ಕೋರಿಯರ್ ಏಜೆನ್ಸಿ ಮಾಲೀಕ ಬಂಧನ

7

ಕೋರಿಯರ್ ಏಜೆನ್ಸಿ ಮಾಲೀಕ ಬಂಧನ

Published:
Updated:
Deccan Herald

ಬೆಂಗಳೂರು:‌ ಗ್ರಾಹಕರು ನೀಡುತ್ತಿದ್ದ ಪಾರ್ಸಲ್‌ಗಳನ್ನೇ ಕದ್ದು, ಅವುಗಳನ್ನು ವಾಪಸ್ ಮರಳಿಸಲು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದಡಿ ‘ನಿಖಿಲ್ ಪ್ಯಾಕರ್ಸ್ ಅಂಡ್ ಮೂವರ್ಸ್‌’ ಏಜೆನ್ಸಿ ಮಾಲೀಕ ಅಮಿತ್ ಶರ್ಮಾನನ್ನು (24) ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಆರೋಪಿ, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಯಶವಂತಪುರದಲ್ಲಿ ಏಜೆನ್ಸಿ ಆರಂಭಿಸಿದ್ದ. ಆತನಿಂದ ಗೃಹೋಪಯೋಗಿ ವಸ್ತುಗಳಿದ್ದ ಏಳು ಬಾಕ್ಸ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಗ್ರಾಹಕರು, ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಪಾರ್ಸಲ್‌ ಕಳುಹಿಸಲು ಆರೋಪಿಯ ಏಜೆನ್ಸಿಗೆ ಕೊಡುತ್ತಿದ್ದರು. ಕೆಲವು ಪಾರ್ಸಲ್‌ಗಳನ್ನು ಮಾತ್ರ ನಿಗದಿತ ವಿಳಾಸಕ್ಕೆ ತಲುಪಿಸುತ್ತಿದ್ದ ಆರೋಪಿ, ಉಳಿದವುಗಳನ್ನು ಮುಚ್ಚಿಟ್ಟುಕೊಳ್ಳುತ್ತಿದ್ದ. ಆ ಬಗ್ಗೆ ಗ್ರಾಹಕರು ವಿಚಾರಿಸಿದಾಗ, ‘ನಿಮ್ಮ ಪಾರ್ಸಲ್ ಬೇಕಾದರೆ ನಾನು ಕೇಳಿದಷ್ಟು ಹಣ ಕೊಡಿ’ ಎನ್ನುತ್ತಿದ್ದ. ಇದೇ ರೀತಿಯಾಗಿ ಆತ, 20ಕ್ಕೂ ಹೆಚ್ಚು ಗ್ರಾಹಕರಿಗೆ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

‘ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಕುಮಾರ್ ಬ್ರಿಜೇಶ್, ಗೃಹೋಪಯೋಗಿ ವಸ್ತುಗಳ 11 ಬಾಕ್ಸ್‌ಗಳನ್ನು ಕಾನ್ಪುರಕ್ಕೆ ಕಳುಹಿಸಲು ಏಜೆನ್ಸಿಗೆ ನೀಡಿದ್ದರು. 8 ಬಾಕ್ಸ್‌ಗಳನ್ನು ಮಾತ್ರ ನಿಗದಿತ ವಿಳಾಸಕ್ಕೆ ತಲುಪಿಸಿದ್ದ ಆರೋಪಿ, 3 ಬಾಕ್ಸ್ ಕದ್ದಿದ್ದ. ಅದನ್ನು ವಾಪಸ್‌ ಕೇಳಿದ್ದಕ್ಕೆ ಸಾವಿರಾರು ರೂಪಾಯಿ ಕೇಳಿದ್ದ. ಆ ಬಗ್ಗೆ ಬ್ರಿಜೇಶ್ ದೂರು ನೀಡಿದ್ದರು’ ಎಂದರು.   

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !