಸಂಗಾತಿಯ ಸಂತೋಷಕ್ಕಾಗಿ ನೂತನ ವಸ್ತ್ರಗಳನ್ನು ಕೊಡಿಸುವಿರಿ. ವಿದೇಶಿ ವ್ಯವಹಾರವನ್ನು ಮಾಡುತ್ತಿದ್ದವರಿಗೆ ಇದ್ದ ತೊಡಕುಗಳು ನಿವಾರಣೆಯಾಗುತ್ತವೆ. ನೀವು ಮರೆಮಾಚಿದ್ದ ಕೆಲವು ಆಸ್ತಿ ವಿಷಯಗಳು ಬಂಧುಗಳಿಗೆ ತಿಳಿಯುತ್ತದೆ. ಸರ್ಕಾರದಿಂದ ಬರುವ ಸಹಾಯಧನವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ಹಣ್ಣು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಅರಣ್ಯಾಧಿಕಾರಿಗಳಿಗೆ ಪ್ರೋತ್ಸಾಹಧನ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸಫಲತೆಯನ್ನು ಕಾಣಬಹುದು. ಕಾಡುತ್ತಿದ್ದ ರಾಜಕೀಯ ಅನಿಶ್ಚಿತತೆ ನಿವಾರಣೆಯಾಗುತ್ತದೆ. ಸ್ತ್ರೀ ವರ್ಗದವರಿಗೆ ಅವರ ಪರಿಚಿತರು ಹಾಗೂ ಸ್ನೇಹಿತರು ದೊರೆತು ಸಂತೋಷವಾಗಿ ಕಾಲಕಳೆಯುವ ಯೋಗವಿದೆ. ಒಡಹುಟ್ಟಿದವರ ನಡುವೆ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯಗಳು ಬರಬಹುದು. ಆಸ್ತಿಯನ್ನು ಕೊಳ್ಳಲು ಅಪೇಕ್ಷಿಸಿದ್ದ ಸಾಲ ಸೌಲಭ್ಯಗಳು ದೊರೆತು ನಿಮಗೆ ಅನುಕೂಲವಾಗುತ್ತದೆ. ಮೂತ್ರ ಸಂಬಂಧಿ ಕಾಯಿಲೆ ಇರುವವರಿಗೆ ಪರಿಹಾರದ ಹಾದಿ ಗೋಚರಿಸುತ್ತದೆ. ಮರಮುಟ್ಟುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರ ವ್ಯವಹಾರ ವಿಸ್ತರಿಸುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಮಕ್ಕಳ ಶ್ರೇಯಸ್ಸಿನ ಬಗ್ಗೆ ಸಾಕಷ್ಟು ಸಂತೋಷವಾದ ವಾರ್ತೆಗಳನ್ನು ಕೇಳುವಿರಿ. ಆರ್ಥಿಕ ವಿಚಾರದಲ್ಲಿ ಚೇತರಿಕೆ ಕಾಣಬಹುದು. ಉನ್ನತ ಶಿಕ್ಷಣದ ವಿಷಯದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇರುವ ಸಂದರ್ಭ ಕೆಲವರಿಗೆ ಇರುತ್ತದೆ. ಕುಟುಂಬದವರ ಸಂತೋಷಕ್ಕಾಗಿ ಸಂತೋಷ ಕೂಟವೊಂದನ್ನು  ಆಯೋಜಿಸುವಿರಿ. ಭೂ ವಿವಾದಗಳಲ್ಲಿ ಸಿಲುಕಿಕೊಂಡಿದ್ದವರಿಗೆ ಸದ್ಯಕ್ಕೆ ಅದರಿಂದ ಮುಕ್ತಿ ದೊರಕುತ್ತದೆ. ಸ್ವಯಂ ಉದ್ಯೋಗಿಗಳ ಪರಿಶ್ರಮಕ್ಕೆ ಈಗ ಫಲ ಬರಲಾರಂಭಿಸುತ್ತದೆ. ಈ ರಾಶಿಯ ಹೆಣ್ಣುಮಕ್ಕಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಸಂಗಾತಿಯ ಸಲಹೆಗಳು ವ್ಯವಹಾರದಲ್ಲಿ ಮೇಲೇರಲು ಅನುಕೂಲವಾಗುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ದೊಡ್ಡ ದೊಡ್ಡ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಬರುತ್ತದೆ. ನೀರಾವರಿ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ಸಿಗುವ ಸಂದರ್ಭವಿದೆ. ಔಷಧಿ ವಿತರಕರಿಗೆ ಹೊಸ ಹೊಸ ಜಾಗಗಳಲ್ಲಿ ವಿತರಣೆ ಮಾಡುವ ಅವಕಾಶ ದೊರೆಯುತ್ತದೆ. ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಪಾರಂಪರಿಕ ವೈದ್ಯರುಗಳಿಗೆ ಬೇಡಿಕೆ ಬರತೊಡಗುತ್ತದೆ. ವೃತ್ತಿಯಲ್ಲಿ ಒತ್ತಡವಿದ್ದರೂ ಕುಟುಂಬದ ಕಡೆಗೆ ಗಮನ ಹರಿಸುವುದು ಅಗತ್ಯ. ಜಾಗತಿಕ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ಹೆಚ್ಚು ಮನ್ನಣೆ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ಮೀರಿ ಇರುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಲೇವಾದೇವಿ ನಡೆಸುತ್ತಿದ್ದವರಿಗೆ ಹಳೆಯ ಬಾಕಿ ವಸೂಲಿಗಳು ಈಗ ಆಗುತ್ತದೆ. ನಿಮ್ಮ ಪ್ರಭಾವದಿಂದ ನಿಮ್ಮೊಡನೆ ಕೆಲಸ ಮಾಡುತ್ತಿರುವವರನ್ನು ಹುರಿದುಂಬಿಸಿ ಉತ್ತಮ ಕೆಲಸ ಮಾಡಿಸುವಿರಿ. ಸೋದರಿಯ ಸಹಾಯ ಸಕಾಲಕ್ಕೆ ದೊರೆಯುತ್ತದೆ. ನಿಮ್ಮ ತಂದೆಯಿಂದ ಧನ ಸಹಾಯವಾಗುತ್ತದೆ. ವೃತ್ತಿಯಲ್ಲಿ ಮೇಲಧಿಕಾರಿಗಳನ್ನು ಎದುರುಹಾಕಿಕೊಳ್ಳುವುದು ಒಳಿತಲ್ಲ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಪ್ರಕಾಶಕರಿಗೆ ಪುಸ್ತಕದ ಪ್ರಕಾಶನಕ್ಕಾಗಿ ಹೊಸ ಆದೇಶ ದೊರೆಯುತ್ತದೆ. ದವಸಧಾನ್ಯಗಳ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ನಿಮ್ಮ ಮುಂದಾಲೋಚನೆ ಆರ್ಥಿಕ ಸಂಕಷ್ಟದಿಂದ ನಿಮ್ಮನ್ನು ಪಾರುಮಾಡುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಧನಾದಾಯವು ತೃಪ್ತಿಕರವಾಗಿರುತ್ತದೆ. ಸಂಗೀತಗಾರರಿಗೆ ಉತ್ತಮ ಸಂಭಾವನೆ ದೊರೆಯುತ್ತದೆ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿದ್ದು ಸಂಪಾದನೆ ಹೆಚ್ಚುತ್ತದೆ. ಮಕ್ಕಳ ಅನುಕೂಲಕ್ಕೋಸ್ಕರ ಹೆಚ್ಚು ಹಣ ಖರ್ಚು ಮಾಡುವಿರಿ. ಕೇಶಾಲಂಕಾರ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ನೀರಿನಿಂದ ಆರೋಗ್ಯ ತಪ್ಪಬಹುದು. ಸಂಗಾತಿಯ ಆದಾಯ ಹೆಚ್ಚಳ ಕಂಡರೂ ಖರ್ಚು ಅಷ್ಟೇ ಮಾಡುವರು. ಬೆಳ್ಳಿ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಒಂದು ರೀತಿಯ ನಿರುತ್ಸಾಹವಿರುತ್ತದೆ. ಹಿತೈಷಿಗಳ ನಡುವೆ ಮಾತನಾಡುವಾಗ ದುಡುಕುತನ ತೋರಿಸಬೇಡಿರಿ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅಲಕ್ಷ ಖಂಡಿತ ಬೇಡ. ಹೊಸ ವಾಹನವನ್ನು ಕೊಳ್ಳುವ ಆಸಕ್ತಿ ಮೂಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.