ಮಿಲಾದೆ ಮುಸ್ತಫಾ ಸಮ್ಮೇಳನ ನಾಳೆ

7

ಮಿಲಾದೆ ಮುಸ್ತಫಾ ಸಮ್ಮೇಳನ ನಾಳೆ

Published:
Updated:

ವಿಜಯಪುರ: ’ಜಮಾತೆ ಅಹಲೆ ಸುನ್ನತ ಕರ್ನಾಟಕ ಹಾಗೂ ಅಲ್‌ ಹಾಶ್ಮಿ ಯೂತ್‌ ವಿಂಗ್‌ ವತಿಯಿಂದ ಫೆ 9ರಂದು ಸಂಜೆ 4.30ಕ್ಕೆ ಇಲ್ಲಿನ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ‘ಮಿಲಾದೆ ಮುಸ್ತಫಾ ಸಮ್ಮೇಳನ’ ಹಮ್ಮಿಕೊಳ್ಳಲಾಗಿದೆ’ ಎಂದು ಜಮಾತೆ ಅಹಲೆ ಸುನ್ನತ ಕರ್ನಾಟಕ ಅಧ್ಯಕ್ಷ ಸೈಯದ್‌ ಮೊಹಮ್ಮದ್ ತನ್ವೀರ್‌ ಹಾಶ್ಮಿ ಹೇಳಿದರು.

‘ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಪ್ರವಾದಿ ಮೊಹಮ್ಮದ್‌ ಪೈಗಂಬರ ಸಲ್ಲಾಹು ಅಲೈ ಹಿ ವ ಸಲ್ಲಮ್‌ ಜನ್ಮ ದಿನದ ಅಂಗವಾಗಿ ಸಮ್ಮೇಳನ ಆಯೋಜಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನೀರಿಕ್ಷೆಯಿದೆ’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಗತ್ತಿನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ಅತ್ಯಾಚಾರ, ಜಾತಿ ಬಣ್ಣಗಳ ಭೇದ–ಭಾವ, ಧರ್ಮದ ಹೆಸರಿನಲ್ಲಿ ಮಾನವರ ಮಾರಣಹೋಮ ಎಲ್ಲವೂ ಇಸ್ಲಾಂ ಧರ್ಮದ ವಿರುದ್ಧವಾಗಿವೆ. ಸಮ್ಮೇಳನ ಮೂಲಕ ಮೊಹಮ್ಮದ್ ಪೈಗಂಬರ್‌ ಸಲ್ಲಾಹು ಅಲೈ ಹಿ ವ ಸಲ್ಲಂ ಅವರು ಹಾಕಿ ಕೊಟ್ಟಿರುವ ಶಾಂತಿಯ ಮಾರ್ಗ, ಮಾನವ ಕಲ್ಯಾಣಕ್ಕಾಗಿ ಹೇಳಿದ ಸಂದೇಶಗಳನ್ನು ಚರ್ಚಿಸಲಾಗುವುದು’ ಎಂದು ಹೇಳಿದರು.

ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಶ್ರೀನಾಥ ಪೂಜಾರಿ, ಶಬ್ಬೀರ್‌ ಜಹಾಗೀರದಾರ್‌, ಇರ್ಫಾನ್‌ ಶೇಖ್‌, ತಾಜುದ್ದೀನ್‌ ಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !