ದಲೈಲಾಮಾ ಉತ್ತರಾಧಿಕಾರಿ ಅನುಮೋದನೆ ಅಗತ್ಯ: ಚೀನಾ

ಸೋಮವಾರ, ಏಪ್ರಿಲ್ 22, 2019
29 °C

ದಲೈಲಾಮಾ ಉತ್ತರಾಧಿಕಾರಿ ಅನುಮೋದನೆ ಅಗತ್ಯ: ಚೀನಾ

Published:
Updated:
Prajavani

ಬೀಜಿಂಗ್‌: ‘ನನ್ನ ಉತ್ತರಾಧಿಕಾರಿ ಅವತಾರ ಭಾರತದಲ್ಲಿಯೇ ಆಗಬಹುದು’ ಎಂಬ ಬೌದ್ಧ ಧರ್ಮಗುರು ದಲೈಲಾಮಾ ಅವರ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

‘ಟಿಬೆಟ್‌ನ ಬೌದ್ಧ ಧರ್ಮದ ಗುರುವಿನ ಸ್ಥಾನಕ್ಕೇರುವ ವ್ಯಕ್ತಿಗೆ ಚೀನಾದಲ್ಲಿನ ಕಮ್ಯುನಿಸ್ಟ್‌ ಸರ್ಕಾರದ ಅನುಮೋದನೆ ಅಗತ್ಯ’ ಎಂದು ಚೀನಾ ಮಂಗಳವಾರ ಕಟುವಾಗಿ ಹೇಳಿದೆ.

‘ನನ್ನ ಅವಸಾನದ ನಂತರ ನನ್ನ ಪುನರಾವತಾರ ಭಾರತದಲ್ಲಿಯೇ ಆಗಲಿದೆ. ಒಂದು ವೇಳೆ ಚೀನಾ ನನ್ನ ಉತ್ತರಾಧಿಕಾರಿಯನ್ನು ಘೋಷಿಸಿದರೂ ಆ ವ್ಯಕ್ತಿಗೆ ಗೌರವ ಸಿಗದು’ ಎಂದು ದಲೈಲಾಮಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದರು.

‘ಟಿಬೆಟನ್‌ ಬೌದ್ಧ ಧರ್ಮದಲ್ಲಿ ಅವತಾರ ಎತ್ತುವ ಮೂಲಕವೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ವಿಶಿಷ್ಟ ಪದ್ಧತಿ ಇದೆ. ಈ ಪ್ರಕ್ರಿಯೆ ನಿರ್ದಿಷ್ಟ ವಿಧಿಗಳ ಮೂಲಕವೇ ನೆರವೇರುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್‌ ತಿಳಿಸಿದ್ದಾರೆ.

‘ಧಾರ್ಮಿಕ ಸ್ವಾತಂತ್ರ್ಯ ಕುರಿತಂತೆ ಚೀನಾ ನೀತಿಯನ್ನು ಹೊಂದಿದ್ದು, ಧಾರ್ಮಿಕ ವಿಷಯಗಳು, ಅವತಾರ ತಾಳುವುದಕ್ಕೆ ಸಂಬಂಧಿಸಿದಂತೆ ನಮ್ಮದೇ ಆದ ನಿಯಮಗಳಿವೆ. ಈ ನಿಯಮಗಳ ಪ್ರಕಾರವೇ ಉತ್ತರಾಧಿಕಾರಿ ನೇಮಕ ನಡೆಯಲಿದೆ. ಟಿಬೆಟನ್‌ ಬೌದ್ಧಧರ್ಮವನ್ನು ಗೌರವಿಸುವ ಜೊತೆಗೆ, ಅದು ಪಾಲಿಸುವ ಆಚರಣೆಗಳನ್ನು ನಾವು ಗೌರವಿಸುತ್ತೇವೆ’ ಎಂದು ಜೆಂಗ್‌ ತಿಳಿಸಿದ್ದಾರೆ.

ದಲೈಲಾಮಾ ಅವರು 1935ರಲ್ಲಿ ಜನಿಸಿದ್ದಾರೆ. ದಲೈಲಾಮಾ 2 ವರ್ಷದವರಾಗಿದ್ದಾಗ, ಅವರನ್ನು ತಮ್ಮ ಅವತಾರ ಎಂದು ಆಗಿನ ದಲೈಲಾಮಾ ಗುರುತಿಸಿ, ಘೋಷಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !