ಶನಿವಾರ, 24 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಕೀವ್‌ ಮೇಲೆ ರಷ್ಯಾ ದಾಳಿ: ಒಬ್ಬ ಸಾವು

Drone Attack Ukraine: ಉಕ್ರೇನ್‌, ರಷ್ಯಾ ಮತ್ತು ಅಮೆರಿಕ ಮಾತುಕತೆಯಲ್ಲಿ ನಿರತರಾಗಿರುವಾಗ, ಕೀವ್ ಮತ್ತು ಖಾರ್ಕಿವ್‌ ಮೇಲೆ ನಡೆದ ರಷ್ಯಾ ಸೇನೆಯ ಡ್ರೋನ್ ದಾಳಿಯಲ್ಲಿ ಒಬ್ಬ ಸಾವು, 23 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜನವರಿ 2026, 15:46 IST
ಕೀವ್‌ ಮೇಲೆ ರಷ್ಯಾ ದಾಳಿ: ಒಬ್ಬ ಸಾವು

ನ್ಯಾಟೊ ಕುರಿತ ಟ್ರಂಪ್‌ ಹೇಳಿಕೆ ಒಪ್ಪಲಾಗದು: ಡೆನ್ಮಾರ್ಕ್

Trump NATO Remarks: ನ್ಯಾಟೊ ಮಿತ್ರರ ರಾಷ್ಟ್ರಗಳು ಹಿಂದೆ ಸರಿದಿದ್ದವೆಂಬ ಟ್ರಂಪ್‌ ಹೇಳಿಕೆಗೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ದೇಶದ ಮಾಜಿ ಸೈನಿಕರು ಮೌನ ಮೆರವಣಿಗೆಗೂ ಕರೆ ನೀಡಿದ್ದಾರೆ.
Last Updated 24 ಜನವರಿ 2026, 15:42 IST
ನ್ಯಾಟೊ ಕುರಿತ ಟ್ರಂಪ್‌ ಹೇಳಿಕೆ ಒಪ್ಪಲಾಗದು: ಡೆನ್ಮಾರ್ಕ್

ಹಿಮಪಾತ, ಮಳೆ: ಅಫ್ಗಾನಿಸ್ತಾನದಲ್ಲಿ 61 ಸಾವು

Weather Disaster: ಕಳೆದ ಮೂರು ದಿನಗಳ ಹಿಮಪಾತ ಮತ್ತು ಮಳೆಯಿಂದಾಗಿ ಅಫ್ಗಾನಿಸ್ತಾನದಲ್ಲಿ 61 ಮಂದಿ ಸಾವಿಗೀಡಾಗಿದ್ದು, 110 ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
Last Updated 24 ಜನವರಿ 2026, 15:41 IST
ಹಿಮಪಾತ, ಮಳೆ: ಅಫ್ಗಾನಿಸ್ತಾನದಲ್ಲಿ 61 ಸಾವು

ಸ್ವಪ‍ಕ್ಷಕ್ಕೆ ದಂಡ ವಿಧಿಸಿದ ಬಿಜೆ‍ಪಿ ಆಡಳಿತದ ನಗರ ಪಾಲಿಕೆ

Trivandrum Municipal Corporation: ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದ ಜಾಹಿರಾತು ಫಲಕಗಳನ್ನು ಪಾದಚಾರಿ ರಸ್ತೆಗಳಲ್ಲಿ ಅಳವಡಿಸಿದ್ದ ಬಿಜೆಪಿಗೆ ತನ್ನದೇ ಆಡಳಿತವಿರುವ ತಿರುವನಂತಪುರ ನಗರ ಪಾಲಿಕೆಯು ದಂಡ ವಿಧಿಸಿ, ದೂರು ದಾಖಲಿಸಿದೆ.
Last Updated 24 ಜನವರಿ 2026, 15:05 IST
ಸ್ವಪ‍ಕ್ಷಕ್ಕೆ ದಂಡ ವಿಧಿಸಿದ ಬಿಜೆ‍ಪಿ ಆಡಳಿತದ ನಗರ ಪಾಲಿಕೆ

ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

All Party Meeting: ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಅಂಗವಾಗಿ ಶಾಸನಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಯಸೂಚಿಗಳ ಕುರಿತು ಚರ್ಚಿಸಲು ಸರ್ಕಾರ ಇದೇ 27ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಸಚಿವ ಕಿರಣ್ ರಿಜಿಜು ಅವರು ಸಭೆ ಕರೆದಿದ್ದಾರೆ.
Last Updated 24 ಜನವರಿ 2026, 15:04 IST
ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

ಸಲಹೆಗಾರರ ನೇಮಕ ಕಡ್ಡಾಯ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ

Student Counseling: ಕೋಟಾ: ಎಲ್ಲ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಮತ್ತು ವೃತ್ತಿ ಸಲಹೆಗಾರರ ನೇಮಕವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಕಡ್ಡಾಯಗೊಳಿಸಿದೆ. 500 ವಿದ್ಯಾರ್ಥಿಗಳಿಗೆ ತಲಾ ಒಬ್ಬರನ್ನು ನೇಮಿಸಿಕೊಳ್ಳುವಂತೆ ಸಿಬಿಎಸ್‌ಇ ಸುತ್ತೋಲೆಯಲ್ಲಿ ತಿಳಿಸಿದೆ.
Last Updated 24 ಜನವರಿ 2026, 15:02 IST
ಸಲಹೆಗಾರರ ನೇಮಕ ಕಡ್ಡಾಯ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ

ಪತ್ನಿ ಸೇರಿ ನಾಲ್ವರನ್ನು ಗುಂಡಿಕ್ಕಿ ಕೊಂದ ಪತಿ: ಅಮೆರಿಕದಲ್ಲಿ ಭಾರತೀಯನ ಕೃತ್ಯ

ಪತ್ನಿ ಹಾಗೂ ತನ್ನ ಮೂವರು ಸಂಬಂಧಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ ಭಾರತ ಮೂಲದ 51 ವರ್ಷ ವಿಜಯ್‌ ಕುಮಾರ್‌ ಅವರನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 24 ಜನವರಿ 2026, 15:02 IST
ಪತ್ನಿ ಸೇರಿ ನಾಲ್ವರನ್ನು ಗುಂಡಿಕ್ಕಿ ಕೊಂದ ಪತಿ: ಅಮೆರಿಕದಲ್ಲಿ ಭಾರತೀಯನ ಕೃತ್ಯ
ADVERTISEMENT

70 ಅಡಿ ಉದ್ದ, 10 ಟನ್‌ ತೂಕದ ಉಕ್ಕಿನ ಸೇತುವೆಯನ್ನೇ ಕದ್ದರು!

Chhattisgarh Bridge Theft: ಛತ್ತೀಸಗಢದ ಕೊರ್ಬಾ ನಗರದಲ್ಲಿ 4 ದಶಕಗಳ ಹಿಂದೆ ನಿರ್ಮಿಸಲಾಗಿದ್ದ, 10 ಟನ್‌ಗಿಂತ ಹೆಚ್ಚು ತೂಕವಿದ್ದ 70 ಅಡಿ ಉದ್ದದ ಉಕ್ಕಿನ ಸೇತುವೆಯನ್ನೇ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ.
Last Updated 24 ಜನವರಿ 2026, 14:51 IST
70 ಅಡಿ ಉದ್ದ, 10 ಟನ್‌ ತೂಕದ ಉಕ್ಕಿನ ಸೇತುವೆಯನ್ನೇ ಕದ್ದರು!

ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್‌

Stalin vs RN Ravi: ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲ ಆರ್‌.ಎನ್‌. ರವಿ ಅವರು ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಶನಿವಾರ ಆರೋಪಿಸಿದರು.
Last Updated 24 ಜನವರಿ 2026, 14:46 IST
ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್‌

ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿ ಹೆಚ್ಚಳ ಘೋಷಿಸಿದ ಸ್ಟಾಲಿನ್

Social Welfare Scheme: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಕಾರ್ಯದರ್ಶಿಗಳ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದರು.
Last Updated 24 ಜನವರಿ 2026, 14:23 IST
ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿ ಹೆಚ್ಚಳ ಘೋಷಿಸಿದ ಸ್ಟಾಲಿನ್
ADVERTISEMENT
ADVERTISEMENT
ADVERTISEMENT