ವಾಷಿಂಗ್ಟನ್/ನ್ಯೂಯಾರ್ಕ್: ಇರಾನ್ನಲ್ಲಿ ಸುಮಾರು 2,000 ಗುರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಒಂದು ಜಲಾಂತರ್ಗಾಮಿ ನೌಕೆ ಸೇರಿದಂತೆ 17 ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

ಈ ಕುರಿತು ಯುಎಸ್ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದ್ದು, ಅರೇಬಿಯನ್ ಕೊಲ್ಲಿ, ಒಮಾನ್ ಕೊಲ್ಲಿ ಅಥವಾ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ನ ಒಂದೇ ಒಂದು ಹಡಗು ಕಾರ್ಯಾಚರಿಸುತ್ತಿಲ್ಲ ಎಂದಿದೆ.
.ನಾವು ಮಾಡದಿದ್ದರೆ ಮೊದಲು ಇರಾನ್ ದಾಳಿ ನಡೆಸುವ ಸಾಧ್ಯತೆ ಇತ್ತು: ಟ್ರಂಪ್.ಆಳ– ಅಗಲ: ಇರಾನ್ಗೆ ದೂರ, ಇಸ್ರೇಲ್ಗೆ ಹತ್ತಿರ.
'ನಾವು ಈಗಾಗಲೇ ಇರಾನ್ನ 2,000 ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ. ಇರಾನ್ನ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದೇವೆ. ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿ, ಲಾಂಚರ್ ಹಾಗೂ ಡ್ರೋನ್ಗಳನ್ನು ನಾಶಪಡಿಸಿದ್ದೇವೆ' ಎಂದು ಯುಎಸ್ ಸೆಂಟ್ರಲ್ ಕಮಾಂಡ್ನ ಅಡ್ಮಿರಲ್ ಬ್ರಾಡ್ ಕೂಪರ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಮೊದಲ ದಿನದ ದಾಳಿಯು 2003ರಲ್ಲಿ ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಆಡಳಿತದ ಮೇಲಿನ ದಾಳಿಗಿಂತಲೂ ಎರಡು ಪಟ್ಟು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಗಣರಾಜ್ಯ ಇರಾನ್ ಮೇಲಿನ ಆಕ್ರಮಣ ಮುಂದುವರಿಯಲಿದೆ ಎಂದೂ ಅವರು ಖಚಿತಪಡಿಸಿದ್ದಾರೆ.

ಇರಾನ್ ಮೇಲಿನ ದಾಳಿಯಲ್ಲಿ ಸಾವಿನ ಸಂಖ್ಯೆ 787ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿವೆ. ಇದಕ್ಕೆ ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆ ಹಾಗೂ ಮೂಲಸೌಕರ್ಯಗಳನ್ನು ಗುರಿಯಾಸಿಕೊಂಡು ಇರಾನ್ ದಾಳಿಯನ್ನು ಮುಂದುವರಿಸಿದೆ.

ಇನ್ನು ಮಾತುಕತೆ ಇಲ್ಲ: ಟ್ರಂಪ್

'ಇರಾನ್ ಮೇಲಿನ ದಾಳಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ, ನೌಕಾಪಡೆ ಸೇರಿದಂತೆ ಬಹುತೇಕ ಎಲ್ಲವೂ ನಾಶವಾಗಿದೆ. ಎಲ್ಲವೂ ಕಳೆದುಕೊಂಡ ಬಳಿಕ ಇದೀಗ ಮಾತುಕತೆಗೆ ಬಯಸುತ್ತಿದೆ. ಆದರೆ ಕಾಲ ಮಿಂಚಿದ್ದು, ಯಾವುದೇ ಮಾತುಕತೆ ಇಲ್ಲ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತೈಲ ಸಾಗಣೆಗೆ ರಕ್ಷಣೆ: ಅಮೆರಿಕ

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಸಾಗಣೆಗೆ ತೀವ್ರ ಅಡಚಣೆ ಎದುರಾಗಿದೆ. ಇದರಿಂದಾಗಿ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಏತನ್ಮಧ್ಯೆ ಇರಾನ್ ಬೆದರಿಕೆಯ ನಡುವೆಯೂ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ಗಳನ್ನು ಸಾಗಿಸಲು ಹಾಗೂ ರಕ್ಷಣೆಯನ್ನು ಒದಗಿಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.