ಕಿಮ್‌ ಗೆಲುವು ಖಚಿತವಿದ್ದರೂ ಉ. ಕೊರಿಯಾದಲ್ಲಿ ಚುನಾವಣೆ

ಬುಧವಾರ, ಮಾರ್ಚ್ 27, 2019
26 °C

ಕಿಮ್‌ ಗೆಲುವು ಖಚಿತವಿದ್ದರೂ ಉ. ಕೊರಿಯಾದಲ್ಲಿ ಚುನಾವಣೆ

Published:
Updated:
Prajavani

ಪಾಂಗ್‌ಯಾಂಗ್: ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೇ ಗೆಲ್ಲುವುದು ಎಂದು ಬಹುತೇಕ ಖಚಿತವಿದ್ದರೂ, ಭಾನುವಾರ ಸಾರ್ವತ್ರಿಕ ಚುನಾವಣೆ ನಡೆಸಲಾಗಿದೆ. 

ಕಿಮ್ ಅವರ ವರ್ಕರ್ಸ್ ಪಕ್ಷ ರಾಷ್ಟ್ರದ ಮೇಲೆ ಬಿಗಿ ಹಿಡಿತ ಹೊಂದಿದ್ದರೂ, ಐದು ವರ್ಷಕ್ಕೊಮ್ಮೆ ಶಿಷ್ಟಾಚಾರದ ಸಲುವಾಗಿ ‘ಸುಪ್ರೀಂ ಪೀಪಲ್ಸ್ ಅಸೆಂಬ್ಲಿ’ ಚುನಾವಣೆ ನಡೆಸಲಾಗುತ್ತದೆ. 

ಈ ಚುನಾವಣೆಯಲ್ಲಿ ಸ್ಪರ್ಧೆಯೇ ಇರುವುದಿಲ್ಲ. ಏಕೆಂದರೆ  ‘ಒಮ್ಮನಸ್ಸಿನ ಒಗ್ಗಟ್ಟು’ ಎನ್ನುವ ಉ.ಕೊರಿಯಾದ ಪ್ರಸಿದ್ಧ ಘೋಷವಾಕ್ಯಕ್ಕೆ ತಕ್ಕನಾಗಿ ಮತಪತ್ರದ ಮೇಲೆ ಕೇವಲ ಒಂದು ಹೆಸರು ಇರುತ್ತದೆ.

ಮತದಾರರು ಮತ ಚಲಾಯಿಸುವ ಮೊದಲು ಈ ಹೆಸರು ಹೊಡೆದುಹಾಕಲು ಅವಕಾಶವಿದೆ. ಆದರೆ ಸಾಮಾನ್ಯವಾಗಿ ಯಾರೂ ಈ ರೀತಿ ಮಾಡುವುದಿಲ್ಲ. 

ಸಾಮಾನ್ಯವಾಗಿ ಉ.ಕೊರಿಯಾ ಜನರು ವಿದೇಶಿ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಸದಾ ತಮ್ಮ ಆಡಳಿತ ವ್ಯವಸ್ಥೆಯೇ ಅತ್ಯುತ್ತಮ ಎಂದು ಹೇಳುತ್ತಾರೆ. 

ವಿವಿಧ ಅಭ್ಯರ್ಥಿಗಳು ಸ್ಪರ್ಧಿಸುವ ಹಾಗೂ ಮತಪತ್ರದ ಮೇಲೆ ವಿವಿಧ ಹೆಸರುಗಳು ಇರುವ ಚುನಾವಣೆ ಕುರಿತು ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ, ‘ನಮ್ಮ ಸರ್ವೋಚ್ಚ ನಾಯಕರ ಹೊರತಾಗಿ ಬೇರೆ ಯಾರನ್ನೂ ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಸಮಾಜವಾದಿ ಮಹಿಳೆಯರ ಒಕ್ಕೂಟದ ಅಧಿಕಾರಿ ಸಾಂಗ್ ಯಾಂಗ್ ರ್‍ಯಾನ್ ಪ್ರತಿಕ್ರಿಯಿಸುತ್ತಾರೆ. 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !