ಫೀನಿಕ್ಸ್‌ ಮಾರ್ಕೆಟ್ ಸಿಟಿಯಲ್ಲಿ ದೀಪಾವಳಿ ಹಬ್ಬದ ಸಡಗರ

7

ಫೀನಿಕ್ಸ್‌ ಮಾರ್ಕೆಟ್ ಸಿಟಿಯಲ್ಲಿ ದೀಪಾವಳಿ ಹಬ್ಬದ ಸಡಗರ

Published:
Updated:

ವೈಟ್‌ಫೀಲ್ಡ್‌ ಬಳಿಯ ಫೀನಿಕ್ಸ್ ಮಾರ್ಕೆಟ್‌ ಸಿಟಿ ಮಾಲ್‌ ‘ಫೀನಿಕ್ಸ್ ಫೆಸ್ಟಿವಲ್ ಸೀಸನ್–2’ ಹೆಸರಿನಲ್ಲಿ ದೀಪಾವಳಿಯನ್ನು ವಿನೂತನವಾಗಿ ಆಚರಿಸುತ್ತಿದೆ. ಇದು 90 ದಿನಗಳ ಸಂಭ್ರಮವಾಗಿದ್ದು, ಮುಂದಿನ 45 ದಿನಗಳವರೆಗೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಮೈಸೂರಿನ ಅರಮನೆ ನೆನಪಿಸುವಂತೆ ಮಾಲ್‌ನ ಮುಖ್ಯ ದ್ವಾರವನ್ನು ಸಿದ್ಧಪಡಿಸಿ, ಅದಕ್ಕೆ ಬೆಳಕಿನ ಚಿತ್ತಾರದ ‘ರಾಯಲ್ ಲುಕ್’ ನೀಡಲಾಗಿದೆ.

ಅರಮನೆಯ ಮಾದರಿಯ ದೀಪಾಲಂಕಾರ ಕ್ಕಾಗಿ 25ಕ್ಕೂ ಹೆಚ್ಚಿನ ಕಲಾವಿದರು 2 ತಿಂಗಳು ಶ್ರಮಿಸಿದ್ದಾರೆ. ಈ ಮುಖ್ಯ ದ್ವಾರದ ಒಳಗೆ ಕಾಲಿಡುತ್ತಿದ್ದಂತೆಯೇ ಗ್ರಾಹಕರಿಗೆ ರಾಜ ವೈಭೋಗ ನೆನಪಾಗುವಂತೆ ರೂಪಿಸಲಾಗಿದೆ. 

ಹಬ್ಬದ ಪ್ರಯುಕ್ತ ‘ಫ್ಯಾಷನ್ ವಾಕ್’ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಗಳಿಂದ ಬರುವ ರೂಪದರ್ಶಿಯರು ವಿವಿಧ ರೀತಿಯ ವಸ್ತ್ರಾಭರಣಗಳನ್ನು ತೊಟ್ಟು ಮೆರಗು ತುಂಬಲಿದ್ದಾರೆ. ರುಚಿಕರವಾದ ತಿಂಡಿ ತಿನಿಸುಗಳು, ಟ್ರೆಂಡಿ ಫ್ಯಾಷನ್ ವಸ್ತ್ರಾಭರಣ ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !