ಶುಕ್ರವಾರ, ನವೆಂಬರ್ 27, 2020
19 °C

ವಾರ ಭವಿಷ್ಯ | 15-11-2020 ರಿಂದ 21-11-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

 

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕಕ್ಕೆ 8197304680

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಅತಿಯಾದ ಮಾತು ಅಪಾಯ ತರಬಹುದು, ಆದ್ದರಿಂದ ಮಾತನಾಡುವಾಗ ಎಚ್ಚರ ಇರಲಿ. ವೃತ್ತಿಗೆ ಸಂಬಂಧಿಸಿದ ಕರಾರುಗಳನ್ನು ಮಾಡಿಕೊಳ್ಳುವಾಗ ಎಚ್ಚರ ವಹಿಸಿ. ಹಣದ ಒಳಹರಿವು ಸಾಮಾನ್ಯ. ವಿದ್ಯುತ್ ಉಪಕರಣಗಳ ಮಾರಾಟ ಮತ್ತು ರಿಪೇರಿ ಮಾಡುವವರಿಗೆ ವ್ಯವಹಾರ ವೃದ್ಧಿಯಾಗಿ ಆದಾಯದಲ್ಲಿ ಏರಿಕೆಯಾಗುವುದು. ಆಸ್ತಿಗೆ ಸಂಬಂಧಿಸಿದ ತಗಾದೆಗಳಲ್ಲಿ ವಕೀಲರ ಸಲಹೆ ಪಡೆಯುವುದು ಉತ್ತಮ. ಉದ್ಯೋಗ ಕಳೆದುಕೊಂಡವರಿಗೆ ಹಿಂದಿನ ಉದ್ಯೋಗದಾತರಿಂದ ಕರೆ ಬರಬಹುದು. ಚಿನ್ನ–ಬೆಳ್ಳಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಲೇವಾದೇವಿದಾರರಿಗೆ ಅನಿರೀಕ್ಷಿತ ಧನಲಾಭ ಆಗಬಹುದು. ಕಿರುತೆರೆಯ ನಟ ನಟಿಯರಿಗೆ ಗೌರವಾದರಗಳು ದೊರೆಯಬಹುದು. ಕೃಷಿಕರ ಆದಾಯದ ಮೂಲಗಳು ಹೆಚ್ಚಾಗುವುದು. ಮಕ್ಕಳಿಂದ ಕೀರ್ತಿ ಹೆಚ್ಚಾಗುವುದು. ಕೆಲಸ ಕಾರ್ಯ ಮಾಡುವಾಗ ಅತಿಯಾದ ಆತುರ ಬೇಡ. ಹೊಸದಾಗಿ ಕೆಲವು ಸ್ತಿರ ಸಂಪನ್ಮೂಲಗಳನ್ನು ಕಂಡುಕೊಳ್ಳುವಿರಿ. ನಿಮ್ಮ ವ್ಯವಹಾರದಲ್ಲಿನ ಯಶಸ್ಸಿಗೆ ಕಾರಣರಾದವರನ್ನು ನೆನಸಿಕೊಳ್ಳುವುದು ಅತಿ ಮುಖ್ಯ, ಇದು ಇವರು ಮುಂದೆ ನಿಮಗೆ ಸಹಾಯಕ್ಕೆ ಬರುವವರು. ಮಕ್ಕಳ ನಡವಳಿಕೆ ಮತ್ತು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವುದು ಅತಿ ಮುಖ್ಯ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ನಾಯಕತ್ವದ ಗುಣದಿಂದ ಸಮೂಹದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಕಾಣುವಿರಿ. ರಾಜಕೀಯ ನಾಯಕರ ಇಂದಿನ ಆತ್ಮವಿಶ್ವಾಸ ಮುಂದಿನ ನಡೆಗೆ ಬುನಾದಿಯಾಗುವುದು. ಉದ್ಯೋಗದಲ್ಲಿನ ಒತ್ತಡ ಸ್ವಲ್ಪ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಬರುವುದು. ಆರ್ಥಿಕ ಸ್ಥಿತಿಯು ಚೇತರಿಕೆಯತ್ತ ಹೊರಳುವುದು. ಸ್ಥಿರಾಸ್ತಿಕೊಳ್ಳಲು ಬೇಕಾದ ಧನದ ಮೂಲಗಳು ಈಗ ಗೋಚರಿಸಲು ಆರಂಭಿಸುತ್ತವೆ. ಮಕ್ಕಳ ಪ್ರಗತಿಯು ತೃಪ್ತಿದಾಯಕವಾಗಿ ಇರುತ್ತದೆ. ಚರ್ಮ ರೋಗಗಳು ಸ್ವಲ್ಪ ಕಾಡಬಹುದು. ವಿವಾಹ ಆಕಾಂಕ್ಷಿತರಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ವಿಪರೀತ ಕಾರ್ಯಬಾಹುಳ್ಯದ ನಡುವೆಯೂ ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವಿರಿ. ನಿಮ್ಮ ಸಹವರ್ತಿಗಳಲ್ಲಿ ಉತ್ಸಾಹ ಮತ್ತು ಹುರುಪು  ತುಂಬುವಿರಿ. ಸಮಾಜಕ್ಕೆ ಒಳಿತಾಗುವ ಮತ್ತು ತಿಳಿ ಹೇಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆನಂದ ಪಡುವಿರಿ. ಆರೋಗ್ಯದಲ್ಲಿ ಏರಿಳಿತವಾಗುವ ಸಂಭವವಿದ್ದರೂ ಆತಂಕವೇನಿಲ್ಲ. ತಾಂತ್ರಿಕವಾಗಿ ಉತ್ತಮ ಪರಿಣತಿ ಇರುವವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಂಸಾರದಲ್ಲಿ ಕಾವೇರಿದ ಮಾತುಗಳು ಬಂದರೂ ಸಹ ಶಾಂತವಾಗಿರುವಿರಿ. ವಿದೇಶಿ ಕಂಪನಿಗಳ ಸಹಯೋಗದೊಡನೆ ಕೆಲಸ ಮಾಡುವ ಉದ್ದಿಮೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ದೂರದೂರಿಗೆ ಪ್ರಯಾಣದ ಸಾಧ್ಯತೆ ಇದೆ. ಆರ್ಥಿಕ ವ್ಯವಸ್ಥೆಯಲ್ಲಿ ಸಫಲತೆ ಕಾಣುವಿರಿ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಕಾಲ. ನಿಮ್ಮ ಮಕ್ಕಳಿಂದ ನಿಮಗೆ ಗೌರವ ಬರುತ್ತದೆ. ನೌಕರರಿಗೆ ಪದೋನ್ನತಿ ನಿರೀಕ್ಷಿಸುವ ಕಾಲ. ಕೈಗೊಂಡ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯಿಂದ ಭಾಗವಹಿಸುವಿರಿ. ಸ್ತ್ರೀಯರಿಗೆ ಉದ್ಯೋಗಗಳು ದೊರೆಯುವ ಎಲ್ಲಾ ಲಕ್ಷಣಗಳಿವೆ ಮತ್ತು ಅವರು ನಡೆಸುವ ವ್ಯವಹಾರಗಳು ಲಾಭದತ್ತ ಸಾಗುತ್ತವೆ. ಸರ್ಕಾರಿ ಗುತ್ತಿಗೆ ಕೆಲಸಗಳನ್ನು ಮಾಡುವವರಿಗೆ ಬರಬೇಕಾದ ಹಣ ಬಂದು ಹೊಸ ಗುತ್ತಿಗೆಯ ಆದೇಶ ಸಹ ಸಿಗುವುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆರ್ಥಿಕ ಅನುಕೂಲತೆಗಳು ಹೆಚ್ಚಾಗಿ ಹಣ ಉಳಿಸುವತ್ತ ಗಮನ ಹರಿಸುವಿರಿ. ಬಂಧುಗಳೊಡನೆ ಸಂತೋಷಕೂಟದಲ್ಲಿ ಭಾಗಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಂಗಾತಿಯು ನಿಮ್ಮ ಕೆಲಸಕಾರ್ಯಗಳಲ್ಲಿ ಉತ್ತಮ ಸಹಕಾರ ನೀಡುವರು. ಯಾವುದೇ ರೀತಿಯ ವ್ಯವಹಾರಗಳಲ್ಲಿ ಹೆಚ್ಚಿನ ಹಣ ಹೂಡುವುದು ಬೇಡ. ಮಕ್ಕಳ ಸಂತೋಷಕ್ಕಾಗಿ ಇಚ್ಛಿಸಿದ ವಸ್ತುಗಳನ್ನು ಖರೀದಿಸುವಿರಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಕರಕುಶಲ ವಸ್ತುಗಳನ್ನು ರಫ್ತು ಮಾಡುವವರಿಗೆ ಅವಕಾಶಗಳು ತೆರೆಯುತ್ತವೆ. ಪಾಲುದಾರಿಕೆ ವ್ಯವಹಾರದಲ್ಲಿ ನಿಮಗೆ ಸ್ವಲ್ಪ ಹೆಚ್ಚಿನ ಲಾಭ ಬರಬಹುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಧನದ ಒಳಹರಿವು ಸಾಮಾನ್ಯ. ನಿಮ್ಮ ನೆಚ್ಚಿನ ವ್ಯವಹಾರ ಕ್ಷೇತ್ರಗಳಲ್ಲಿ ಸ್ಪರ್ಧೆಗಳನ್ನು ಎದುರಿಸಬೇಕಾದ ಸಂದರ್ಭವಿದೆ. ರಾಜಕೀಯ ವಿಷಯಗಳಲ್ಲಿ ಗಂಭೀರ ಚಿಂತನೆ ನಡೆಸಿ ರಾಜಕೀಯ ಸೇರಲು ಸತತ ಪ್ರಯತ್ನ ಪಡುವಿರಿ. ಸರ್ಕಾರಿ ಸಾಲಗಳು ಸರಾಗವಾಗಿ ದೊರೆಯುತ್ತವೆ, ಇದನ್ನು ಪಡೆದು ನೀವು ಕೊಡಬೇಕಾದ ಬಡ್ಡಿ ಸಾಲಗಳನ್ನು ಈಗ ತೀರಿಸಿ ಸ್ವಲ್ಪ ನೆಮ್ಮದಿ ಪಡೆಯಬಹುದು. ವ್ಯವಹಾರಗಳಲ್ಲಿ ಹಿತಶತ್ರುಗಳ ಬಗ್ಗೆ ಗಮನ ಹರಿಸಿ. ಉದ್ದಿಮೆ ನಡೆಸುವವರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಬಹುದು. ತಂದೆಯಿಂದ ಆರ್ಥಿಕ ಸಹಾಯ ಒದಗಿಬರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಉದ್ಯೋಗದ ವಿಷಯದಲ್ಲಿ ತಿಳಿದವರಿಂದ ಸೂಕ್ತ ಸಲಹೆ ದೊರೆಯುತ್ತದೆ. ಭೂ ಸಂಬಂಧಿ ವ್ಯಾಜ್ಯಗಳಲ್ಲಿ ನಿಮಗೆ ಜಯ ದೊರೆಯುವ ಸಾಧ್ಯತೆ ಇದೆ. ಮಾರ್ಗ ನಿರ್ಮಾಣ ಮಾಡುವ ಗುತ್ತಿಗೆದಾರರಿಗೆ ಹೊಸ ನಿರ್ಮಾಣ ಆದೇಶಗಳು ದೊರೆಯುತ್ತವೆ. ಎಲ್ಲರನ್ನೂ ಸಮನಾಗಿ ಕಾಣುವ ನಿಮಗೆ ಸಹೋದ್ಯೋಗಿಗಳಿಂದ ಮೆಚ್ಚುಗೆ ದೊರೆಯುತ್ತದೆ. ನಿಮ್ಮ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಈಗ ಸಕಾಲ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುವುದು. ಕೃಷಿಕರ ಬೆಳೆಗಳಿಗೆ ಇದ್ದ ಜಾಗದಲ್ಲೇ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ ಇದೆ. ತಲೆನೋವು ಸ್ವಲ್ಪ ಬಾಧಿಸಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ ಹಾಗೂ ಗಳಿಕೆ ಹೆಚ್ಚಾಗುವ ಸಂದರ್ಭವಿದೆ. ವರ್ಗಾವಣೆ ಮತ್ತು ಸ್ಥಾನ ಬದಲಾವಣೆಗಾಗಿ ಕಾಯುತ್ತಿರುವವರಿಗೆ ಶುಭ ಸಮಾಚಾರ ದೊರೆಯುತ್ತದೆ. ಕಾರ್ಯಾನುಭವ ಮತ್ತು ಕ್ಷಮತೆಯಿಂದಾಗಿ ಹೊಸ ಉದ್ಯೋಗದ ಸಾಧ್ಯತೆ ಇದೆ, ಅದರ ಸಾಧಕ-ಬಾಧಕಗಳನ್ನು ಹೋಗಿ ನೋಡಿ ನಂತರ ಒಪ್ಪಿಗೆ ನೀಡಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆ ಇದೆ. ಧನದ ಒಳಹರಿವು ಸಾಮಾನ್ಯ. ಕೀಲು ನೋವುಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಸಂತೋಷಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಹಿರಿಯರು ಆಡುವ ಸಣ್ಣ ಮಾತುಗಳು ಅವರ ಗೌರವಕ್ಕೆ ಧಕ್ಕೆ ತರುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಿರಿಯರು ಕೊಡುವ ಸಲಹೆಗಳನ್ನು ನಿರಾಕರಿಸದಿರಿ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚಾಗುವುದು. ಹಣದ ಹರಿವು ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ವಿದ್ಯಾಸಂಸ್ಥೆಗಳಿಗೆ ನಿಂತಿದ್ದ ಆದಾಯಗಳು ಬರುತ್ತವೆ. ಸಂಗಾತಿಯ ಕಡೆಯಿಂದ ನಿಮಗೆ ಆಸ್ತಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಜನರ ಬೆಂಬಲ ದೊರೆತು ಕಾರ್ಯಕ್ರಮ ಬಹಳ ಯಶಸ್ವಿ ಆಗುವುದು. ಮುನಿಸಿಕೊಂಡಿದ್ದ ಮಕ್ಕಳು ಈಗ ನಿಮ್ಮ ಹತ್ತಿರ ಬರುವರು. ನರದೌರ್ಬಲ್ಯ ಇರುವವರು ಆ ಬಗ್ಗೆ ಎಚ್ಚರ ವಹಿಸಿ. ಹಿರಿಯ ಅಧಿಕಾರಿಗಳಿಂದ ಉದ್ಯೋಗದಲ್ಲಿ ನಿಮಗೆ ಸಹಕಾರ ಸಿಗುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲವು ಕೆಲಸಗಳು ಈಗ ಪುನರಾರಂಭ ಆಗುತ್ತವೆ. ಒಳ್ಳೆಯ ಕೆಲಸಗಳಿಗೆ ಹಿರಿಯರ ಸಹಕಾರ ಸದಾ ಸಿಗುತ್ತದೆ. ಕುಟುಂಬ ಸಮೇತ ದೂರ ಪ್ರಯಾಣದ ಸಾಧ್ಯತೆ ಇದೆ. ನಿಂತಿದ್ದ ಗೃಹನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತವೆ. ಬಟ್ಟೆ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಲಾಭವಿರುತ್ತದೆ. ಕೆಲವರಿಗೆ ಆಸ್ತಿ ಖರೀದಿಯ ಸಾಧ್ಯತೆ ಇದೆ. ಆದರೆ ದಾಖಲೆಯ ಪರಿಶೀಲನೆ ಅತ್ಯಗತ್ಯ. ನಿಮ್ಮ ಪರಾಕ್ರಮದ ಮಾತುಗಳಿಗೆ ಶತ್ರುಗಳು ಅಂಜುವರು. ಮನೆಯ ಪಾಠ ಮಾಡುವವರಿಗೆ ಆದಾಯವು ವೃದ್ಧಿಸುತ್ತದೆ. ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಈಗ ಸಕಾಲ. ಒತ್ತಡದ ಜೀವನದಿಂದ ಹೊರಗೆ ಬಂದು ಸಂತೋಷಿಸುವಿರಿ. ಕೈಲಾಗದವರಿಗೆ ಸಹಾಯ ಮಾಡಿ ಆನಂದಪಡುವಿರಿ. ಮಕ್ಕಳ ಪ್ರಗತಿಯ ಬಗ್ಗೆ ಸ್ವಲ್ಪ ಚಿಂತೆ ಇರುತ್ತದೆ. ನ್ಯಾಯಾಲಯದಲ್ಲಿನ ಕಟ್ಟಳೆಗಳಲ್ಲಿ ಯಶಸ್ಸು ದೊರೆಯುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸಾಧಾರಣ ಆದಾಯ ಇರುತ್ತದೆ. ಗೃಹ ನಿರ್ಮಾಣದ ವೇಳೆ ನೆರೆಹೊರೆಯವರ ಕಿರಿಕಿರಿ ಎದುರಿಸ ಬೇಕಾಗಬಹುದು. ಉದ್ಯೋಗದಲ್ಲಿರುವವರಿಗೆ ಬರಬೇಕಾಗಿದ್ದ ಬಾಕಿ ಹಣಗಳು ಬರಲಾರಂಭಿಸುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ಆದಾಯ ವೃದ್ಧಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.