ಹೀಟರ್‌ನಿಂದ ಮೈ ಸುಟ್ಟು, ಹೊಡೆದರು

7
ಮುಂದುವರಿದ ಆಫ್ರಿಕಾ ಪ್ರಜೆಗಳ ರಂಪಾಟ

ಹೀಟರ್‌ನಿಂದ ಮೈ ಸುಟ್ಟು, ಹೊಡೆದರು

Published:
Updated:
Prajavani

ಬೆಂಗಳೂರು: ನಗರದ ಹೆಣ್ಣೂರು ಹಾಗೂ ಬಾಗಲೂರಿನಲ್ಲಿ ಆಫ್ರಿಕಾ ಪ್ರಜೆಗಳ ಎರಡು ಗುಂಪುಗಳು ಸಾರ್ವಜನಿಕವಾಗಿ ಬಡಿದಾಡಿಕೊಂಡು ಜೈಲು ಪಾಲಾಗಿವೆ.

ಆಫ್ರಿಕಾ ಪ‍್ರಜೆ ಇಮಾನ್ಯುಲ್ ಲೊಂಜಾ ಎಂಬಾತನನ್ನು ಕೊಲೆ ಮಾಡಲು ಯತ್ನಿಸಿದ್ದ ಆರೋಪದಡಿ, ಸ್ನೇಹಿತರಾದ ಆಫ್ರಿಕಾದ ಮೈಕಲ್ ಹಾಗೂ ರಾಬರ್ಟ್ ಓಸರೋ ಎಂಬುವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಇನ್ನೊಬ್ಬ ಪ್ರಜೆ ಜೇಮ್ಸ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಇಮಾನ್ಯುಲ್ ಲೊಂಜಾನನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆಗಿದ್ದೇನು: ಹೆಣ್ಣೂರು ಬಳಿಯ ಕಿಂಗಸ್ಟನ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಲೊಂಜಾ ನೆಲೆಸಿದ್ದ. ಆತನ ಸ್ನೇಹಿತ ಹಾಗೂ ಜೇಮ್ಸ್‌ ನಡುವೆ ಹಣಕಾಸಿನ ವಿಚಾರವಾಗಿ ಬಿದರಹಳ್ಳಿ ಸಮೀಪ ಬುಧವಾರ ಗಲಾಟೆ ಆಗಿತ್ತು. ಮಧ್ಯೆ ಪ್ರವೇಶಿಸಿದ್ದ ಲೊಂಜಾ, ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದ.

ಅದೇ ಕೋಪದಲ್ಲೇ ಗುರುವಾರ ಬೆಳಿಗ್ಗೆ ಲೊಂಜಾ ಮನೆಗೆ ನುಗ್ಗಿದ್ದ ಜೇಮ್ಸ್ ಹಾಗೂ ಆತನ ಸ್ನೇಹಿತರು, ಹಲ್ಲೆ ಮಾಡಿದ್ದರು. ನೀರು ಕಾಯಿಸುವ ಹೀಟರ್‌ನ ವೈರ್ ಅನ್ನು ಕುತ್ತಿಗೆಗೆ ಬಿಗಿದು, ಹೀಟರ್‌ನಿಂದ ಮೈ ಸುಟ್ಟಿದ್ದರು.  ಬಿಯರ್ ಬಾಟಲ್‌ನಿಂದ ತಲೆಗೆ ಹೊಡೆದಿದ್ದರು.

ಲೊಂಜಾನನ್ನು ಕಾರಿಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದರು. ರಸ್ತೆ ಮಧ್ಯೆ ಡೀಸೆಲ್ ಖಾಲಿಯಾಗಿದ್ದರಿಂದ, ಪೆಟ್ರೋಲ್ ಬಂಕ್‌ಗೆ ಹೋಗಿದ್ದರು. ಬಂಕ್ ಸಿಬ್ಬಂದಿಯನ್ನು ಕಂಡ ಲೊಂಜಾ, ಸಹಾಯಕ್ಕಾಗಿ ಕೂಗಾಡಿದ್ದ. ಸಿಬ್ಬಂದಿ ರಕ್ಷಣೆಗೆ ಹೋಗು
ತ್ತಿದ್ದಂತೆ ಆರೋಪಿಗಳು, ಲೊಂಜಾನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ನಂತರವೇ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !