ಅಮಾನತು ಭೀತಿ ಕಾಡಿತ್ತು: ರೂಪಾ

7
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮಗಳ ದಿನಾಚರಣೆ

ಅಮಾನತು ಭೀತಿ ಕಾಡಿತ್ತು: ರೂಪಾ

Published:
Updated:

ಬೆಂಗಳೂರು: ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಹೊರಗೆಡವಿದಾಗ ಅಮಾನತು ಭೀತಿ ಕಾಡಿತ್ತು ಎಂದು ಗೃಹರಕ್ಷಕ ದಳದ ಐಜಿಪಿ  ಡಿ.ರೂಪಾ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮಗಳ ದಿನಾಚರಣೆಯಲ್ಲಿ ಮಾತನಾಡಿದರು.

‘ಮಹಿಳೆಯರಿಗೆ ಧೈರ್ಯ ಮತ್ತು ಕ್ಷಮತೆ ಅತೀ ಮುಖ್ಯ. ನಿರ್ದಿಷ್ಟ ಗುರಿಯೊಂದಿಗೆ ಮುನ್ನುಗ್ಗಿದರೆ ಯಾವುದೇ ಅಡೆತಡೆಗಳು ಬಾಧಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಸಮಚಿತ್ತವೇ ನಿಜವಾದ ಸಂತೋಷ. ಸೋಲಿನ ರುಚಿಯನ್ನು ಉಂಡವರು ಮಾತ್ರ ಗೆಲುವಿನ ನಿಜವಾದ ಸವಿಯನ್ನು ಸವಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾ ಶೇಖರ್ ಮಾತನಾಡಿ, ‘ಭಾರತೀಯ ಜನಪದ ಪರಂಪರೆಯಲ್ಲಿ ಗಂಡನ್ನು ಹೆಣ್ಣಿಗಿಂತ ಹೆಚ್ಚೆಂದು ಬಿಂಬಿಸಲಾಗಿದೆ. ಹೆಣ್ಣು ಮಕ್ಕಳು ದುರ್ಬಲರಲ್ಲ. ಎಲ್ಲಾ ರಂಗಗಳಲ್ಲೂ ಗಂಡಿಗೆ ಸರಿ ಸಮನಾಗಿ ಸಾಧನೆಯನ್ನು ಮೆರೆಯುವ ಮೂಲಕ ಎಲ್ಲಾ ಬೂಟಾಟಿಕೆಯ ವಾದಗಳನ್ನು ಮೆಟ್ಟಿ ನಿಂತಿದ್ದಾಳೆ’ ಎಂದು ಹೇಳಿದರು.

ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ‘ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ಸರ್ಮರ್ಥವಾಗಿ ನಿರ್ವಹಿಸುವ ಚಾಕಚಾಕ್ಯತೆ ಇದ್ದರೆ ಅದು ಹೆಣ್ಣಿಗೆ ಮಾತ್ರ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !