ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ಬಾರದ ಗಣ್ಯರು

7

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ಬಾರದ ಗಣ್ಯರು

Published:
Updated:

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

ಪ್ರೇಮಲತಾ ದಿವಾಕರ ಶಾಸ್ತ್ರಿ ಮತ್ತು ತಂಡದವರಿಂದ ದೇಶಭಕ್ತಿ ಹಾಗೂ ಸುಗಮ ಸಂಗೀತ, ಶಿವಮೊಗ್ಗದ ಗಣೇಶ್ ದೇಸಾಯಿ ಮತ್ತು ತಂಡದಿಂದ ಜನಪದ ಗೀತೆ, ನಗರದ ಪದ್ಮಿನಿ ಅಚ್ಚಿ ಮತ್ತು ತಂಡದಿಂದ ನೃತ್ಯ ರೂಪಕ, ಬೆಂಗಳೂರು ಗ್ರಾಮಾಂತರದ ರವಿತೇಜ್ ನಾಗ್ ಮತ್ತು ತಂಡದವರಿಂದ ಡೊಳ್ಳು ಕುಣಿತ ಪ್ರದರ್ಶಿಸಲಾಯಿತು.

ಮಂಡ್ಯದ ಕೆ.ಎಂ. ನಾಗೇಶ್ ಮತ್ತು ತಂಡದಿಂದ ಪೂಜಾ ಕುಣಿತ, ಚಾಮರಾಜನಗರದ ಬಾಲು ಮತ್ತು ತಂಡದಿಂದ ಗೊರವರ ಕುಣಿತ, ಮೂಡುಬಿದರೆ ಲೀಲಾಧರ ಮತ್ತು ತಂಡದಿಂದ ಕಂಗೀಲು ನೃತ್ಯ, ವಿಜಯಪುರದ ಹುಚ್ಚಪ್ಪ ಮಾದಾರ ಮತ್ತು ತಂಡದಿಂದ ಕೀಲು ಕುದುರೆ ಹಾಗೂ ಚಿತ್ರದುರ್ಗದ ಶ್ರೀನಿವಾಸ ಮತ್ತು ತಂಡದಿಂದ ನಡೆದ ಗಾರುಡಿ ಗೊಂಬೆ ಪ್ರದರ್ಶನ ನೋಡುಗರ ಮನಗೆದ್ದಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಇದ್ದರು.

ಬಾರದು ಗಣ್ಯರು: ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಭಾಗಿಯಾಗಬೇಕಿದ್ದ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಂಬಂಧಿಸಿದ ಇಲಾಖೆಯ ಸಚಿವರು ಬಾರದೇ ಹೋದದ್ದು ವಿಶೇಷವಾಗಿತ್ತು. ಮಳೆಯ ಕಾರಣ ಜನರೂ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !